ಟ್ರಂಪ್-ಜೆಲೆನ್ ಸ್ಕಿ ಮಧ್ಯೆ ವಾಗ್ವಾದ, ಸಭೆಯಿಂದ ಮಧ್ಯದಲ್ಲೇ ಎದ್ದು ನಡೆದ ಉಕ್ರೇನ್ ಅಧ್ಯಕ್ಷ
x

ಟ್ರಂಪ್-ಜೆಲೆನ್ ಸ್ಕಿ ಮಧ್ಯೆ ವಾಗ್ವಾದ, ಸಭೆಯಿಂದ ಮಧ್ಯದಲ್ಲೇ ಎದ್ದು ನಡೆದ ಉಕ್ರೇನ್ ಅಧ್ಯಕ್ಷ

ದ್ವಿಪಕ್ಷೀಯ ಮಾತುಕತೆ ವೇಳೆ ಖನಿಜ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳುವಂತೆ ಡೊನಾಲ್ಡ್ ಟ್ರಂಪ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ಮೇಲೆ ಒತ್ತಡ ಹೇರಿದರು. ಅದಕ್ಕೆ ಅವರು ಒಪ್ಪಲಿಲ್ಲ.


ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್​ಸ್ಕಿ ನಡುವಿನ ಬಹು ನಿರೀಕ್ಷಿತ ಸಭೆ ಕೆಲವೇ ನಿಮಿಷಗಳಲ್ಲಿ ನಾಟಕೀಯ ತಿರುವು ಪಡೆದು ಅಂತ್ಯಗೊಂಡಿತು. ಅವರಿಬ್ಬರು ಪರಸ್ಪರ ವಾಗ್ವಾದ ನಡೆಸಿ ಅಂತಿಮವಾಗಿ ಉಕ್ರೇನ್ ಅಧ್ಯಕ್ಷ ಸಭೆಯಿಂದಲೇ ಎದ್ದು ಹೊರಗೆ ನಡೆದರು.

ಅಧ್ಯಕ್ಷ ಟ್ರಂಪ್, ದೊಡ್ಡ ಧ್ವನಿಯಲ್ಲಿ, "ಒಂದೋ ನಮ್ಮೊಂದಿಗೆ ಒಪ್ಪಂದ ಮಾಡಿಕೊಳ್ಳಿ, ಇಲ್ಲದಿದ್ದರೆ ನಾವು ಬೆಂಬಲಕ್ಕಿಲ್ಲ " ಎಂದು ಜೆಲೆನ್​​ಸ್ಕಿಗೆ ಎಚ್ಚರಿಕೆ ನೀಡಿದ್ದು ವಿಡಿಯೊಗಳಲ್ಲಿ ದಾಖಲಾಗಿದೆ. ಮುಂದುವರಿದು, "ನೀವು ದೊಡ್ಡ ತೊಂದರೆಯಲ್ಲಿದ್ದೀರಿ . ನಿಮಗೆ ವಿಜಯ ಅಸಾಧ್ಯ" ಎಂದು ಹೇಳಿದರು. ಆದರೆ, ಜೆಲೆನ್​ಸ್ಕಿ ಅದಕ್ಕೆ ಒಪ್ಪಲಿಲ್ಲ. ಈ ವೇಳೆ ವೊಲೊಡಿಮಿರ್ ಜೆಲೆನ್ ಸ್ಕಿ ಮತ್ತು ಟ್ರಂಪ್ ನಡುವೆ ವಾಗ್ವಾದ ನಡೆದಿದೆ. ಬಳಿಕ ಜೆಲೆನ್ ಸ್ಕಿ ಹಾಗೂ ಅವರ ನಿಯೋಗವನ್ನು ಮಾತುಕತೆ ಮಧ್ಯೆಯೇ ಶ್ವೇತಭವನ ತೊರೆಯುವಂತೆ ಸೂಚಿಸಲಾಗಿದೆ.

