Donald Trump: ಟ್ರಂಪ್‌ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಮೊದಲೇ ಭಾರಿ ಪ್ರತಿಭಟನೆ
x
ಟ್ರಂಪ್‌ ವಿರುದ್ಧ ಪ್ರತಿಭಟನೆ ನಡೆಯಿತು.

Donald Trump: ಟ್ರಂಪ್‌ ಅಧ್ಯಕ್ಷರಾಗಿ ಪದಗ್ರಹಣ ಮಾಡುವ ಮೊದಲೇ ಭಾರಿ ಪ್ರತಿಭಟನೆ

Donald Trump: ಟ್ರಂಪ್ ವಿರೋಧಿ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು ಮುಂದಿನ ಅಧ್ಯಕ್ಷ ಹಾಗೂ ಅವರ ಗೆಳೆಉಯ ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ಸೇರಿದಂತೆ ಹಲವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.


ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಜನವರಿ 20ರಂದು ಪ್ರಮಾಣ ವಚನ ಸ್ವೀಕರಿಸುವ ಮುನ್ನವೇ ಅವರ ನೀತಿಗಳ ವಿರುದ್ಧ ಪ್ರತಿಭಟನೆ ಆರಂಭಗೊಂಡಿದೆ. ಸಾವಿರಾರು ಜನರು ವಾಷಿಂಗ್ಟನ್‌ನ ನಾನಾ ಪ್ರದೇಶಗಳಲ್ಲಿ ಜಮಾಯಿಸಿದ್ದಾರೆ.

78 ವರ್ಷದ ಟ್ರಂಪ್ ಮಂಗಳವಾರ 82 ವರ್ಷದ ಜೋ ಬೈಡನ್ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರ ವಿರುದ್ಧ ಪೀಪಲ್ಸ್ ಮಾರ್ಚ್ ಬ್ಯಾನರ್ ಅಡಿಯಲ್ಲಿ ʼಸಖಿ ಫಾರ್ ಸೌತ್ ಏಷ್ಯನ್ ಸರ್ವೈವರ್ಸ್ʼ ಸೇರಿದಂತೆ ಹಲವಾರು ಎನ್‌ಜಿಒಗಳ ಒಕ್ಕೂಟವು ಪ್ರತಿಭಟನೆ ನಡೆಸುತ್ತಿದೆ. .

ಟ್ರಂಪ್ ವಿರೋಧಿ ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳನ್ನು ಪ್ರದರ್ಶಿಸಿದ ಪ್ರತಿಭಟನಾಕಾರರು ಮುಂದಿನ ಅಧ್ಯಕ್ಷ ಹಾಗೂ ಅವರ ಗೆಳೆಉಯ ಟೆಸ್ಲಾ ಮಾಲೀಕ ಎಲೋನ್ ಮಸ್ಕ್ ಸೇರಿದಂತೆ ಹಲವರ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.

ಇದೇ ಗುಂಪು 2017 ರ ಜನವರಿಯಲ್ಲಿ ಟ್ರಂಪ್ ಅವರು ಅಧ್ಯಕ್ಷರಾಗಿದ್ದಾಗ ಇದೇ ರೀತಿಯ ಪ್ರತಿಭಟನೆ ನಡೆಸಿತ್ತು. ಮೂರು ವಿಭಿನ್ನ ಉದ್ಯಾನವನಗಳಿಂದ ಪ್ರಾರಂಭವಾದ ಮೂರು ಪ್ರತಿಭಟನೆಗಳ ಸರಣಿ ಲಿಂಕನ್ ಸ್ಮಾರಕದ ಬಳಿ ಕೊನೆಗೊಂಡಿದೆ.

"ನಾವು ಹೆದರುವುದಿಲ್ಲ. ಫ್ಯಾಸಿಸಂಗೆ ತಲೆಬಾಗುತ್ತಿಲ್ಲ ಎಂದು ನಮ್ಮ ಸಮುದಾಯಗಳಿಗೆ ಹೇಳುವುದಕ್ಕೆ ಪ್ರತಿಭಟನೆ ಅತ್ಯಂತ ಪರಿಣಾಮಕಾರಿ ಮಾರ್ಗ" ಎಂದು ಪೀಪಲ್ಸ್ ಮಾರ್ಚ್ ಹೇಳಿದೆ.

ಸೋಮವಾರ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮುಂಚಿತವಾಗಿ, ಸರಣಿ ವಾರಾಂತ್ಯದ ಕಾರ್ಯಕ್ರಮಗಳಿಗಾಗಿ ಟ್ರಂಪ್ ರಾಷ್ಟ್ರದ ರಾಜಧಾನಿಗೆ ಆಗಮಿಸಿದ್ದಾರೆ. ಈ ನಡುವೆ ಪ್ರತಿಭಟನೆಗಳು ಆರಂಭಗೊಂಡಿವೆ.

ಮೈತ್ರಿ ಸದಸ್ಯರಲ್ಲಿ ಅಬಾರ್ಷನ್‌ ಆಕ್ಷನ್‌ ನೌ, ಟೈಮ್ ಟು ಆಕ್ಟ್, ಸಿಸ್ಟರ್ ಸಾಂಗ್, ವಿಮೆನ್ಸ್ ಮಾರ್ಚ್, ಪಾಪ್ಯುಲರ್ ಡೆಮಾಕ್ರಸಿ ಇನ್ ಆಕ್ಷನ್, ಹ್ಯಾರಿಯೆಟ್ಸ್ ವೈಲ್ಡ್ಸ್ಟ್ ಡ್ರೀಮ್ಸ್, ದಿ ಫೆಮಿನಿಸ್ಟ್ ಫ್ರಂಟ್, ನೌ, ‌ ಪ್ಲಾನ್ಡ್‌ ಪೇರೆಂಟ್‌ವುಡ್‌ ಮತ್ತಿತರ ಸಂಘಟನೆಗಳಿವೆ. ಇದೇ ರೀತಿಯ ರ್ಯಾಲಿಗಳು ನ್ಯೂಯಾರ್ಕ್, ಸಿಯಾಟಲ್ ಮತ್ತು ಚಿಕಾಗೋ ಸೇರಿದಂತೆ ವಿವಿಧ ನಗರಗಳಲ್ಲಿಯೂ ನಡೆದವು.

Read More
Next Story