
ಯುಎಇ
9 ದೇಶಗಳ ನಾಗರಿಕರಿಗೆ 2 ರೀತಿಯ ವೀಸಾ ನಿರ್ಬಂಧಿಸಿದ ಯುಎಇ
ಯುಎಇ ಸರ್ಕಾರವು 9 ದೇಶಗಳ ನಾಗರಿಕರಿಗೆ ಪ್ರವಾಸಿ ಮತ್ತು ಔದ್ಯೋಗಿಕ ವೀಸಾ ನೀಡುವುದನ್ನು ತಾತ್ಕಾಲಿಕ ತಡೆಹಿಡಿದಿದೆ
ಅಫಘಾನಿಸ್ತಾನ, ಲಿಬಿಯಾ, ಯೆಮೆನ್, ಸೊಮಾಲಿಯಾ, ಲೆಬನಾನ್, ಬಾಂಗ್ಲಾದೇಶ, ಕ್ಯಾಮರೂನ್, ಸುಡಾನ್ & ಉಗಾಂಡಾ ದೇಶಗಳ ನಾಗರಿಕರಿಗೆ ಪ್ರವಾಸಿ ಮತ್ತು ಔದ್ಯೋಗಿಕ ವೀಸಾ ನೀಡುವುದನ್ನು ಯುಎಇ ತಾತ್ಕಾಲಿಕ ತಡೆಹಿಡಿದೆ ಎಂಬುದಾಗಿ 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. ಉಗ್ರ ಕೃತ್ಯ, ರಾಜತಾಂತ್ರಿಕ ಬಿಕ್ಕಟ್ಟು ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಮುನ್ನೆಚ್ಚರಿಕೆಯ ಹಿನ್ನೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ತಕ್ಷಣದಿಂದ ಆದೇಶ ಜಾರಿಗೆ ಬಂದಿರುವುದರಿಂದ ಈ ಒಂಬತ್ತು ದೇಶಗಳ ನಾಗರಿಕರು ಟರ್ಕಿ ಹಾಗೂ ಯುಎಇ ಹೊರತುಪಡಿಸಿದ ಗಲ್ಫ್ ರಾಷ್ಟ್ರಗಳು ಮತ್ತು ಏಷ್ಯಾದ ಕೆಲವು ವೀಸಾ ಮುಕ್ತ ರಾಷ್ಟ್ರಗಳತ್ತ ಮುಖ ಮಾಡುತ್ತಿದ್ದಾರೆ.
ಯುಎಇ, 2026ರ ವೀಸಾ ವಿತರಣಾ ಪ್ರಕ್ರಿಯೆ ಮೇಲೆ ನಿರ್ಬಂಧ ವಿಧಿಸಿದ್ದು, ತನ್ನ ಸಂಸ್ಥಾನಗಳ ಆರೋಗ್ಯ, ವಲಸೆ ಆಡಳಿತ ಮತ್ತು ಭೌಗೋಳಿಕ ಸಂಬಂಧಗಳಿಗೆ ಹೆಚ್ಚು ಒತ್ತು ನೀಡಲು ಆರಂಭಿಸಿದೆ. ಈ ಆದೇಶದಿಂದ ಈಗಾಗಲೇ ವೀಸಾ ಹೊಂದಿರುವವರಿಗೆ ಯಾವುದೇ ತೊಂದರೆ ಇಲ್ಲ. ಹೊಸದಾಗಿ ಅರ್ಜಿಗಳನ್ನು ಸಲ್ಲಿಸಲು ಸಾಧ್ಯವಾಗುವುದಿಲ್ಲ. ಅಂತೆಯೇ. ಆದೇಶವು ಅನಿರ್ದಿಷ್ಟಾವಧಿವರೆಗೆ ಜಾರಿಯಲ್ಲಿರಲಿದೆ. ಈ ವೀಸಾ ನಿರ್ಬಂಧಗಳು ಆಫ್ರಿಕಾ ಮತ್ತು ಮಧ್ಯಪ್ರಾಚ್ಯದ ಪ್ರಯಾಣಿಕರು ಮತ್ತು ಕಾರ್ಮಿಕರ ಮೇಲೆ ಗಂಭೀರ ಪರಿಣಾಮ ಬೀರಲಿದೆ.