US Presidential Poll: ಮಿನ್ನೆಸೋಟ ಗವರ್ನರ್‌ ಟಿಮ್ ವಾಲ್ಜ್ ಉಪಾಧ್ಯಕ್ಷ ಅಭ್ಯರ್ಥಿ
x

US Presidential Poll: ಮಿನ್ನೆಸೋಟ ಗವರ್ನರ್‌ ಟಿಮ್ ವಾಲ್ಜ್ ಉಪಾಧ್ಯಕ್ಷ ಅಭ್ಯರ್ಥಿ


ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಮಿನ್ನೆಸೋಟ ಗವರ್ನರ್ ಟಿಮ್ ವಾಲ್ಜ್ ಅವರನ್ನು ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ.

ಅವರು ಪ್ರಗತಿಪರ ಕಾರ್ಯನೀತಿಗಳ ಪರವಿರುವ ವಾಗ್ಮಿ, ಗ್ರಾಮೀಣ ಹಿನ್ನೆಲೆಯಿದ್ದು, ಶ್ವೇತವರ್ಣೀಯ ಮತದಾರರನ್ನು ಆಕರ್ಷಿಸುವಲ್ಲಿ ಮುಖ್ಯ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗಿದೆ.

ವಾಲ್ಜ್(60) ಅಮೆರಿಕದ ಸೇನಾಪಡೆ ನ್ಯಾಶನಲ್ ಗಾರ್ಡ್ ನಲ್ಲಿ ಸೇವೆ ಸಲ್ಲಿಸಿದ್ದು, ಆನಂತರ ಶಿಕ್ಷಕರಾಗಿದ್ದರು. 2006 ರಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಚುನಾಯಿತರಾದರು. 2018 ರಲ್ಲಿ ಮಿನ್ನೆಸೋಟದ ಗವರ್ನರ್ ಆಗುವ ಮೊದಲು 12 ವರ್ಷಗಳ ಕಾಲ ಗವರ್ನರ್‌ ಆಗಿ ಸೇವೆ ಸಲ್ಲಿಸಿದ್ದರು. ಗವರ್ನರ್ ಆಗಿರುವಾಗ ಶಾಲೆಗಳಲ್ಲಿ ಉಚಿತ ಊಟ ಕುರಿತು ಪ್ರಚಾರ ಮಾಡಿದ್ದಾರೆ. ಹವಾಮಾನ ಬದಲಾವಣೆ ಗುರಿಗಳು, ಮಧ್ಯಮ ವರ್ಗಕ್ಕೆ ತೆರಿಗೆ ಕಡಿತ ಮತ್ತು ವಿಸ್ತರಿತ ಪಾವತಿಸಿದ ರಜೆ ಪರ ಇರುವವರು ಎಂದು ಪರಿಗಣಿಸಲ್ಪಟ್ಟಿದ್ದಾರೆ.

ಮಹಿಳೆಯರ ಸಂತಾನೋತ್ಪತ್ತಿ ಹಕ್ಕುಗಳ ಬೆಂಬಲಿಗರಾಗಿದ್ದರೂ, ಕೃಷಿ ಆಸಕ್ತಿಗಳು ಮತ್ತು ಬಂದೂಕು ಹಕ್ಕುಗಳನ್ನು ಸಮರ್ಥಿಸಿಕೊಂಡಿದ್ದಾರೆ. ಅಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ವಾಲ್ಜ್‌ ಅವರನ್ನು ಉಪಾಧ್ಯಕ್ಷ ಸ್ಥಾನಕ್ಕೆ ಉಮೇದುವಾರರನ್ನಾಗಿ ಮಾಡುವ ಮೂಲಕ ವಿಸ್ಕಾನ್ಸಿನ್ ಮತ್ತು ಮಿಚಿಗನ್‌ನಂತಹ ನಿರ್ಣಾಯಕ ರಾಜ್ಯಗಳಲ್ಲಿ ತಮ್ಮ ಅವಕಾಶಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾರೆ.

ವಾಲ್ಜ್ ಅವರ ನ್ಯಾಷನಲ್ ಗಾರ್ಡ್ ವೃತ್ತಿಜೀವನ ಮತ್ತು ಹೈಸ್ಕೂಲಿನಲ್ಲಿ ಫುಟ್‌ಬಾಲ್ ತರಬೇತುದಾರರಾಗಿ ಸೇವೆ ಸಲ್ಲಿಸಿರುವುದು ಟ್ರಂಪ್‌ ಅವರಿಗೆ ಬದ್ಧವಾಗಿಲ್ಲದ ಮತದಾರರನ್ನು ಸೆಳೆಯಬಹುದು ಎನ್ನಲಾಗಿದೆ.

ಕಮಲಾ ಹ್ಯಾರಿಸ್ ಮತ್ತು ವಾಲ್ಜ್ ಅವರು ನವೆಂಬರ್ 5 ರಂದು ಟ್ರಂಪ್ ಮತ್ತು ಉಪಾಧ್ಯಕ್ಷ ಅಭ್ಯರ್ಥಿ ಜೆ.ಡಿ. ವ್ಯಾನ್ಸ್ ಅವರನ್ನು ಎದುರಿಸಲಿದ್ದಾರೆ. ರಿಪಬ್ಲಿಕನ್‌ ಜೋಡಿಯಾದ ಟ್ರಂಪ್ ಮತ್ತು ವ್ಯಾನ್ಸ್ ʻವಿಲಕ್ಷಣʼ ಎಂದು ವಾಲ್ಜ್ ಟೀಕಿಸಿದ್ದಾರೆ.

Read More
Next Story