Trump 2.0: ಟ್ರಂಪ್ ಬಂದ ಕ್ಷಣವೇ ಅಮೇರಿಕದಲ್ಲಿ ಸಿಬಿಪಿ ಒನ್ ಅಪ್ಲಿಕೇಷನ್ ಬಂದ್!
Trump 2.0: ಈ ಕ್ರಮವು ಟ್ರಂಪ್ ತಮ್ಮ ಪ್ರಚಾರದ ಸಮಯದಲ್ಲಿ ನೀಡಿದ ಭರವಸೆಗೆ ಬದ್ಧವಾಗಿದೆ. ಯುನೈಟೆಡ್ ಸ್ಟೇಟ್ಸ್‌ಗೆ ಮೆಕ್ಸಿಕೊದ ಗಡಿ ಮೂಲಕ ಹೆಚ್ಚಿನ ವಲಸಿಗರು ಒಳ ಬರುವುದನ್ನು ತಡೆಯುವಲ್ಲಿ ಪ್ರಮುಖ ಕ್ರಮವಾಗಿದೆ.
ಡೊನಾಲ್ಡ್ ಟ್ರಂಪ್ (Donald Trump) ಅಧಿಕಾರಕ್ಕೆ ಬಂದ ತಕ್ಷಣ ಅಮೆರಿಕ ಸರ್ಕಾರ ಸಿಬಿಪಿ ಒನ್ (CPB One) ಎಂಬ ಗಡಿ ಅಪ್ಲಿಕೇಶನ್‌ನ ಬಳಕೆಯನ್ನು ಸೋಮವಾರ ನಿಲ್ಲಿಸಲಾಗಿದೆ. ಈ ಅಪ್ಲಿಕೇಷನ್ ಮೂಲಕ ನೈರುತ್ಯ ಅಮೆರಿಕದ ಗಡಿಗಳ ಬಂದರುಗಳ ಮೂಲಕ ಕೆಲಸಕ್ಕಾಗಿ ಆ ದೇಶಕ್ಕೆ ಪ್ರವೇಶ ಮಾಡುವ ಅವಕಾಶ ಇದೆ. ಇದು ವಾರ್ಷಿಕ ಸುಮಾರು 10 ಲಕ್ಷ ಜನರಿಗೆ ಕೆಲಸ ಮಾಡಲು ಷಅರ್ಹತೆ ನೀಡುತ್ತಿತ್ತು. ಪರೋಲ್ ರೀತಿಯಲ್ಲಿ ಒಳಕ್ಕೆ ಬಂದು ಕೆಲಸ ಮಾಡಬಹುದಾಗಿತ್ತು.
ಟ್ರಂಪ್ ಪ್ರಮಾಣವಚನ ಸ್ವೀಕರಿಸಿದ ನಂತರ ಸೋಮವಾರ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ವೆಬೆಸೈಟ್‌ನಲ್ಲಿ ನೋಟಿಸ್ ಪ್ರಕಟಿಸಲಾಗಿದೆ. ವಲಸಿಗರಿಗೆ ಪ್ರವೇಶದ ಎಂಟು ನೈಋತ್ಯ ಗಡಿ ಬಂದರುಗಳಲ್ಲಿ ನೇಮಕಗಳನ್ನು ನಿಗದಿಪಡಿಸಲು ಬಳಸಲಾದ ಅಪ್ಲಿಕೇಶನ್ ಇನ್ನು ಮುಂದೆ ಲಭ್ಯವಿಲ್ಲ. ಅಸ್ತಿತ್ವದಲ್ಲಿರುವ ನೇಮಕಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಲಾಗಿದೆ.
ಈ ಕ್ರಮವು ಟ್ರಂಪ್ ತಮ್ಮ ಪ್ರಚಾರದ ಸಮಯದಲ್ಲಿ ನೀಡಿದ ಭರವಸೆಗೆ ಬದ್ಧವಾಗಿದೆ. ಯುನೈಟೆಡ್ ಸ್ಟೇಟ್ಸ್‌ಗೆ ಮೆಕ್ಸಿಕೊದ ಗಡಿ ಮೂಲಕ ಹೆಚ್ಚಿನ ವಲಸಿಗರು ಒಳ ಬರುವುದನ್ನು ತಡೆಯುವಲ್ಲಿ ಪ್ರಮುಖ ಕ್ರಮವಾಗಿದೆ. ಈ ಮೂಲಕ ಅವರು ಮತದಾರರಿಗೆ ನೀಡಿರುವ ಭರವಸೆಗಳನ್ನು ಒಂದೊಂದಾಗಿ ಜಾರಿಗೆ ತರುತ್ತಿದ್ದಾರೆ.
ಸಿಬಿಪಿ ಒನ್ ಅಪ್ಲಿಕೇಶನ್ ಅಮೆರಿಕದಲ್ಲಿ ಜನಪ್ರಿಯವಾಗಿದೆ. ಇದು ಆನ್‌ಲೈನ್ ಲಾಟರಿ ವ್ಯವಸ್ಥೆಯಾಗಿದ್ದು ಅಮೆರಿಕದ ನಾನಾ ಕಡೆ ಎಂಟು ಗಡಿ ದಾಟಲು ದಿನಕ್ಕೆ 1,450 ಜನರಿಗೆ ನೀಡುತ್ತದೆ. ಅವರು ವಲಸೆ "ಪೆರೋಲ್" ಮೇಲೆ ಪ್ರವೇಶಿಸುತ್ತಾರೆ, ಇದು 1952 ರಲ್ಲಿ ಜಾರಿಗೆ ಬಂದಿತ್ತು.