x

ಟ್ರಂಪ್ ಸುಂಕದ ಶಾಕ್.. ಭಾರತದ ಜವಳಿ ಉದ್ಯಮಕ್ಕೆ ಸಂಕಷ್ಟ?

ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಯಶಸ್ವಿಯಾದರೆ ಶೇ.17ರಷ್ಟು ಸುಂಕ ವಿಧಿಸುವ ಸಾಧ್ಯತೆಯಿದ್ದು, ಒಪ್ಪಂದ ವಿಫಲವಾದರೆ ಅದು ಶೇ.25ಕ್ಕೆ ಏರಿಕೆಯಾಗಬಹುದು.


Click the Play button to hear this message in audio format

ಭಾರತದ ರಫ್ತು ವಲಯಕ್ಕೆ ಅಮೆರಿಕದಿಂದ ಮತ್ತೊಂದು ಸುಂಕದ ಬಿಸಿ ತಟ್ಟುವ ಸಾಧ್ಯತೆ ಎದುರಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತ ಭಾರತದ ಬಟ್ಟೆ ಮತ್ತು ಜವಳಿ ಉತ್ಪನ್ನಗಳ ಮೇಲೆ ಹೊಸ ಆಮದು ಸುಂಕ ವಿಧಿಸಲು ಮುಂದಾಗಿದೆ. ಭಾರತ–ಅಮೆರಿಕ ವ್ಯಾಪಾರ ಒಪ್ಪಂದ ಯಶಸ್ವಿಯಾದರೆ ಶೇ.17ರಷ್ಟು ಸುಂಕ ವಿಧಿಸುವ ಸಾಧ್ಯತೆಯಿದ್ದು, ಒಪ್ಪಂದ ವಿಫಲವಾದರೆ ಅದು ಶೇ.25ಕ್ಕೆ ಏರಿಕೆಯಾಗಬಹುದು. ಆದರೆ ಮೊಬೈಲ್ ಫೋನ್ ಮತ್ತು ಔಷಧ ಉತ್ಪನ್ನಗಳಿಗೆ ಈ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಅಮೆರಿಕ ಮಾರುಕಟ್ಟೆಯನ್ನು ಅವಲಂಬಿಸಿರುವ ಭಾರತೀಯ ಜವಳಿ ರಫ್ತುದಾರರಲ್ಲಿ ಆತಂಕ ಹೆಚ್ಚಾಗಿದೆ. ಈಗ ವ್ಯಾಪಾರ ಒಪ್ಪಂದದ ಮಾತುಕತೆ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಮೂಡಿದೆ.

Read More
Next Story