
ಅಮೆರಿಕ ವೀಸಾ ನೀತಿ ಬಗ್ಗೆ ಎಐ ರಚಿತ ಚಿತ್ರ.
US Visa: 43 ಕೋಟಿ ರೂ. ಕೊಟ್ಟರೆ ಅಮೆರಿಕದ ಪೌರತ್ವ; ಟ್ರಂಪ್ ಹೊಸ ಆಫರ್!
ನಿಮ್ಮ ಬಳಿ 43.50 ಕೋಟಿ ರೂ.(500 ಮಿಲಿಯನ್ ಡಾಲರ್) ಇದ್ದರೆ ಸಾಕು, ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಅಮೆರಿಕಕ್ಕೆ ಕರೆಸಿಕೊಂಡು ವೀಸಾ ಕೊಡುತ್ತಾರೆ.
ಅಮೆರಿಕದ ಪೌರತ್ವ ಪಡೆಯಬೇಕು ಎಂಬುದು ಹಲವಾರು ಭಾರತೀಯರ ಕನಸು. ಆದರೆ, ಟ್ರಂಪ್ ಬಂದ ಮೇಲೆ ದೊಡ್ಡ ಆಸೆಗೆ ತಣ್ಣಿರು ಎರಚಲಾಗಿದೆ. ವಲಸೆ ನೀತಿಯನ್ನು ಬಿಗಿಗೊಳಿಸಿದ ಅವರು ಅಕ್ರಮವಾಸಿಗಳು ಕಂಡು ಬಂದರೆ ಹಿಡಿದು ಕೈಕೋಳ ಕಟ್ಟಿ ವಾಪಸ್ ಕಳುಹಿಸಲಾಗುತ್ತದೆ. ಕಾನೂನು ಪ್ರಕಾರವಾಗಿ ಹೋದವರಿಗೆ ಸದ್ಯಕ್ಕೆ ಏನೂ ತೊಂದರೆ ಇಲ್ಲ ಎಂದು ಹೇಳೋಣ. ಅಷ್ಟಕ್ಕೆ ನಿರಾಶಾಗರಾಗಬೇಕಾಗಿಲ್ಲ. ಅಮೆರಿಕೆ ವೀಸಾ ಬೇಕೇ ಬೇಕು ಎಂದಾದರೆ ಮತ್ತೊಂದು ಮಾರ್ಗವಿದೆ. ಅದರೆ, ಅದಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಬ
ನಿಮ್ಮ ಬಳಿ 43.50 ಕೋಟಿ ರೂ.(500 ಮಿಲಿಯನ್ ಡಾಲರ್) ಇದ್ದರೆ ಸಾಕು, ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೇ ಅಮೆರಿಕಕ್ಕೆ ಕರೆಸಿಕೊಂಡು ವೀಸಾ ಕೊಡುತ್ತಾರೆ.
ಇಂಥದ್ದೊಂದು ಯೋಜನೆಯನ್ನು ಟ್ರಂಪ್ ಆರಂಭಿಸಿದ್ದಾರೆ. 43.50 ಕೋಟಿ ರೂ. ಪಾವತಿಸಿದರೆ ಅಂಥವರಿಗೆ ಗ್ರೀನ್ ಕಾರ್ಡ್‌ನ ಪ್ರೀಮಿಯಂ ಆವೃತ್ತಿಯಾಗಿರುವ “ಗೋಲ್ಡ್ ಕಾರ್ಡ್” ನೀಡುವುದಾಗಿ ಪ್ರಕಟಿಸಿದ್ದಾರೆ. ಕಾರ್ಡ್ ಪಡೆದವರಿಗೆ ಎಷ್ಟು ವರ್ಷ ಬೇಕಾದರೂ ಅಮೆರಿಕದಲ್ಲಿರಲು ಅವಕಾಶ ಮಾಡಿಕೊಡುತ್ತದೆ. ಕ್ರಮೇಣ ಅಲ್ಲಿನ ಪೌರತ್ವವನ್ನೂ ನೀಡುತ್ತದೆ. ಶ್ರೀಮಂತ ವಿದೇಶಿ ಹೂಡಿಕೆದಾರರು ಈ ಗೋಲ್ಡ್ ಕಾರ್ಡ್ ಸೌಲಭ್ಯದ ಲಾಭ ಪಡೆದು ಅಮೆರಿಕದ ಪೌರತ್ವವನ್ನು ಗಳಿಸಬಹುದಾಗಿದೆ.