ದ್ವಿಪಕ್ಷೀಯ ಮಾತುಕತೆ ವೇಳೆ ಖನಿಜ ಸಂಪನ್ಮೂಲಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳುವಂತೆ ಡೊನಾಲ್ಡ್ ಟ್ರಂಪ್ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ ಸ್ಕಿ ಮೇಲೆ ಒತ್ತಡ ಹೇರಿದರು. ಅದಕ್ಕೆ ಅವರು ಒಪ್ಪಲಿಲ್ಲ. ಇಬ್ಬರು ನಾಯಕರ ನಡುವೆ ನೇರ ಪ್ರಸಾರದಲ್ಲಿಯೇ ವಾಗ್ವಾದ ನಡೆಯಿತು. ಕೊನೆಗೆ ಒಪ್ಪಂದವೂ ರದ್ದಾಯಿತು. ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಯಲಿಲ್ಲ, ಮೀಡಿಯಾಗಳ ಎದುರು ಕೈ ಕುಲುಕಲಿಲ್ಲ. ಕೊನೆಗೆ ಜೆಲೆನ್ ಸ್ಕಿ ಅವರ ನಿಯೋಗವು ಅರ್ಧದಲ್ಲಿಯೇ ಶ್ವೇತಭವನ ಬಿಟ್ಟು ಹೊರಟಿತು.

ಚೆನ್ನಾಗಿಯೇ ಇತ್ತು ಮಾತುಕತೆ

ಮಾತುಕತೆ ಆರಂಭದಲ್ಲಿ ಸರಿಯಾಗಿಯೇ ಸಾಗಿತ್ತು, ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಸೇರಿ ಹಲವು ವಿಷಯಗಳ ಕುರಿತು ಜೆಲೆನ್ ಸ್ಕಿ ಸ್ಪಷ್ಟ ನಿಲುವು ವ್ಯಕ್ತಪಡಿಸಿದರು. ಇದಾದ ಬಳಿಕ ಡೊನಾಲ್ಡ್ ಟ್ರಂಪ್ ಅವರು ಕುಪಿತಗೊಂಡರು. “ನೀವು ಮೂರನೇ ಮಹಾ ಯುದ್ಧಕ್ಕೆ ಮುನ್ನುಡಿ ಬರೆಯುತ್ತಿದ್ದೀರಿ” ಎಂದು ಜೆಲೆನ್ ಸ್ಕಿ ಅವರಿಗೆ ಟ್ರಂಪ್ ಜೋರಾಗಿಯೇ ಹೇಳಿದರು.

ಜೆಲೆನ್ಸ್ಕಿ ತನ್ನ ನಿಲುವು ಸಮರ್ಥಿಸಿಕೊಂಡರು ಮತ್ತು ಅಷ್ಟೇ ತೀವ್ರತೆಯಿಂದ ಪ್ರತಿಕ್ರಿಯಿಸಿದರು. "ನಾವು ನಮ್ಮ ಸ್ವಂತ ದೇಶದಲ್ಲಿ ಇದ್ದೇವೆ, ಮತ್ತು ನಾವು ಈ ಸಮಯದಲ್ಲಿ ದೃಢವಾಗಿದ್ದೇವೆ . ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು" ಎಂದು ಹೇಳಿದರು. ತಕ್ಷಣ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಬಂದು , "ಈ ಸಭೆಯ ಕತೆಯೇನು' ಎಂದು ಪ್ರಶ್ನಿಸಿದರು. ಉಪಾಧ್ಯಕ್ಷರ ಮಾತುಗಳು ಉಕ್ರೇನ್ ಅಧ್ಯಕ್ಷರನ್ನು ಕೆರಳಿಸಿತು.

ಚರ್ಚೆಯು ಮಾತಿನ ಸಮರಕ್ಕೆ ಕಾರಣವಾಯಿತು. ಪತ್ರಕರ್ತರು ಮತ್ತು ಇತರ ಸಿಬ್ಬಂದಿ ದಿಗ್ಭ್ರಮೆಗೊಂಡರು. ಅಧ್ಯಕ್ಷ ಟ್ರಂಪ್ ಸ್ವಲ್ಪ ಧ್ವನಿ ಇಳಿಸಿ, "ಈ ರೀತಿ ವ್ಯವಹರಿಸುವುದರಿಂದ ವಿಷಯಗಳು ತುಂಬಾ ಕ್ಲಿಷ್ಟಕರವಾಗುತ್ತದೆ" ಎಂದು ಹೇಳಿದರು.

