Muhammad Yunus: ಡಿಸೆಂಬರ್‌ ಒಳಗೆ ಬಾಂಗ್ಲಾದೇಶ ಚುನಾವಣೆ: ಮೊಹಮ್ಮದ್​ ಯೂನುಸ್​
x
ಮೊಹಮ್ಮದ್ ಯೂನುಸ್​.

Muhammad Yunus: ಡಿಸೆಂಬರ್‌ ಒಳಗೆ ಬಾಂಗ್ಲಾದೇಶ ಚುನಾವಣೆ: ಮೊಹಮ್ಮದ್​ ಯೂನುಸ್​

Muhammad Yunus: ಆಲಂಗೀರ್ ಅವರು ದೇಶದಾದ್ಯಂತ ನಡೆಯುತ್ತಿರುವ ಅರಾಜಕ ಪ್ರತಿಭಟನೆಗಳ ನಿಯಂತ್ರಣ ಮಾಡಲಾಗದ ಸರ್ಕಾರವನ್ನು ಟೀಕಿಸಿದರು.


ಡಾಕಾ: ಬಾಂಗ್ಲಾದೇಶದ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್, ಮುಂದಿನ ಡಿಸೆಂಬರ್ ಒಳಗೆ ಬಾಂಗ್ಲಾದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸುವುದಾಗಿ ಪ್ರಕಟಿಸಿದ್ದಾರೆ ಎಂಬುದಾಗಿ ಬಾಂಗ್ಲಾದೇಶ ನ್ಯಾಷನಲ್ ಪಾರ್ಟಿ ಹೇಳಿದೆ. ಮಧ್ಯಂತರ ಸರ್ಕಾರದ ಜತೆ ಸಭೆ ನಡೆಸಿದ ಬಳಿಕ ಪಕ್ಷದ ಮುಖಂಡರೊಬ್ಬರು ಮಾಧ್ಯಮಗಳಿಗೆ ಈ ಮಾಹಿತಿ ನೀಡಿದ್ದಾರೆ.

"ಅವರು (Muhammad Yunus) ನಮಗೆ ಡಿಸೆಂಬರ್‌ನೊಳಗೆ ಚುನಾವಣೆ ನಡೆಸಲು ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ," ಎಂದು ಬಿಎನ್​​ಪಿ ಕಾರ್ಯದರ್ಶಿ ಜನರಲ್ ಮಿರ್ಜಾ ಫಕ್ರುಲ್ ಇಸ್ಲಾಮ್ ಆಲಂಗೀರ್ ಹೇಳಿದ್ದಾರೆ.

"ಚುನಾವಣೆಯನ್ನು ಶೀಘ್ರವಾಗಿ ನಡೆಸಲು ನಾವು ಸರ್ಕಾರವನ್ನು ಪದೇ ಪದೆ ಒತ್ತಾಯಿಸಿದ್ದೇವೆ. ಈ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸಿದ್ದೇವೆ. ಕನಿಷ್ಠ ಸುಧಾರಣೆಗಳನ್ನು ಪೂರ್ಣಗೊಳಿಸಿ, ಆಯೋಗಗಳೊಂದಿಗೆ ಚರ್ಚೆ ನಡೆಸಿ ಶೀಘ್ರ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದ್ದೇವೆ" ಎಂದು ಅವರು ಹೇಳಿದ್ದಾರೆ.

ಸರ್ಕಾರದ ವಿರುದ್ಧ ಟೀಕೆ

ಆಲಂಗೀರ್ ಅವರು ದೇಶದಾದ್ಯಂತ ನಡೆಯುತ್ತಿರುವ ಅರಾಜಕ ಪ್ರತಿಭಟನೆಗಳನ್ನು ನಿಯಂತ್ರಣ ಮಾಡಲಾಗದ ಸರ್ಕಾರವನ್ನು ಟೀಕಿಸಿದರು. ಧನ್ಮಂಡಿಯಲ್ಲಿ ಬಾಂಗ್ಲಾದೇಶದ ಸ್ಥಾಪಕ ಶೇಖ್ ಮುಜಿಬುರ್ ರಹ್ಮಾನ್ ಅವರ ನಿವಾಸ ನಾಶ ಮಾಡಿರುವ ಬಗ್ಗೆ ಆಕ್ಷೇಪಿಸಿದರು.

"ಇಂಥ ದುರ್ಘಟನೆಗಳ ಹೊಣೆಗಾರಿಕೆಯಿಂದ ಸರ್ಕಾರ ತಪ್ಪಿಸಿಕೊಳ್ಳಲಾಗದು," ಎಂದು ಅವರು ಹೇಳಿದರು. "ಈ ಘಟನೆಗಳು ಕಾನೂನು ಮತ್ತು ಸಂವಿಧಾನ ರಕ್ಷಣೆ ಮಾಡುವ ಭದ್ರತಾ ಪಡೆಗಳ ಮುಂದೆಯೇ ನಡೆದಿರುವುದು ಖೇದಕರ ," ಎಂದು ಹೇಳಿದ್ದಾರೆ. .

"ದೇಶದಲ್ಲಿ ಸಮಗ್ರ ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಹದಗೆಟ್ಟಿದೆ," ಎಂದು ಅವರು ಹೇಳಿದರು.

ಒಂದು ಗಂಟೆ ಸಭೆ

ಆಲಂಗೀರ್ ಮತ್ತು ಪಕ್ಷದ ಸ್ಟಾಂಡಿಂಗ್ ಕಮಿಟಿ ಸದಸ್ಯರಾದ ಸಲಾಹುದ್ದೀನ್ ಅಹಮದ್ ಮತ್ತು ಮೇಜರ್ (ನಿವೃತ್ತ) ಹಫೀಜ್ ಉದ್ದೀನ್ ಅಹಮದ್ ಮುಖ್ಯ ಸಲಹೆಗಾರರೊಂದಿಗೆ ಒಂದು ಗಂಟೆ ಸಭೆ ನಡೆಸಿದರು.

ಆಲಂಗೀರ್ ಅವರು, ಅಗತ್ಯ ವಸ್ತುಗಳ ಬೆಲೆ ಏರಿಕೆ ಕುರಿತು ಆತಂಕ ವ್ಯಕ್ತಪಡಿಸಿದರು. ಇದು 'ಸರ್ಕಾರದ ವೈಫಲ್ಯ ಎಂದು ಕರೆದರು.

ಸರ್ಕಾರವು ಇತ್ತೀಚೆಗೆ 'ಡೆವಿಲ್ ಹಂಟ್' ಹೆಸರಿನ ಭದ್ರತಾ ಅಭಿಯಾನ ಪ್ರಾರಂಭಿಸಿದೆ. ಯಾವುದೇ ನಿರಪರಾಧಿ ಈ ಕಾರ್ಯಾಚರಣೆಗೆ ಬಲಿಪಶು ಆಗಬಾರದು ಎಂದು ಬಿಎನ್​​ಪಿ ನಾಯಕ ಎಚ್ಚರಿಸಿದರು.

Read More
Next Story