ಮಾರಾಟಕ್ಕೆ ಇಟ್ಟಿದ್ದೇವೆ ಎಂದ ಟ್ರಂಪ್
"ನಾವು ಗೋಲ್ಡ್ ಕಾರ್ಡ್ ಅನ್ನು ಮಾರಾಟ ಮಾಡಲಿದ್ದೇವೆ" ಎಂದು ಟ್ರಂಪ್ ಬುಧವಾರ ಘೋಷಿಸಿದ್ದಾರೆ. "ನಾವು ಆ ಕಾರ್ಡ್‌ಗೆ $ 5 ಮಿಲಿಯನ್ ದರವನ್ನು (43 ಕೋಟಿ ಭಾರತದ ರೂಪಾಯಿ) ನಿಗದಿಪಡಿಸಿದ್ದೇವೆ. ಯಾರಲ್ಲಿ ಹಣವಿದೆಯೋ ಅವರು ಇದನ್ನು ಖರೀದಿಸಬಹುದು" ಎಂದು ಹೇಳಿದ್ದಾರೆ.
ಈ ಹೊಸ ಯೋಜನೆಯ ಮೂಲಕ ಗಮನಾರ್ಹ ಆದಾಯವನ್ನು ಗಳಿಸುವುದು ಮತ್ತು ಶ್ರೀಮಂತ ಹೂಡಿಕೆದಾರರನ್ನು ಅಮೆರಿಕಕ್ಕೆ ಆಕರ್ಷಿಸುವ ಉದ್ದೇಶವನ್ನು ಟ್ರಂಪ್ ಹೊಂದಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ವಲಸೆ ಹೂಡಿಕೆದಾರರಿಗೆ ನೀಡಲಾಗುವ ಇಬಿ-5 ವೀಸಾದ ಸ್ಥಾನವನ್ನು ಗೋಲ್ಡ್ ಕಾರ್ಡ್ ತುಂಬಲಿದೆ. ಈಗ ಅಸ್ತಿತ್ವದಲ್ಲಿರುವ ಇಬಿ -5 ವಲಸೆ ಹೂಡಿಕೆದಾರರ ವೀಸಾದ ಅನ್ವಯ, ವಿದೇಶಿ ಹೂಡಿಕೆದಾರರು ಟಾರ್ಗೆಟೆಡ್ ಎಂಪ್ಲಾಯ್ಮೆಂಟ್ ಏರಿಯಾಗಳಲ್ಲಿ (ಟಿಇಎ) ಯಾವುದಾದರೂ ಯೋಜನೆಗೆ ಕನಿಷ್ಠ 6.96 ಕೋಟಿ ರೂ.ಗಳನ್ನು (8 ಲಕ್ಷ ಡಾಲರ್) ಅಥವಾ ಬೇರೆ ಪ್ರದೇಶಗಳಲ್ಲಿ 15.60 ಕೋಟಿ ರೂ. (1.8 ಮಿಲಿಯನ್ ಡಾಲರ್) ಹೂಡಿಕೆ ಮಾಡಿದರೆ ಅವರು ಗ್ರೀನ್ ಕಾರ್ಡ್ ಪಡೆಯುವ ಅರ್ಹತೆ ಹೊಂದುತ್ತಾರೆ. ಈಗ ಟ್ರಂಪ್ ಅವರು ಗೋಲ್ಡ್ ಕಾರ್ಡ್ ವ್ಯವಸ್ಥೆಯನ್ನು ಜಾರಿಗೆ ತರಲು ಉತ್ಸುಕರಾಗಿದ್ದು, ಇಬಿ -5 ವ್ಯವಸ್ಥೆಯನ್ನು ಅಸಮರ್ಥ ಮತ್ತು ಹಳೆಯದು ಎಂದು ಟೀಕಿಸಿದ್ದಾರೆ.
' ಇಬಿ -5 ವೀಸಾ ಬದಲಿಗೆ ಗೋಲ್ಡ್ ಕಾರ್ಡ್.
