ಪೋಪ್‌ಗೆ ವಿರುದ್ಧವೇ ವಾಗ್ದಾಳಿ ನಡೆಸಿದ ಡೊನಾಲ್ಡ್​ ಟ್ರಂಪ್​!
x

 ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪೋಪ್ 14ನೇ ಲಿಯೋ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.  

ಪೋಪ್‌ಗೆ ವಿರುದ್ಧವೇ ವಾಗ್ದಾಳಿ ನಡೆಸಿದ ಡೊನಾಲ್ಡ್​ ಟ್ರಂಪ್​!

ತಮ್ಮ ಸಾಮಾಜಿಕ ಜಾಲತಾಣವಾದ 'ಟ್ರುಥ್ ಸೋಷಿಯಲ್' ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಟ್ರಂಪ್, ಅಮೆರಿಕನ್ ಮೂಲದ ಪೋಪ್ ಲಿಯೋ ಅವರ ವಿರುದ್ಧ ಹರಿಹಾಯ್ದಿದ್ದಾರೆ.


Click the Play button to hear this message in audio format

ಪೋಪ್ ಲಿಯೋ ಅವರು ಶಾಂತಿಯ ಬಗ್ಗೆ ಮಾತನಾಡುತ್ತಾರೆ, ಆದರೆ ಅವರಿಗೆ ಅಪರಾಧವನ್ನು ನಿಲ್ಲಿಸುವುದರಲ್ಲಿ ನಂಬಿಕೆ ಇಲ್ಲ. ಅವರು ಅಪರಾಧದ ವಿಚಾರದಲ್ಲಿ ದುರ್ಬಲರು ಮತ್ತು ವಿದೇಶಾಂಗ ನೀತಿಯಲ್ಲಿ ಅವರ ವರ್ತನೆ ತೀರಾ ಕಳಪೆ " ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪೋಪ್ 14ನೇ ಲಿಯೋ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣವಾದ 'ಟ್ರುಥ್ ಸೋಷಿಯಲ್' ನಲ್ಲಿ ಸುದೀರ್ಘ ಪೋಸ್ಟ್ ಮಾಡಿರುವ ಟ್ರಂಪ್, ಅಮೆರಿಕನ್ ಮೂಲದ ಪೋಪ್ ಲಿಯೋ ಅವರ ವಿರುದ್ಧ ಹರಿಹಾಯ್ದಿದ್ದಾರೆ. "ಇರಾನ್‌ನಂತಹ ದೇಶಗಳು ಪರಮಾಣು ಅಸ್ತ್ರ ಹೊಂದುವುದನ್ನು ಒಪ್ಪುವಂತಹ ಪೋಪ್ ನನಗೆ ಬೇಡ. ಇರಾನ್ ಮೇಲೆ ನಾವು ನಡೆಸಿದ ದಾಳಿಯನ್ನು ಟೀಕಿಸುವುದು ಸರಿಯಲ್ಲ. ಲಿಯೋ ಅವರು ರಾಜಕಾರಣಿಯಂತೆ ವರ್ತಿಸುವುದನ್ನು ಬಿಟ್ಟು ಸಾಮಾನ್ಯ ಜ್ಞಾನ ಬಳಸಿ ಉತ್ತಮ ಪೋಪ್ ಆಗುವತ್ತ ಗಮನ ಹರಿಸಬೇಕು" ಎಂದು ಟ್ರಂಪ್ ಕಿಡಿಕಾರಿದ್ದಾರೆ. ಅಲ್ಲದೆ, ಕೇವಲ ನಾನು ಅಧ್ಯಕ್ಷನಾಗಿರುವುದರಿಂದ ನನ್ನನ್ನು ನಿಭಾಯಿಸಲು ಚರ್ಚ್ ಅಮೆರಿಕನ್ ಮೂಲದ ಲಿಯೋ ಅವರನ್ನು ಪೋಪ್ ಆಗಿ ಆಯ್ಕೆ ಮಾಡಿದೆ ಎಂದೂ ಟ್ರಂಪ್ ಆರೋಪಿಸಿದ್ದಾರೆ.

ಇತ್ತೀಚೆಗೆ ಫೆಬ್ರವರಿ 28ರಂದು ಅಮೆರಿಕ ಇರಾನ್ ಮೇಲೆ ದಾಳಿ ನಡೆಸಿತ್ತು. ಈ ಸಂದರ್ಭದಲ್ಲಿ ಟ್ರಂಪ್ ಅವರು "ಇರಾನ್‌ನ ನಾಗರಿಕತೆಯನ್ನು ನಾಶ ಮಾಡುತ್ತೇನೆ" ಎಂದು ಬೆದರಿಕೆ ಹಾಕಿದ್ದರು. ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದ ಪೋಪ್ ಲಿಯೋ, ಇದು "ಸ್ವೀಕಾರಾರ್ಹವಲ್ಲ" ಎಂದು ಹೇಳಿದ್ದರು. "ಅಧಿಕಾರ ಪ್ರದರ್ಶಿಸಿದ್ದು ಸಾಕು, ಯುದ್ಧ ಸಾಕು, ನಿಜವಾದ ಶಕ್ತಿ ಇರುವುದು ಜೀವಗಳನ್ನು ಉಳಿಸುವುದರಲ್ಲಿದೆ" ಎಂದು ಪೋಪ್ ಶಾಂತಿಯ ಸಂದೇಶ ಸಾರಿದ್ದರು. ಜೊತೆಗೆ, ಟ್ರಂಪ್ ಅವರ ಕಠಿಣ ವಲಸೆ ನೀತಿಗಳಿಂದ ಲಕ್ಷಾಂತರ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದೂ ಪೋಪ್ ಟೀಕಿಸಿದ್ದರು. ಇದರಿಂದ ಕೆರಳಿದ ಟ್ರಂಪ್ ಇದೀಗ ಪೋಪ್ ವಿರುದ್ಧ ನೇರ ವಾಗ್ದಾಳಿಗೆ ಇಳಿದಿದ್ದಾರೆ.

Read More
Next Story