Job News | There is an opportunity in Assam Rifles for dependents of defence families, complete information is here
x

ಅಸ್ಸಾಂ ರೈಫಲ್ಸ್‌ನ ಸೈನಿಕರು (ಸಾಂದರ್ಭಿಕ ಚಿತ್ರ)

Job News | ರಕ್ಷಣಾ ಕುಟುಂಬದ ಅವಲಂಬಿತರಿಗೆ ಅಸ್ಸಾಂ ರೈಫಲ್ಸ್‌ನಲ್ಲಿದೆ ಅವಕಾಶ, ಸಂಪೂರ್ಣ ಮಾಹಿತಿ ಇಲ್ಲಿದೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 25 ವರ್ಷಗಳು ಒಳಗೆ ಇರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ವಿನಾಯಿತಿ ನೀಡಲಾಗಿದೆ.


Click the Play button to hear this message in audio format

ಭಾರತದ ಅತ್ಯಂತ ಹಳೆಯ ಅರೆಸೈನಿಕ ಪಡೆಯಾದ ಅಸ್ಸಾಂ ರೈಫಲ್ಸ್ , ರಕ್ಷಣಾ ಕುಟುಂಬದ ಸದಸ್ಯರಿಗಾಗಿ ವಿಶೇಷ ನೇಮಕಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. 2026ನೇ ಸಾಲಿನ 'ಸಹಾನುಭೂತಿಯ ನೇಮಕಾತಿ' (Compassionate Ground Appointment) ಯೋಜನೆಯಡಿ ಒಟ್ಟು 117 ವಿವಿಧ ತಾಂತ್ರಿಕ ಮತ್ತು ಸಾಮಾನ್ಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಯಾರಿಗೆ ಸಿಗಲಿದೆ ಈ ಅವಕಾಶ?

ಈ ನೇಮಕಾತಿಯು ಕೇವಲ ಅಸ್ಸಾಂ ರೈಫಲ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಹುತಾತ್ಮರಾದ, ಸೇವೆಯಲ್ಲಿದ್ದಾಗಲೇ ಮರಣ ಹೊಂದಿದ, ವೈದ್ಯಕೀಯ ಕಾರಣಗಳಿಂದಾಗಿ ಬಿಡುಗಡೆ ಹೊಂದಿದ ಅಥವಾ ಕಾಣೆಯಾದ ಸಿಬ್ಬಂದಿಗಳ ಅರ್ಹ ಅವಲಂಬಿತರಿಗೆ (ಸಂಗಾತಿ, ಮಗ, ಮಗಳು) ಮಾತ್ರ ಸೀಮಿತವಾಗಿದೆ. ಪ್ರತಿ ಕುಟುಂಬದಿಂದ ಒಬ್ಬರಿಗೆ ಮಾತ್ರ ಈ ಅವಕಾಶ ಲಭ್ಯವಿರಲಿದೆ.

ಹುದ್ದೆಗಳ ವಿವರ

ಒಟ್ಟು 117 ಹುದ್ದೆಗಳಲ್ಲಿ ಪ್ರಮುಖವಾಗಿ, ರೈಫಲ್‌ಮ್ಯಾನ್ ಅಥವಾ ರೈಫಲ್‌ವುಮನ್ 95 ಹುದ್ದೆಗಳು, ವಾರಂಟ್ ಆಫೀಸರ್ ಸೈಫರ್‌ 6 ಹುದ್ದೆಗಳು, ಹವಲ್ದಾರ್ ಕ್ಲರ್ಕ್ 3 ಹುದ್ದೆಗಳು, ಎಲೆಕ್ಟ್ರಿಕಲ್ ಫಿಟ್ಟರ್, ಆರ್ಮರರ್, ಮೇಸನ್, ವೆಹಿಕಲ್ ಮೆಕ್ಯಾನಿಕ್ ಸೇರಿದಂತೆ ಇತರ ತಾಂತ್ರಿಕ ಹುದ್ದೆಗಳು ಸೇರಿದಂತೆ ಒಟ್ಟು 13 ಹುದ್ದೆಗಳನ್ನು ವಿಂಗಡಿಸಲಾಗಿದೆ.

