Vivek Ramaswamy : ಟ್ರಂಪ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ‘DOGE’ ಗೆ ವಿವೇಕ್ ರಾಮಸ್ವಾಮಿ ರಾಜೀನಾಮೆ
x
ವಿವೇಕ್‌ ರಾಮಸ್ವಾಮಿ

Vivek Ramaswamy : ಟ್ರಂಪ್ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ‘DOGE’ ಗೆ ವಿವೇಕ್ ರಾಮಸ್ವಾಮಿ ರಾಜೀನಾಮೆ

Vivek Ramaswamy : ಟ್ರಂಪ್‌ ಸರ್ಕಾರದ ಸರ್ಕಾರಿ ದಕ್ಷತೆ ಇಲಾಖೆಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದ ಭಾರತೀಯ ಮೂಲದ ಉದ್ಯಮಿ ವಿವೇಕ್‌ ರಾಮಸ್ವಾಮಿ ಅವರು ರಾಜಿನಾಮೆ ಘೋಷಿಸಿದ್ದಾರೆ. ಈ ಬಗ್ಗೆ ಶ್ವೇತಭವನ ಅಧಿಕೃತ ಹೇಳಿಕೆ ನೀಡಿದೆ.


ಡೊನಾಲ್ಡ್‌ ಟ್ರಂಪ್‌ (Donald Trump) ಎರಡನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಅಚ್ಚರಿಯ ಬೆಳವಣಿಗೆ ಎಂಬಂತೆ ಕಾರ್ಯದಕ್ಷತಾ ಇಲಾಖೆ(DOGE) ಮುಖ್ಯಸ್ಥ ಉಸ್ತುವಾರಿಯಾಗಿ ಸ್ಥಾನಕ್ಕೆ ಭಾರತೀಯ ಮೂಲದ ಉದ್ಯಮಿ ವಿವೇಕ್ ರಾಮಸ್ವಾಮಿ (Vivek Ramaswamy) ರಾಜೀನಾಮೆ ನೀಡಿದ್ದಾರೆ. ಎಲೋನ್‌ ಮಸ್ಕ್‌ ಮತ್ತು ವಿವೇಕ್‌ ರಾಮಸ್ವಾಮಿ ಅವರನ್ನು DOGE ಉಸ್ತುವಾರಿಗಳನ್ನಾಗಿ ಚುನಾವಣೆ ಗೆದ್ದ ತಕ್ಷಣ ಟ್ರಂಪ್‌ ನೇಮಕ ಮಾಡಿದ್ದರು. ಆದರೆ ಕೇವಲ ಎರಡು ತಿಂಗಳಲ್ಲೇ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ರಾಮಸ್ವಾಮಿ ಅವರು ಇನ್ನು ಮುಂದೆ ಸರ್ಕಾರಿ ದಕ್ಷತೆ ಇಲಾಖೆಯ (ಡಿಒಜಿಇ) ಭಾಗವಾಗಿರುವುದಿಲ್ಲ ಎಂದು ತಿಳಿದು ಬಂದಿದೆ. ಸದ್ಯ ನೇಮಕಗೊಂಡಿರುವ ಎಲೋನ್ ಮಸ್ಕ್ ಅವರು ಇನ್ನು ಮುಂದೆ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಈ ಬಗ್ಗೆ ಸೋಮವಾರ ಶ್ವೇತಭವನದ ಪ್ರಕಟಣೆ ಹೊರಡಿಸಲಾಗಿದೆ.

2024ರಲ್ಲಿ ನಡೆದಿದ್ದ ಅಮೆರಿಕ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸಲು ಸಜ್ಜಾಗಿದ್ದ ರಾಮಸ್ವಾಮಿ ನಂತರ ಹಿಂದೆ ಸರಿದಿದ್ದರು. ಇದೀಗ ಅವರು ಓಹಿಯೋದ ಗವರ್ನರ್ ಹುದ್ದೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಕಳೆದ 2 ತಿಂಗಳುಗಳಲ್ಲಿ ಅವರು ನೀಡಿದ ಕೊಡುಗೆಗಳಿಗಾಗಿ ನಾವು ಕೃತಜ್ಞತೆ ಸಲ್ಲಿಸುತ್ತೇವೆ ಮತ್ತು ಅಮೆರಿಕವನ್ನು ಮತ್ತೊಮ್ಮೆ ಅತ್ಯುತ್ಕೃಷ್ಟಗೊಳಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಆಯೋಗದ ವಕ್ತಾರರಾದ ಅನ್ನಾ ಕೆಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ

ಹಾರ್ವರ್ಡ್‌ ಹಳೆ ವಿದ್ಯಾರ್ಥಿ

ಭಾರತೀಯ ಮೂಲದ ರಾಮಸ್ವಾಮಿ, ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ನಂತರ ಯೇಲ್ ಕಾನೂನು ಶಾಲೆಯಿಂದ ಪದವಿ ಪಡೆದುಕೊಂಡಿದ್ದರು. ಅದೇ ರೀತಿ ಯೇಲ್ ಲಾ ಸ್ಕೂಲ್‌ನಿಂದ ಪದವಿ ಪಡೆದು ತಮ್ಮ ವೃತ್ತಿ ಜೀವ ಆರಂಭಿಸಿದ್ದರು.

ವಿವೇಕ್ ರಾಮಸ್ವಾಮಿ ವಿದ್ಯಾರ್ಥಿ ಕಾಲದಲ್ಲಿ ಉದಾರವಾದಿ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದರು. 2004ರಲ್ಲಿ ಲಿಬರ್‌ಟೇರಿಯನ್‌ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗೆ ವೋಟ್ ಹಾಕಿದ್ದಾಗಿ ಅವರು ಹೇಳಿಕೊಂಡಿದ್ದರು. 2016ರಿಂದೀಚೆ ಅವರು ರಿಪಬ್ಲಿಕನ್ ಪಕ್ಷದ ಪರ ರಾಜಕೀಯ ನಿಲುವು ಹೊಂದಿರುವುದು ಕಂಡು ಬಂದಿದೆ. 2020 ಹಾಗೂ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್​ಗೆ ಬೆಂಬಲ ನೀಡಿದ್ದರು.

Read More
Next Story