ಬಳಿಕ ಮಾತನಾಡಿದ ಟ್ರಂಪ್​, ಉಕ್ರೇನ್ ಅಧ್ಯಕ್ಷರು ಜಾಗತಿಕ ಶಾಂತಿಯನ್ನು ಅಪಾಯಕ್ಕೆ ತಳ್ಳುತ್ತಿದ್ದಾರೆ ಎಂದು ಆರೋಪಿಸಿದರು. "ನೀವು ಲಕ್ಷಾಂತರ ಜನರ ಜೀವನದೊಂದಿಗೆ ಜೂಜಾಡುತ್ತಿದ್ದೀರಿ. ನೀವು ಮೂರನೇ ಮಹಾಯುದ್ಧಕ್ಕೆ ಕಾರಣವಾಗುತ್ತಿದ್ದೀರಿ. ನಿಮ್ಮ ದೇಶಕ್ಕೆ ಮಾಡುವ ಅಗೌರವ,'' ಎಂದು ಹೇಳಿದರು.

ಕದನ ವಿರಾಮಕ್ಕೆ ಟ್ರಂಪ್ ಒತ್ತಾಯ

ಕೆಲವು ಗಂಟೆಗಳ ನಂತರ, ಟ್ರಂಪ್ ಅವರು ರಷ್ಯಾ ಮತ್ತು ಉಕ್ರೇನ್ ನಡುವೆ "ತಕ್ಷಣ ಕದನ ವಿರಾಮ' ಆಗಬೆಕು ಎಂದು ಹೇಳಿದರು. ಅಲ್ಲದೆ, ಶಾಂತಿ ಸ್ಥಾಪಿಸದೇ ಹೋದರೆ ಅಮೆರಿಕದ ಬೆಂಬಲ ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮೂರು ವರ್ಷಗಳ ಹಿಂದೆ ಉಕ್ರೇನ್ ಮೇಲೆ ಆಕ್ರಮಣ ಪ್ರಾರಂಭಿಸಿದ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶಾಂತಿ ಒಪ್ಪಂದಕ್ಕೆ ಸಿದ್ಧರಾಗಿದ್ದಾರೆ ಎಂದು ಟ್ರಂಪ್ ಹೇಳಿದರು.

ಭದ್ರತಾ ಖಾತರಿಗೆ ಜೆಲೆನ್​ಸ್ಕಿ ಒತ್ತಾಯ

ಮತ್ತೊಂದು ದಾಳಿ ನಡೆಯುವುದಿಲ್ಲ ಎಂಬ ಭದ್ರತಾ ಖಾತರಿಗಳನ್ನು ಪಡೆಯುವವರೆಗೆ ಉಕ್ರೇನ್ ರಷ್ಯಾದೊಂದಿಗೆ ಶಾಂತಿ ಮಾತುಕತೆಗೆ ಪ್ರವೇಶಿಸುವುದಿಲ್ಲ ಎಂದು ಜೆಲೆನ್ಸ್ಕಿ ಹೇಳಿದರು. ವಿವಾದಗಳು "ಎರಡೂ ಕಡೆಯವರಿಗೆ ಒಳ್ಳೆಯದಲ್ಲ" ಎಂದು ಜೆಲೆನ್ಸ್ಕಿ ಹೇಳಿದರು.

ಯೂಕ್ರೆನ್ ಅಧ್ಯಕ್ಷರಿಗೆ ಶಾಂತಿ ಬೇಕಾಗಿಲ್ಲ

ಘಟನೆ ಬಗ್ಗೆ ಸ್ಪಷ್ಟನೆ ನೀಡಿದ ಡೊನಾಲ್ಡ್ ಟ್ರಂಪ್, ಜೆಲೆನ್ ಸ್ಕಿ ಅವರು ಅಗೌರವದಿಂದ ನಡೆದುಕೊಂಡರು ಎಂದು ದೂರಿದರು. ಇನ್ನು, ಡೊನಾಲ್ಡ್ ಟ್ರಂಪ್ ಅವರ ವರ್ತನೆ ಬಗ್ಗೆ ಉಕ್ರೇನ್ ನಲ್ಲಿ ಅಸಮಾಧಾನ ವ್ಯಕ್ತವಾಗುತ್ತಿದೆ. ರಷ್ಯಾ ಹಾಗೂ ಅಮೆರಿಕ ಉತ್ತಮ ಸ್ನೇಹ ಹೊಂದಿವೆ. ಇದೇ ಕಾರಣಕ್ಕಾಗಿ ಜೆಲೆನ್ ಸ್ಕಿ ವಿರುದ್ಧ ಟ್ರಂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ಟ್ರಂಪ್ ಅವರು ಜೆಲೆನ್ ಸ್ಕಿ ಅವರನ್ನು ಸರ್ವಾಧಿಕಾರಿ ಎಂದು ಜರಿದಿದ್ದರು.

Read More
Next Story