Applications invited for filling up non-teaching posts at Central Sanskrit University: Salary up to Rs. 2.18 lakh
x

ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯ

ಕೇಂದ್ರ ಸಂಸ್ಕೃತ ವಿವಿಯಲ್ಲಿ ಬೋಧಕೇತರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ: 2.18 ಲಕ್ಷ ರೂ. ವರೆಗೆ ವೇತನ

ಮಲ್ಟಿ-ಟಾಸ್ಕಿಂಗ್ ಹುದ್ದೆಗಳಿಗೆ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು. ಅಸಿಸ್ಟೆಂಟ್ ಹುದ್ದೆಗಳಿಗೆ ಯಾವುದೇ ಪದವಿ ಮತ್ತು ಕಂಪ್ಯೂಟರ್ ಟೈಪಿಂಗ್ ಜ್ಞಾನ ಹೊಂದಿರಬೇಕು.


Click the Play button to hear this message in audio format

ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದಡಿಯಲ್ಲಿ ಬರುವ ಪ್ರತಿಷ್ಠಿತ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ (CSU) ಖಾಲಿ ಇರುವ ವಿವಿಧ ಬೋಧಕೇತರ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ರಿಜಿಸ್ಟ್ರಾರ್‌ ಹುದ್ದೆಯಿಂದ ಹಿಡಿದು ಎಂಟಿಎಸ್ (MTS) ವರೆಗೆ ಒಟ್ಟು 144 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಏ.16 ಕೊನೆಯ ದಿನವಾಗಿದೆ.

ಹುದ್ದೆಗಳ ವಿವರ ಮತ್ತು ವೇತನ ಶ್ರೇಣಿ

ಈ ನೇಮಕಾತಿಯಲ್ಲಿ ಗ್ರೂಪ್ ‘ಎ’ ನಿಂದ ಗ್ರೂಪ್ ‘ಸಿ’ ವರೆಗಿನ ವಿವಿಧ ಹಂತದ ಹುದ್ದೆಗಳಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 18 ಸಾವಿರ ರೂ. ರಿಂದ 2.18 ಲಕ್ಷ ರೂ. ವರೆಗೆ ವೇತನ ದೊರೆಯಲಿದೆ. ರಿಜಿಸ್ಟ್ರಾರ್, ಅಸಿಸ್ಟೆಂಟ್ ರಿಜಿಸ್ಟ್ರಾರ್, ಸೆಕ್ಷನ್ ಆಫೀಸರ್, ನರ್ಸಿಂಗ್ ಆಫೀಸರ್, ಜೂನಿಯರ್ ಎಂಜಿನಿಯರ್ , ಅಸಿಸ್ಟೆಂಟ್, ಯುಡಿಸಿ , ಎಲ್‌ಡಿಸಿ , ಸ್ಟೆನೋಗ್ರಾಫರ್, ಮತ್ತು ಮಲ್ಟಿ-ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಲ್ಲಿ ಸಾಮಾನ್ಯ ವರ್ಗಕ್ಕೆ 84 ಹುದ್ದೆಗಳು, ಪರಿಶಿಷ್ಟ ಜಾತಿಗೆ ಎಸ್‌ಸಿ-16, ಎಸ್‌ಟಿ-7, ಒಬಿಸಿ-25, ಇಡಬ್ಲ್ಯೂಎಸ್-12).

ಶೈಕ್ಷಣಿಕ ಅರ್ಹತೆ

ಮಲ್ಟಿ-ಟಾಸ್ಕಿಂಗ್ ಹುದ್ದೆಗಳಿಗೆ ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು. ಅಸಿಸ್ಟೆಂಟ್ ಹುದ್ದೆಗಳಿಗೆ ಯಾವುದೇ ಪದವಿ ಮತ್ತು ಕಂಪ್ಯೂಟರ್ ಟೈಪಿಂಗ್ ಜ್ಞಾನ ಹೊಂದಿರಬೇಕು. ಜೂನಿಯರ್‌ ಎಂಜಿನಿಯರ್‌ ಅಥವಾ ನರ್ಸಿಂಗ್ ಹುದ್ದೆಗೆ ಸಂಬಂಧಪಟ್ಟ ವಿಷಯದಲ್ಲಿ ಡಿಪ್ಲೊಮಾ ಅಥವಾ ಬಿ.ಇ, ಬಿ.ಟೆಕ್‌ ಹಾಗೂ ಬಿ.ಎಸ್ಸಿ ಪದವಿ ಪಡೆದಿರಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಯೋಮಿತಿ ಸಡಿಲಿಕೆ

ರಿಜಿಸ್ಟ್ರಾರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 57 ವರ್ಷಕ್ಕಿಂತ ಕಡಿಮೆ ವಯೋಮಿತಿ ಹೊಂದಿರಬೇಕು. ಲೆವೆಲ್ 10 ಹುದ್ದೆಗಳಿಗೆ 40 ವರ್ಷಗಳು, ಲೆವೆಲ್ 6–7 ಹುದ್ದೆಗಳಿಗೆ 35 ವರ್ಷಗಳು ಹಾಗೂ ಲೆವೆಲ್ 1–5 ಹುದ್ದೆಗಳಿಗೆ 32 ವರ್ಷಗಳು ಗರಿಷ್ಠ ವಯೋಮಿತಿ ನಿಗದಿಪಡಿಸಿದ್ದು, ಸರ್ಕಾರದ ನಿಯಮದಂತೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ವಿನಾಯಿತಿ ನೀಡಲಾಗಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದೇಶದ ಪ್ರಮುಖ ನಗರಗಳಾದ ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ. ಟೈಪಿಂಗ್ ಮತ್ತು ಸ್ಟೆನೋಗ್ರಫಿ ಅಗತ್ಯವಿರುವ ಹುದ್ದೆಗಳಿಗೆ ಕೌಶಲ್ಯ ಪರೀಕ್ಷೆ ನಡೆಯಲಿದ್ದು, ಗ್ರೂಪ್ 'ಎ' ಹಂತದ ಹುದ್ದೆಗಳಿಗೆ ಲಿಖಿತ ಪರೀಕ್ಷೆಯ ನಂತರ ಸಂದರ್ಶನವಿರುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ?

ಆಸಕ್ತ ಅಭ್ಯರ್ಥಿಗಳು ಸಮರ್ಥ್ (Samarth) ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಏ.16 ಕೊನೆಯ ದಿನಾಂಕವಾಗಿದೆ. ಅರ್ಜಿ ಸಲ್ಲಿಸಿದ ನಂತರ, ಅದರ ಪ್ರತಿಯನ್ನು ಅಗತ್ಯ ದಾಖಲೆಗಳೊಂದಿಗೆ ವಿಶ್ವವಿದ್ಯಾಲಯದ ಕಚೇರಿಗೆ ಅಂಚೆ ಮೂಲಕ ಕಳುಹಿಸುವುದು ಕಡ್ಡಾಯವಾಗಿದೆ. ದೇಶಾದ್ಯಂತ ಇರುವ ಸಿಎಸ್‌ಯುನ 12 ಕ್ಯಾಂಪಸ್‌ಗಳಲ್ಲಿ ಅಭ್ಯರ್ಥಿಗಳಿಗೆ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಬಹುದಾಗಿದೆ. ಕೇಂದ್ರ ಸರ್ಕಾರದ ನೌಕರಿಯ ಜೊತೆಗೆ ಎನ್‌ಪಿಎಸ್‌, ವೈದ್ಯಕೀಯ ಸೌಲಭ್ಯ ಮತ್ತು ಭತ್ಯೆಗಳ ಲಾಭ ಪಡೆಯಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More
Next Story