
ಡೊನಾಲ್ಡ್ ಟ್ರಂಪ್
ಭಾರತ-ಪಾಕಿಸ್ತಾನ 'ಪರಮಾಣು ಸಂಘರ್ಷ' ತಡೆದಿದ್ದು ಅಮೆರಿಕ; ಎರಡೂ ದೇಶಕ್ಕೂ ಭರಪೂರ ವ್ಯಾಪಾರ ಒಪ್ಪಂದ ಎಂದ ಟ್ರಂಪ್
ವೈಟ್ ಹೌಸ್‌ನಲ್ಲಿ ಮಾತನಾಡಿದ ಟ್ರಂಪ್, ಶನಿವಾರ (ಮೇ 10) ತಮ್ಮ ಆಡಳಿತವು ಭಾರತ ಮತ್ತು ಪಾಕಿಸ್ತಾನದ ನಡುವಿನ ಪೂರ್ಣ ಮತ್ತು ತಕ್ಷಣದ ಯುದ್ಧ ವಿರಾಮಕ್ಕೆ ಮಧ್ಯಸ್ಥಿಕೆ ಮಾಡಲು ಸಹಾಯ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ಪಾಕಿಸ್ತಾನದಲ್ಲಿ ಭಯೋತ್ಪಾದಕ ತಾಣಗಳನ್ನು ಗುರಿಯಾಗಿಸಿ 'ಆಪರೇಷನ್ ಸಿಂದೂರ್' ನಡೆಸಿದಾಗ ಉಂಟಾದ ಉದ್ವಿಗ್ನತೆಯು 'ಪರಮಾಣು ಸಂಘರ್ಷ'ವಾಗಿ ಪರಿವರ್ತನೆಗೊಳ್ಳುವುದನ್ನು ತಡೆಯುವಲ್ಲಿ ಅಮೆರಿಕವು ಪ್ರಮುಖ ಪಾತ್ರ ವಹಿಸಿತು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.
ವೈಟ್ ಹೌಸ್‌ನಲ್ಲಿ ಮಾತನಾಡಿದ ಟ್ರಂಪ್, ಶನಿವಾರ (ಮೇ 10) ತಮ್ಮ ಆಡಳಿತವು ಭಾರತ ಮತ್ತು ಪಾಕಿಸ್ತಾನದ ನಡುವಿನ ಪೂರ್ಣ ಮತ್ತು ತಕ್ಷಣದ ಯುದ್ಧ ವಿರಾಮಕ್ಕೆ ಮಧ್ಯಸ್ಥಿಕೆ ಮಾಡಲು ಸಹಾಯ ಮಾಡಿರ . ಇದು ಹಲವಾರು ಪರಮಾಣು ಶಸ್ತ್ರಗಳನ್ನು ಹೊಂದಿರುವ ಎರಡು ರಾಷ್ಟ್ರಗಳ ನಡುವಿನ ಅಪಾಯಕಾರಿ ಸಂಘರ್ಷ ಕೊನೆಗೊಳಿಸಿದೆ. ಎರಡೂ ದೇಶಗಳು ತೀವ್ರವಾಗಿ ಸಂಘರ್ಷದಲ್ಲಿ ತೊಡಗಿದ್ದರು ಮತ್ತು ನಿಲ್ಲುವಂತೆ ಕಾಣಲಿಲ್ಲ. ಹೀಗಾಗಿ ಪ್ರವೇಶ ಮಾಡಬೇಕಾಯಿತು," ಎಂದು ಅವರು ಹೇಳಿದ್ದಾರೆ.
ಭಾರತದ ಹೇಳಿಕೆಯ ಪ್ರಕಾರ, ಭಾರತ ಮತ್ತು ಪಾಕಿಸ್ತಾನದ ಮಿಲಿಟರಿ ಆಪರೇಷನ್‌ಗಳ ಮಹಾನಿರ್ದೇಶಕರು (DGMOs) ನೇರವಾಗಿ ಒಪ್ಪಂದಕ್ಕೆ ಬಂದಿದ್ದಾರೆ ಮತ್ತು ಯಾವುದೇ ಮೂರನೇ ದೇಶವು ಭಾಗಿಯಾಗಿಲ್ಲ.
"ಇದು ಭೀಕರ ಪರಮಾಣು ಯುದ್ಧವಾಗಬಹುದಿತ್ತು ಎಂದು ನಾನು ಭಾವಿಸುತ್ತೇನೆ. ಲಕ್ಷಾಂತರ ಜನರು ಸಾಯಬಹುದಿತ್ತು," ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಾಯಕತ್ವವು ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಳ್ಳುವ ಶಕ್ತಿ ಮತ್ತು ಧೈರ್ಯ ಹೊಂದಿತ್ತು ಎಂದು ಅವರು ಶ್ಲಾಘಿಸಿದ್ದಾರೆ.
ವ್ಯಾಪಾರದ ಒತ್ತಡ
ಯುದ್ಧ ನಿಲ್ಲಿಸಿದರೆ, ನಾವು ವ್ಯಾಪಾರ ಮಾಡುತ್ತೇವೆ. ನೀವು ನಿಲ್ಲಿಸದಿದ್ದರೆ, ಯಾವುದೇ ವ್ಯಾಪಾರ ಮುಂದುವರಿಸುವುದಿಲ್ಲ ಎಂದು ಹೇಳಿದ್ದೇ. ಈ ಬೆದರಿಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿತು ಮತ್ತು ವ್ಯಾಪಾರವೇ ಸಂಘರ್ಷ ನಿಲ್ಲಲು ಒಂದು ದೊಡ್ಡ ಕಾರಣ ಎಂದು ಟ್ರಂಪ್ ಹೇಳಿದ್ದಾರೆ.
"ನಾವು ಪಾಕಿಸ್ತಾನದೊಂದಿಗೆ ತುಂಬಾ ವ್ಯಾಪಾರ ಮಾಡಲಿದ್ದೇವೆ. ಭಾರತದೊಂದಿಗೂ ಸಾಕಷ್ಟು ವ್ಯಾಪಾರ ಮಾಡಲಿದ್ದೇವೆ. ಈಗ ಭಾರತದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಪಾಕಿಸ್ತಾನದೊಂದಿಗೂ ಮಾತುಕತೆ ನಡೆಸಲಿದ್ದೇವೆ. ನಾವು ಪರಮಾಣು ಸಂಘರ್ಷವನ್ನು ತಡೆದಿದ್ದೇವೆ," ಎಂದು ಟ್ರಂಪ್ ಹೇಳಿದರು. ಈ ಕೆಲಸಕ್ಕಾಗಿ ಉಪಾಧ್ಯಕ್ಷ ವ್ಯಾನ್ಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ರುಬಿಯೊ ಅವರ ಪ್ರಯತ್ನಗಳಿಗೆ ಅವರು ಧನ್ಯವಾದ ಸಲ್ಲಿಸಿದರು.