Justin Trudeau: ಖಲಿಸ್ತಾನಿ ಬೆಂಬಲಿಗೆ ಕೆನಡಾ ಪ್ರಧಾನಿ ಟ್ರುಡೊ ರಾಜೀನಾಮೆ
x
ಕೆನಡಾ ಫ್ರಧಾನಿ ಜಸ್ಟಿನ್‌ ಟ್ರುಡೊ

Justin Trudeau: ಖಲಿಸ್ತಾನಿ ಬೆಂಬಲಿಗೆ ಕೆನಡಾ ಪ್ರಧಾನಿ ಟ್ರುಡೊ ರಾಜೀನಾಮೆ

Justin Trudeau: ಅವರ ಜನಪ್ರಿಯತೆ ನಿರಂತರವಾಗಿ ಕುಸಿಯುತ್ತಿರುವುದು ಹಾಗೂ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಅವರಿಗೆ ನಿರ್ಗಮನ ಅನಿವಾರ್ಯವಾಯಿತು.


Justin Trudeau, Trudeau resignation, Canada PM steps down, Liberal Party dissent, Trudeau leadership crisis, Canada politics, public opinion Trudeau, Trudeau quits news, Trudeau party unrest, Canada PM resignation, Trudeau political career, Liberal Party Canada, Trudeau declining support, Trudeau leadership exit, Canadian politics updates, PM Justin Trudeau resigns, Trudeau legacy, Trudeau political fallout, Trudeau resignation reasons.ಭಾರತದಲ್ಲಿನ ಪ್ರತ್ಯೇಕವಾದಿ ಉಗ್ರ ಸಂಘಟನೆ ಖಲಿಸ್ತಾನಿಗಳಿಗೆ ಬೆಂಬಲ ನೀಡುವ ಮೂಲಕ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಸೋಮವಾರ ಪ್ರಕಟಿಸಿದ್ದಾರೆ. ಆಡಳಿತಾರೂಢ ಲಿಬರಲ್ ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡಿದ ತಕ್ಷಣ ತಾವು ಪ್ರಧಾನಿ ಹುದ್ದೆಯಿಂದ ನಿರ್ಗಮಿಸುವುದಾಗಿ ಅವರು ಹೇಳಿದ್ದಾರೆ.

ಈ ರಾಜೀನಾಮೆಗೆ ಭಾರತ ನೇರ ಕಾರಣವಲ್ಲ. ಆದರೆ, ಅವರ ಜನಪ್ರಿಯತೆ ನಿರಂತರವಾಗಿ ಕುಸಿಯುತ್ತಿರುವುದು ಹಾಗೂ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಅವರಿಗೆ ನಿರ್ಗಮನ ಅನಿವಾರ್ಯವಾಯಿತು.

‘ಪಕ್ಷವು ಮುಂದಿನ ನಾಯಕನನ್ನು ಆಯ್ಕೆ ಮಾಡಿದ ನಂತರ, ಪಕ್ಷದ ಮುಖ್ಯಸ್ಥ ಹಾಗೂ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ನಾನು ಉದ್ದೇಶಿಸಿದ್ದೇನೆ’ ಎಂದು ಟ್ರುಡೊ ಘೋಷಿಸಿದ್ದಾರೆ. ಅವರು 2015ರಿಂದ ಅಧಿಕಾರದಲ್ಲಿದ್ದು, ಪತ್ರಕರ್ತರ ಮುಂದೆ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ. ಟ್ರುಡೊ ಅವರು ಹಂಗಾಮಿ ಪ್ರಧಾನಿಯಾಗಿ ಇನ್ನೂ ಎಷ್ಟು ದಿನ ಅಧಿಕಾರದಲ್ಲಿ ಇರಲಿದ್ದಾರೆ ಎಂಬುದನ್ನು ಅಲ್ಲಿ ಸರ್ಕಾರ ಹೇಳಿಲ್ಲ.

ಇತ್ತೀಚೆಗೆ ಚುನಾವಣೆಯಲ್ಲಿ ಗೆದ್ದಿರುವ ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ವೇಳೆ ಟ್ರುಡೊ ಅವರೇ ಕೆನಡಾ ಪ್ರಧಾನಿಯಾಗಿ ಇರುತ್ತಾರೆ. ಅಮೆರಿಕ ಆರಂಭಿಸಬಹುದಾದ ವಾಣಿಜ್ಯ ಸಮರಕ್ಕೆ ಪ್ರತಿಕ್ರಿಯೆ ನೀಡುವ ಹೊಣೆಯು ಟ್ರುಡೊ ಮೇಲಿದೆ.

