Donald Trump: ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹಿಂದೆ ಸರಿಯುವ ಆದೇಶಕ್ಕೆ ಸಹಿ ಹಾಕಿದ ಟ್ರಂಪ್
x
ವಿವಿಧ ಆದೇಶಗಳಿಗೆ ಸಹಿ ಹಾಕಿದ ಡೊನಾಲ್ಡ್‌ ಟ್ರಂಪ್‌.

Donald Trump: ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹಿಂದೆ ಸರಿಯುವ ಆದೇಶಕ್ಕೆ ಸಹಿ ಹಾಕಿದ ಟ್ರಂಪ್

Donald Trump: ಡೊನಾಲ್ಡ್‌ ಟ್ರಂಪ್‌ ಅಮೆರಿಕ ನೂತನ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ನಂತರ ವಿಶ್ವ ಆರೋಗ್ಯ ಸಂಸ್ಥೆಯಿಂದ ಹಿಂದಕ್ಕೆ ಸರಿಯುವ ಆದೇಶಕ್ಕೆ ಸಹಿ ಹಾಕಿದ್ದಾರೆ. ಈ ಹಿಂದೆ ಅಧ್ಯಕ್ಷರಾಗಿದ್ದಾಗಲೂ ಈ ಆದೇಶವನ್ನು ಅವರು ಜಾರಿಗೊಳಿಸಿದ್ದರು.


ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳ ಒಳಗೆ ಡೊನಾಲ್ಡ್‌ ಟ್ರಂಪ್‌ (Donald trump) ಕೆಲ ಮಹತ್ವದ ನಿರ್ಣಯಗಳಿಗೆ ಸಹಿ ಹಾಕಿದ್ದಾರೆ. ಅದಲ್ಲೊಂದು ವಿಶ್ವ ಆರೋಗ್ಯ ಸಂಸ್ಥೆಯಿಂದ (WHO) ಅಮೆರಿಕ ಅಧಿಕೃತವಾಗಿ ಹೊರ ನಡೆಯುವುದು. ಟ್ರಂಪ್‌ ಸೋಮವಾರ ಈ ಆದೇಶಕ್ಕೆ ಸಹಿ ಹಾಕಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಗೆ ಚೀನಾ ಪ್ರತಿ ವರ್ಷ 300 ಕೋಟಿ ಅನುದಾನ ನೀಡುತ್ತಿದೆ. ಅಮೆರಿಕ 3 ಸಾವಿರ ಕೋಟಿ ಅನುದಾನ ನೀಡುತ್ತಿದೆ.

ನೂತನ ಅಧ್ಯಕ್ಷ ಟ್ರಂಪ್‌ ಓವೆಲ್‌ನ ಆಫೀಸ್‌ನಲ್ಲಿ ಈ ಆದೇಶಕ್ಕೆ ಸಹಿ ಮಾಡಿರುವುದು ತಿಳಿದು ಬಂದಿದೆ. ಟ್ರಂಪ್‌ ತಮ್ಮ ಹಿಂದಿನ ಅಧ್ಯಕ್ಷೀಯ ಅವಧಿಯಲ್ಲೂ ಕೊರೊನಾ ವೈರಸ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಚೀನಾಗೆ ಬೆಂಬಲವಾಗಿ ನಿಂತಿದೆ ಎಂದು ಆರೋಪಿಸಿ ಅಧಿಕೃತವಾಗಿ WHOನಿಂದ ಹಿಂದೆ ಸರಿದಿದ್ದರು. ನಂತರ ಜೋ ಬೈಡನ್‌ ಅಧಿಕಾರವಧಿಯಲ್ಲಿ ಈ ಆದೇಶ ರದ್ದುಗೊಳಿಸಿದ್ದರು.

ವಿಶ್ವ ಆರೋಗ್ಯ ಸಂಸ್ಥೆ ಚೀನಾಗೆ ಬೆಂಬಲವಾಗಿ ನಿಂತಿದೆ ಎಂಬುದು ಟ್ರಂಪ್‌ ಆರೋಪವಾಗಿದೆ. ಅಂದಿನ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರಿಗೆ ಮಾಹಿತಿ ರವಾನೆ ಮಾಡಿ, ಜುಲೈ 8, 2021 ರಿಂದ ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತವಾಗಿ ಹೊರಗುಳಿಯಲಿದೆ ಎಂದು ಹೇಳಿದ್ದರು.

ಏಜೆನ್ಸಿಗೆ ಹೊಡೆತ

ಅಮೆರಿಕದ ಈ ನಿರ್ಗಮನ ವಿಶ್ವಾದ್ಯಂತ ಸಾಂಕ್ರಾಮಿಕ ರೋಗಗಳ ನಿರ್ಮೂಲನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಏಜೆನ್ಸಿಗೆ ತೀವ್ರ ಹೊಡೆತ ನೀಡಲಿದೆ. ಅಮೆರಿಕ HIV ಮತ್ತು ಪೋಲಿಯೊ ಕಾಲರಾ, ಡೆಂಗ್ಯೂ, ಪಾಕ್ಸ್ ಮತ್ತು ಮಾರ್ಬರ್ಗ್ ವೈರಸ್‌ನಂತಹ ಸಾಂಕ್ರಾಮಿಕ ರೋಗಗಳ ವಿರುದ್ಧ ಹೋರಾಡಲು ಸತತವಾಗಿ ಅನುದಾನ ನೀಡುತ್ತಿತ್ತು.

Read More
Next Story