Donald Trump: ಅಮೆರಿಕದಿಂದ 205 ಅಕ್ರಮ ವಲಸಿಗ ಭಾರತೀಯರ ಗಡಿಪಾರು; ವರದಿ
x
ಡೊನಾಲ್ಡ್‌ ಟ್ರಂಪ್‌.

Donald Trump: ಅಮೆರಿಕದಿಂದ 205 ಅಕ್ರಮ ವಲಸಿಗ ಭಾರತೀಯರ ಗಡಿಪಾರು; ವರದಿ

Donald Trump: ಅಧಿಕಾರಕ್ಕೆ ಏರಿದ ತಕ್ಷಣ ಟ್ರಂಪ್‌ ಹಲವು ಮಹತ್ವದ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದರು. ಅವುಗಳ ಪೈಕಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಆದೇಶವು ಪ್ರಮುಖವಾಗಿತ್ತು. ಈಗ ಅದ ಜಾರಿಯಾಗುತ್ತಿದೆ.


ಅಮೆರಿಕದಲ್ಲಿ ಡೊನಾಲ್ಡ್‌ ಟ್ರಂಪ್‌(Donald Trump) ವಲಸೆ ವಿರೋಧಿ ನೀತಿಗಳು ನಿಧಾನವಾಗಿ ಜಾರಿಗೊಳ್ಳುತ್ತಿವೆ. ಅಕ್ರಮ ವಲಸಿಗ ಭಾರತೀಯರಿಗೂ ಅದು ತಟ್ಟುತ್ತಿದೆ. ಸದ್ಯದ ವರದಿ ಪ್ರಕಾರ ಅಮೆರಿಕದಲ್ಲಿ ಅಕ್ರಮವಾಗಿ ವಾಸವಿರುವ 205 ವಲಸಿಗರನ್ನು ಭಾರತಕ್ಕೆ ವಾಪಸ್‌ ಕಳುಹಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಅಧಿಕಾರಕ್ಕೆ ಏರಿದ ತಕ್ಷಣ ಟ್ರಂಪ್‌ ಹಲವು ಮಹತ್ವದ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕಿದ್ದರು. ಅವುಗಳ ಪೈಕಿ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಆದೇಶವು ಪ್ರಮುಖವಾಗಿತ್ತು. ಈಗ ಅದ ಜಾರಿಯಾಗುತ್ತಿದೆ.

ಅಕ್ರಮವಾಗಿ ನುಸುಳಿರುವ ಭಾರತೀಯರನ್ನು ಟ್ರಂಪ್‌ ಸರ್ಕಾರ ಗಡಿಪಾರು ಮಾಡುತ್ತಲಿದ್ದು, 205 ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕದ ಮಿಲಿಟರಿ ವಿಮಾನ ಭಾರತಕ್ಕೆ ಹೊರಟಿದೆ. ಸಿ-17 ವಿಮಾನ ಭಾರತಕ್ಕೆ ಹೊರಟಿದ್ದು, 24 ಗಂಟೆಗಳಲ್ಲಿ ಆಗಮನದ ನಿರೀಕ್ಷೆಯಿದೆ ಇದೆ ಮೂಲಗಳು ತಿಳಿಸಿವೆ. ವರದಿಯ ಪ್ರಕಾರ ಸುಮಾರು , ಭಾರತದಿಂದ ಬಂದ ಸರಿಸುಮಾರು 7,25,000 ಅಕ್ರಮ ವಲಸಿಗರು ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮೋದಿ ಜತೆ ಮಾತನಾಡಿದ್ದ ಟ್ರಂಪ್‌

ಇತ್ತೀಚೆಗೆ ಪ್ರಧಾನಿ ನರೇಂದ್ರ ಅವರೊಂದಿಗೆ ಮಾತನಾಡಿದ್ದ ಟ್ರಂಪ್‌ ಭಾರತೀಯ ವಲಸಿಗರನ್ನು ವಾಪಸ್ ಕರೆಸಿಕೊಳ್ಳುವಲ್ಲಿ ಮೋದಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದ್ದರು. ವಲಸಿಗರ ಗಡಿಪಾರು ವಿಚಾರವಾಗಿ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವ ಎಸ್‌ ಜೈಶಂಕರ್‌ ಅವರು ದಾಖಲೆರಹಿತ ಭಾರತೀಯರನ್ನು ಭಾರತ ವಾಪಸ್‌ ಕರೆಸಿಕೊಳ್ಳಲಿದೆ ಎಂದು ಹೇಳಿದ್ದರು.

ಟ್ರಂಪ್‌ ಅಕ್ರಮ ವಲಸೆಯನ್ನು ತಡೆಯಲು ಮಿಲಿಟರಿ ಶಕ್ತಿಯನ್ನು ಬಳಸಿಕೊಳ್ಳುತ್ತಿದ್ದಾರೆ. ಅಮೆರಿಕ-ಮೆಕ್ಸಿಕೋ ಗಡಿಗೆ ಹೆಚ್ಚುವರಿ ಸೇನಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ವಲಸಿಗರನ್ನು ಮಿಲಿಟರಿ ನೆಲೆಗಳಲ್ಲಿ ಇರಿಸಲಾಗಿದೆ. ಮಿಲಿಟರಿ ವಿಮಾನಗಳು ಈ ಹಿಂದೆ ಗ್ವಾಟೆಮಾಲಾ, ಪೆರು ಮತ್ತು ಹೊಂಡುರಾಸ್‌ನಂತಹ ದೇಶಗಳಿಗೆ ವಲಸಿಗರನ್ನು ಕರೆದೊಯ್ದಿವೆ.

ಫೆ 13ಕ್ಕೆ ಮೋದಿ ಟ್ರಂಪ್‌ ಭೇಟಿ

ಪ್ರಧಾನಿ ನರೇಂದ್ರ ಮೋದಿ ಅವರು ಫೆ. 13ರಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ಕಳೆದ ವಾರ ಟ್ರಂಪ್‌ ಅವರಿಗೆ ಕರೆ ಮಾಡಿ ಮಾತನಾಡಿದ್ದ ಮೋದಿ ಶುಭ ಕೋರಿದ್ದರು. ಟ್ರಂಪ್‌ ಅವರನ್ನು ತಮ್ಮ ಆತ್ಮೀಯ ಗೆಳೆಯ ಎಂದು ಕರೆದಿದ್ದ ಪ್ರಧಾನಿ ಮೋದಿ, ಟ್ರಂಪ್‌ ಆಡಳಿತಾವಧಿಯಲ್ಲಿ ಭಾರತ ಮತ್ತು ಅಮೆರಿಕದ ಜನರ ನಡುವಿನ ಸ್ನೇಹ ಸಂಬಂಧ ಗಟ್ಟಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

Read More
Next Story