ಈ ವರ್ಷ ಕೆನಡಾದಲ್ಲಿ ನಡೆಯಲಿರುವ ಚುನಾವಣೆಯ ಸಂದರ್ಭದಲ್ಲಿ ಲಿಬರಲ್ ಪಕ್ಷವನ್ನು ಮುನ್ನಡೆಸಲು ತಾವು ಅತ್ಯುತ್ತಮ ನಾಯಕ ಅಲ್ಲ ಎಂದು ಟ್ರುಡೊ ತಮ್ಮ ಹೇಳಿಕೆ ಬಹಿರಂಗ ಮಾಡಿದ್ದರು.

ಭಾರತ- ಕೆನಡಾ ಸಂಬಂಧ ಹಾಳು :

ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟರ ಪಾತ್ರವಿದೆ ಎಂದು ಟ್ರುಡೊ ನೇರವಾಗಿ ಆರೋಪಿಸಿದ ಬಳಿಕ ಭಾರತ ಮತ್ತು ಕೆನಡಾ ಸಂಬಂಧವು ತೀರಾ ಹಳಸಿತು. ಎರಡೂ ದೇಶಗಳು ತಮ್ಮ ರಾಯಭಾರಿಗಳನ್ನು ಹಿಂದಕ್ಕೆ ಕರೆಸಿಕೊಂಡಿದ್ದವು. ಕೆನಡಾವೂ ವೀಸಾ ನಿಯಮಗಳಲ್ಲಿ ಬದಲಾವಣೆ ಮಾಡುವ ಮೂಲಕ ಭಾರತೀಯ ವಿದ್ಯಾರ್ಥಿಗಳ ಪ್ರವೇಶಕ್ಕೆ ತಡೆಯೊಡ್ಡುವ ಪ್ರಯತ್ನವನ್ನೂ ಮಾಡಿತ್ತು.

‘ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಏಜೆಂಟ್‌ಗಳ ಪಾತ್ರ ಇದೆ’ ಎಂದು ಆರೋಪಿಸಿದ್ದ ಟ್ರುಡೊ, ಪ್ರತಿಕ್ರಿಯೆ ಎದುರಾದ ಬಳಿಕ ನನ್ನಲ್ಲಿ ಯಾವುದೇ ಬಲವಾದ ಸಾಕ್ಷಿ ಇರಲಿಲ್ಲ’ ಎಂದು ಹೇಳಿ ನುಣುಚಿಕೊಂಡಿದ್ದರು. ಆದರೆ ಅವರ ಹೇಳಿಕೆ ದೊಡ್ಡ ಹಾನಿ ಮಾಡಿತ್ತು.

ಜನಪ್ರಿಯತೆ ಪಾತಾಳಕ್ಕೆ

ಟ್ರುಡೊ ಅವರ ಜನಪ್ರಿಯತೆ ಪಾತಾಳಕ್ಕೆ ಇಳಿದಿದೆ ಎಂಬುದನ್ನು ಅಲ್ಲಿನ ರಾಜಕೀಯ ಬೆಳವಣಿಗೆಯೇ ತೋರಿಸಿದೆ. ಕೆನಡಾದಲ್ಲಿ ಅಕ್ಟೋಬರ್‌ ಕೊನೆಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಲಿಬರಲ್‌ ಪಾರ್ಟಿ ಹೀನಾಯ ಸೋಲು ಅನುಭವಿಸಲಿದೆ. ಕನ್ಸರ್ವೇಟಿವ್‌ ಪಾರ್ಟಿ ಅಧಿಕಾರಕ್ಕೇರಲಿದೆ ಎಂದು ಹಲವು ಸಮೀಕ್ಷೆಗಳು ಹೇಳಿವೆ.

ಟ್ರುಡೊ ನಾಯಕತ್ವ ಬೇಡ ಎನ್ನುವವರ ಪ್ರಮಾಣ ಕಳೆದ ತಿಂಗಳ ಶೇ 68ರಷ್ಟಿತ್ತು ಎಂದು ಚುನಾವಣಾ ವಿಶ್ಲೇಷಕ ಆ್ಯಂಗಸ್‌ ರೀಡ್‌ ಹೇಳಿದ್ದರು. ಟ್ರುಡೊ, ಕಳೆದ ಕೆಲ ತಿಂಗಳುಗಳಿಂದ ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಲಿಬರಲ್‌ ಪಕ್ಷದ ಸಂಸದರೇ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ಉಪ ಪ್ರಧಾನಿ ಕ್ರಿಸ್ಟಿಯಾ ಫ್ರೀಲ್ಯಾಂಡ್‌ ಅವರು ಡಿ.16ರಂದು ರಾಜೀನಾಮೆ ನೀಡಿದ್ದರು.

Read More
Next Story