ಪಾಕಿಸ್ತಾನ ಸೇರಿ 41 ದೇಶಗಳ ನಾಗರಿಕರಿಗೆ ಅಮೆರಿಕ ಸಂಚಾರ ನಿಷೇಧಿಸಿದ ಡೊನಾಲ್ಡ್ ಟ್ರಂಪ್​
x

ಪಾಕಿಸ್ತಾನ ಸೇರಿ 41 ದೇಶಗಳ ನಾಗರಿಕರಿಗೆ ಅಮೆರಿಕ ಸಂಚಾರ ನಿಷೇಧಿಸಿದ ಡೊನಾಲ್ಡ್ ಟ್ರಂಪ್​

ಅಕ್ರಮ ವಲಸೆಯನ್ನು ತಡೆಯುವ ಕ್ರಮವಾಗಿ ಅಮೆರಿಕಾ ಸರ್ಕಾರವು ಸುಮಾರು 41 ದೇಶಗಳ ಪ್ರಯಾಣಿಕರಿಗೆ ನಿರ್ಬಂಧ ಮತ್ತು ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ.


ಡೊನಾಲ್ಡ್ ಟ್ರಂಪ್ ಅವರು ಅಮೆರಿಕಾ ಅಧ್ಯಕ್ಷರಾಗಿ ಆಯ್ಕೆಯಾದ ನಂತತ ಹಲವು ಆಕ್ರಮಣಕಾರಿ ನಿರ್ಧಾರಗಗಳನ್ನು ಕೈಗೊಂಡಿದ್ದಾರೆ. ಅದು ವಿಶ್ವ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಭಾರತ ಸೇರಿ ಹಲವು ದೇಶಗಳ ಮೇಲೆ ಹೆಚ್ಚಿನ ಆಮದು ಸುಂಕ ವಿಧಿಸುವುದು, ಹೊಸ ಪೌರತ್ವ ನೀತಿ ಸೇರಿದಂತೆ ಹಲವು ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಇದರ ನಡುವೆ, ಪಾಕಿಸ್ತಾನ ಸೇರಿ 41 ದೇಶಗಳ ಪ್ರಜೆಗಳಿಗೆ ಸಂಚಾರ ನಿಷೇಧ ಹೇರಲು ಟ್ರಂಪ್ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಅಕ್ರಮ ವಲಸೆಯನ್ನು ತಡೆಯುವ ಕ್ರಮವಾಗಿ ಅಮೆರಿಕಾ ಸರ್ಕಾರವು ಸುಮಾರು 41 ದೇಶಗಳ ಪ್ರಯಾಣಿಕರಿಗೆ ನಿರ್ಬಂಧ ಮತ್ತು ಕೆಲವು ಕಠಿಣ ನಿಯಮಗಳನ್ನು ಜಾರಿಗೆ ತರಲು ಮುಂದಾಗಿದೆ. ಈಗಾಗಲೇ 41 ದೇಶಗಳ ಪಟ್ಟಿಯನ್ನು ತಯಾರಿಸಲಾಗಿದ್ದು, ಅಮೆರಿಕಾದ ಗೃಹ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರ ಅನುಮೋದನೆಯೊಂದು ಬಾಕಿ ಉಳಿದಿದೆ. ಈ ಪ್ರಕ್ರಿಯೆ ಮುಗಿದ ನಂತರ ನಿಯಮಗಳು ಜಾರಿಗೆ ಬರಲಿವೆ ಎಂದು ಹೇಳಲಾಗುತ್ತಿದೆ.

ಯಾವ ದೇಶಗಳಿಗೆ ನಿರ್ಬಂಧ?

ಪಾಕಿಸ್ತಾನ, ಅಫ್ಘಾನಿಸ್ತಾನ ಸೇರಿ 41 ರಾಷ್ಟ್ರಗಳಿಗೆ ನಿರ್ಬಂಧ ಹೇರಲು ಅಮೆರಿಕಾ ಸಿದ್ಧತೆ ನಡೆಸಿದೆ. ಕ್ಯೂಬಾ, ಇರಾನ್, ಲಿಬಿಯಾ, ಸೊಮಾಲಿಯಾ, ಸುಡಾನ್, ಸಿರಿಯಾ ಸೇರಿದಂತೆ ಹಲವು ರಾಷ್ಟ್ರಗಳಿಗೆ ಸಂಪೂರ್ಣವಾಗಿ ವೀಸಾ ನೀಡುವುದನ್ನು ನಿಲ್ಲಿಸಲಾಗುತ್ತದೆ. ಹೈತಿ, ಲಾವೋಸ್, ಮ್ಯಾನ್ಮಾರ್, ಸೌತ್ ಸುಡಾನ್ ಸೇರಿದಂತೆ ಕೆಲವು ರಾಷ್ಟ್ರಗಳಿಗೆ ಭಾಗಶಃ ವೀಸಾ ನಿರ್ಬಂಧ ಹೇರಲಾಗುತ್ತದೆ. ವನುವಾಟು, ಗಾಂಬಿಯಾ, ಡೊಮಿನಿಕಾ ದೇಶಗಳು ಕೂಡ ನಿರ್ಬಂಧದ ಪಟ್ಟಿಯಲ್ಲಿವೆ ಎನ್ನಲಾಗಿದೆ.

ಈ 41 ದೇಶಗಳ ಪ್ರವಾಸಿಗರು, ವಿದ್ಯಾರ್ಥಿಗಳು ಮತ್ತು ಉದ್ಯಮಿಗಳು ಟ್ರಂಪ್ ಅವರ ಹೊಸ ನಿಯಮಗಳಿಂದ ಸಮಸ್ಯೆ ಎದುರಿಸಬೇಕಾಗಬಹುದು ಎಂದು ತಿಳಿದುಬಂದಿದೆ. ಡೊನಾಲ್ಡ್ ಟ್ರಂಪ್ ಅವರು ತಮ್ಮ ಮೊದಲ ಅವಧಿಯ ಆಡಳಿತದಲ್ಲಿ ಸುಮಾರು ಏಳು ಇಸ್ಲಾಮಿಕ್ ರಾಷ್ಟ್ರಗಳಿಗೆ ಪ್ರವಾಸ ನಿರ್ಬಂಧ ವಿಧಿಸಿದ್ದರು.

ಈ ಹೊಸ ನಿರ್ಬಂಧಗಳು ಅಂತಾರಾಷ್ಟ್ರೀಯ ಸಂಬಂಧಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದು ಇನ್ನೂ ಸ್ಪಷ್ಟವಿಲ್ಲ. ಆದರೆ, ಇದು ಅಮೆರಿಕಾದ ವಲಸೆ ನೀತಿಯಲ್ಲಿ ಹೊಸ ತಿರುವನ್ನು ಸೂಚಿಸುತ್ತದೆ ಎಂದು ವಿಶ್ಲೇಷಕರು ಹೇಳುತ್ತಾರೆ.

Read More
Next Story