ವಯೋಮಿತಿ ಮತ್ತು ಸಂಬಳ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 25 ವರ್ಷಗಳು ಒಳಗೆ ಇರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ವಿನಾಯಿತಿ ನೀಡಲಾಗಿದೆ. ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಅನ್ವಯ ಆಯಾ ಹುದ್ದೆಗಳಿಗೆ ಅನುಗುಣವಾಗಿ 21,700 ರಿಂದ 92,300 ರೂ. ವರೆಗೆ ಮೂಲ ವೇತನ ಇರಲಿದ್ದು, ಇದರೊಂದಿಗೆ ಪಡಿತರ, ವಸತಿ ಮತ್ತು ಅಪಾಯ ಭತ್ಯೆಗಳು ಸಿಗಲಿವೆ.

ಅರ್ಹತೆಗಳೇನು?

ರೈಫಲ್‌ಮ್ಯಾನ್ ಅಥವಾ ರೈಫಲ್‌ವುಮನ್‌ ಹುದ್ದೆಗೆ 10ನೇ ತರಗತಿ ಪಾಸಾಗಿರಬೇಕು. ಕ್ಲರ್ಕ್ ಹುದ್ದೆಗೆ 12ನೇ ತರಗತಿ ಪಾಸ್ ಮತ್ತು ಇಂಗ್ಲಿಷ್ ಅಥವಾ ಹಿಂದಿ ಟೈಪಿಂಗ್ ಕೌಶಲ್ಯ ಹೊಂದಿರಬೇಕು. ತಾಂತ್ರಿಕ ಹುದ್ದೆಗಳಿಗೆ 10ನೇ ತರಗತಿಯೊಂದಿಗೆ ಸಂಬಂಧಪಟ್ಟ ಟ್ರೇಡ್‌ನಲ್ಲಿ ITI ಪ್ರಮಾಣಪತ್ರ ಹೊಂದಿರುವುದು ಕಡ್ಡಾಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತರು ಆಫ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಅಧಿಕೃತ ವೆಬ್‌ಸೈಟ್ assamrifles.gov.in ನಿಂದ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಅಂಚೆ ಅಥವಾ ಇಮೇಲ್ ಮೂಲಕ ಡೈರೆಕ್ಟರೇಟ್ ಜನರಲ್ ಅಸ್ಸಾಂ ರೈಫಲ್ಸ್ (ನೇಮಕಾತಿ ಶಾಖೆ), ಲೈಟ್ಕೋರ್, ಶಿಲ್ಲಾಂಗ್, ಮೇಘಾಲಯ - 793010. ಇಮೇಲ್ ವಿಳಾಸ rectdrdgar@gmail.com ಈ ವಿಳಾಸಕ್ಕೆ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಮೇ 11 ಕೊನೆಯ ದಿನಾಂಕವಾಗಿದ್ದು, ಜುಲೈ ಅಥವಾ ಆಗಸ್ಟ್‌ನಲ್ಲಿ ನೇಮಕಾತಿ ರ್ಯಾಲಿ ನಡೆಯಲಿದ್ದು, ಸಾಮಾನ್ಯವರ್ಗದ ಅಭ್ಯರ್ಥಿಗಳು ಸೇರಿದಂತೆ ಯಾವುದೇ ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.

ಆಯ್ಕೆ ಪ್ರಕ್ರಿಯೆ

ದೈಹಿಕ ಸಾಮರ್ಥ್ಯ ಪರೀಕ್ಷೆ ,ಕೌಶಲ್ಯ ಪರೀಕ್ಷೆ ಮತ್ತು ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಸ್ಸಾಂ ರೈಫಲ್ಸ್ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Read More
Next Story