ಹೊಸ ವೀಸಾ ನೀತಿಯನ್ನು ಅಮೆರಿಕ ವಾಣಿಜ್ಯ ಸಚಿವ ಹೊವಾರ್ಡ್ ಲುಟ್ನಿಕ್ ಬೆಂಬಲಿಸಿದ್ದು , "ಇಬಿ -5 ವೀಸಾ ವ್ಯವಸ್ಥೆ ಹಾಸ್ಯಾಸ್ಪದವಾಗಿದ್ದು, ಅದನ್ನು ನಾವು ಕೊನೆಗೊಳಿಸಲಿದ್ದೇವೆ. ಅದರ ಬದಲಿಗೆ ಟ್ರಂಪ್ ಗೋಲ್ಡ್ ಕಾರ್ಡ್ ಪರಿಚಯಿಸಲಿದ್ದೇವೆ" ಎಂದಿದ್ದಾರೆ.
ಇಬಿ-5 ವೀಸಾ ಪಡೆಯಬೇಕೆಂದರೆ, ವಿದೇಶಿಯರು ಅಮೆರಿಕದಲ್ಲಿ ಉದ್ಯೋಗ ಸೃಷ್ಟಿಸುವ ಉದ್ಯಮಗಳಲ್ಲಿ ಹೂಡಿಕೆ ಮಾಡಬೇಕಿತ್ತು. ಆದರೆ, ಗೋಲ್ಡ್ ಕಾರ್ಡ್ ಇದಕ್ಕಿಂತ ಭಿನ್ನವಾಗಿದ್ದು, ನೇರವಾಗಿ ಅಮೆರಿಕ ಸರ್ಕಾರಕ್ಕೆ ಹಣ ಪಾವತಿಸುವ ಮೂಲಕ ಯಾರು ಬೇಕಿದ್ದರೂ ಗೋಲ್ಡ್ ಕಾರ್ಡ್ ಪಡೆಯಬಹುದಾಗಿದೆ.
ರಾಷ್ಟ್ರೀಯ ವಿತ್ತೀಯ ಕೊರತೆಯನ್ನು ತಗ್ಗಿಸುವ ನಿಟ್ಟಿನಲ್ಲಿ 1 ಕೋಟಿ ಗೋಲ್ಡ್ ಕಾರ್ಡ್ ಗಳನ್ನು ಮಾರಾಟ ಮಾಡುವ ಚಿಂತನೆಯಿದೆ ಎಂದು ಟ್ರಂಪ್ ಹೇಳಿದ್ದಾರೆ. "ಇದೊಂದು ಅದ್ಭುತ ಯೋಜನೆ" ಎಂದು ಅವರು ಬಣ್ಣಿಸಿದ್ದಾರೆ. ಆದರೆ, ಇಬಿ -5 ವೀಸಾಗೆ ಉದ್ಯೋಗ ಸೃಷ್ಟಿಯ ಷರತ್ತು ಇತ್ತು. ಗೋಲ್ಡ್ ಕಾರ್ಡ್ ಹೊಂದಿರುವವರಿಗೆ ಅಂತಹ ಷರತ್ತು ಅನ್ವಯವಾಗಲಿದೆಯೇ ಎಂಬುದನ್ನು ಅವರು ಸ್ಪಷ್ಟಪಡಿಸಿಲ್ಲ.
ಇದೇ ಸಂದರ್ಭದಲ್ಲಿ ರಷ್ಯಾದ ಶ್ರೀಮಂತರು ಕೂಡ ಗೋಲ್ಡ್ ಕಾರ್ಡ್ ಖರೀದಿಸಲು ಅರ್ಹರೇ ಎಂಬ ಸುದ್ದಿಗಾರರ ಪ್ರಶ್ನೆಗೆ ಟ್ರಂಪ್, "ಹೌದು, ಖಂಡಿತಾ ಅರ್ಹರು" ಎಂದಿದ್ದಾರೆ. ಸದ್ಯಕ್ಕೆ ಕಾರ್ಯಕ್ರಮದ ಸಂಪೂರ್ಣ ವಿವರಗಳನ್ನು ಅವರು ಇನ್ನೂ ಬಹಿರಂಗಪಡಿಸಿಲ್ಲ. ಎರಡು ವಾರಗಳಲ್ಲಿ ಹೆಚ್ಚಿನ ಮಾಹಿತಿಯನ್ನು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.
"ಇದು ಸಂಪತ್ತು ಹೊಂದಿರುವವರಿಗೆ ಅಥವಾ ಶ್ರೇಷ್ಠ ಪ್ರತಿಭೆ ಇರುವವರಿಗೆ ಅಮೆರಿಕದ ಪೌರತ್ವ ಪಡೆಯುವ ಮಾರ್ಗವಾಗಿದೆ" ಎಂದಿದ್ದಾರೆ.