
ಅಮೆರಿಕದಲ್ಲಿ ಭಾರೀ ಸುಂಟರಗಾಳಿ : 27 ಜನರು ಬಲಿ
ಧೂಳು ತುಂಬಿರುವ ಬಿರುಗಾಳಿ ಯಿಂದಾಗಿ ಗೋಚರತೆ ಕಡಿಮೆಯಾಗಿದ್ದು, ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮಧ್ಯ ಅಮೆರಿಕಾದಾದ್ಯಂತ ಜೋರು ಸುಂಟರಗಾಳಿ ಬೀಸುತ್ತಿದ್ದು, ಕನಿಷ್ಠ 27 ಜನರು ಬಲಿಯಾಗಿದ್ದು, ಬೃಹತ್ ಪ್ರಮಾಣದಲ್ಲಿ ಆಸ್ತಿಗಳಿಗೆ ಹಾನಿ ಉಂಟಾಗಿದೆ. ಅಬ್ಬರದ ಮಾರುತಕ್ಕೆ ನೂರಾರು ಮಂದಿ ಗಾಯಗೊಂಡಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುಂಟರಗಾಳಿಗಳಿಂದ ಮನೆಗಳ ಚಾವಣಿಗಳು ಹಾರಿಹೋಗಿವೆ, ಮತ್ತು ಬೃಹತ್ ಟ್ರಕ್ಗಳು ಸೇರಿದಂತೆ ಅನೇಕ ವಾಹನಗಳು ಪಲ್ಟಿಯಾಗಿ ಬಿದ್ದಿವೆ. ಕಾನ್ಸಾಸ್ನಲ್ಲಿ 50 ಕ್ಕೂ ಹೆಚ್ಚು ವಾಹನಗಳು ಸರಣಿ ಅಪಘಾತಕ್ಕೆ ಈಡಾಗಿದ್ದು, ಅಲ್ಲಿಯೇ ಎಂಟು ಜನರು ಮೃತಪಟ್ಟಿದ್ದಾರೆ. . ಧೂಳು ತುಂಬಿರುವ ಬಿರುಗಾಳಿ ಯಿಂದಾಗಿ ಗೋಚರತೆ ಕಡಿಮೆಯಾಗಿದ್ದು, ಅಪಘಾತಕ್ಕೆ ಕಾರಣವಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
ಮಿಸೌರಿ ರಾಜ್ಯದಲ್ಲಿ ಸುಂಟರಗಾಳಿಯಿಂದ ಸಂಬಂಧಿಸಿದಂತೆ 12 ಸಾವುಗಳನ್ನು ದೃಢಪಡಿಸಲಾಗಿದೆ. ಮರೀನಾದಲ್ಲಿ ದೋಣಿಗಳು ಒಂದರ ಮೇಲೊಂದು ರಾಶಿಯಾಗಿ ಬಿದ್ದಿರುವ ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಮರಗಳು ಮತ್ತು ವಿದ್ಯುತ್ ಕಂಬಗಳು ಬಿದ್ದಿವೆ, ಮತ್ತು ಹಲವು ಕಟ್ಟಡಗಳಿಗೆ ಹಾನಿಯಾಗಿದೆ. ಮಿಸೌರಿಯ ವೇಯ್ನ್ ಕೌಂಟಿಯಲ್ಲಿ 6, ಒಜಾರ್ಕ್ ಕೌಂಟಿಯಲ್ಲಿ 3, ಮತ್ತು ಬಟ್ಲರ್, ಜೆಫರ್ಸನ್ ಮತ್ತು ಸೇಂಟ್ ಲೂಯಿಸ್ ಕೌಂಟಿಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಟೆಕ್ಸಾಸ್ನ ದಕ್ಷಿಣ ಭಾಗದಲ್ಲಿ ವಾಹನ ಅಪಘಾತಗಳಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದೂ ವರದಿಯಾಗಿದೆ.
ನೆರೆಯ ರಾಜ್ಯ ಅರ್ಕನ್ಸಾನ್ನಲ್ಲಿ ಸುಂಟರಗಾಳಿಯಿಂದ ಮೂವರು ಮೃತಪಟ್ಟಿದ್ದು, 29 ಮಂದಿ ಗಾಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಗವರ್ನರ್ ಸಾರಾ ಹಕ್ಕಾಬೀ ಸ್ಯಾಂಡರ್ಸ್ ರಾಜ್ಯದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ವಿದ್ಯುತ್ ಸಂಪರ್ಕ ಕಡಿತ
ಮಧ್ಯ ಅಮೆರಿಕಾದ ಬಹುತೇಕ ಪ್ರದೇಶಗಳಲ್ಲಿ ಶನಿವಾರ ರಾತ್ರಿ ಸುಮಾರು 2 ಲಕ್ಷ ಮನೆಗಳ ವಿದ್ಯುತ್ ಸಂಪರ್ಕ ಕಡಿದುಹೋಗಿದೆ. ಮಿಸಿಸಿಪ್ಪಿ ಮತ್ತು ಟೆನ್ನೆಸ್ಸಿ ಸೇರಿದಂತೆ ಮಧ್ಯ ಗಲ್ಫ್ ಕರಾವಳಿ ರಾಜ್ಯಗಳಲ್ಲಿ ಸುಂಟರಗಾಳಿ ಮತ್ತಷ್ಟು ತೀವ್ರವಾಗುವ ಸಾಧ್ಯತೆ ಇದೆ ಎಂದು ಹವಾಮಾನ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
2024ರಲ್ಲಿ ಮಾತ್ರವೇ ಅಮೆರಿಕದಲ್ಲಿ ಸುಂಟರಗಾಳಿ ಸಂಬಂಧಿತ ದುರ್ಘಟನೆಗಳಿಂದಾಗಿ 54 ಮಂದಿ ಮೃತಪಟ್ಟಿದ್ದಾರೆ.