ಅಬುಧಾಬಿಗೆ ಹೊರಟಿದ್ದ ಎತಿಹಾದ್ ವಿಮಾನದಲ್ಲಿ ತಾಂತ್ರಿಕ ದೋಷ; 280 ಪ್ರಯಾಣಿಕರು ಪಾರು
x

ಚೆನ್ನೈನಿಂದ ಅಬುಧಾಬಿಗೆ ತೆರಳಬೇಕಿದ್ದ 'EY343' ಏರ್‌ಬಸ್ A320 ವಿಮಾನವು ಬೆಳಿಗ್ಗೆ 10:15ರ ಸುಮಾರಿಗೆ ಟೇಕ್-ಆಫ್ ಆಗಲು ರನ್‌ವೇಯತ್ತ ಚಲಿಸುತ್ತಿದ್ದಾಗ, ವಿಮಾನದ ಹೈಡ್ರಾಲಿಕ್ ಸಿಸ್ಟಮ್‌ನಲ್ಲಿ ದೋಷವಿರುವುದು ಹಾಗೂ ದ್ರವ ಸೋರಿಕೆಯಾಗುತ್ತಿರುವುದು ಪೈಲಟ್‌ಗಳ ಗಮನಕ್ಕೆ ಬಂದಿದೆ. 

ಅಬುಧಾಬಿಗೆ ಹೊರಟಿದ್ದ ಎತಿಹಾದ್ ವಿಮಾನದಲ್ಲಿ ತಾಂತ್ರಿಕ ದೋಷ; 280 ಪ್ರಯಾಣಿಕರು ಪಾರು

ಚೆನ್ನೈನಿಂದ ಅಬುಧಾಬಿಗೆ ತೆರಳಬೇಕಿದ್ದ 'EY343' ಏರ್‌ಬಸ್ A320 ವಿಮಾನವು ಬೆಳಿಗ್ಗೆ 10:15ರ ಸುಮಾರಿಗೆ ಟೇಕ್-ಆಫ್ ಆಗಲು ರನ್‌ವೇಯತ್ತ ಚಲಿಸುತ್ತಿದ್ದಾಗ, ವಿಮಾನದ ಹೈಡ್ರಾಲಿಕ್ ಸಿಸ್ಟಮ್‌ನಲ್ಲಿ ದೋಷವಿರುವುದು ಹಾಗೂ ದ್ರವ ಸೋರಿಕೆಯಾಗುತ್ತಿರುವುದು ಪೈಲಟ್‌ಗಳ ಗಮನಕ್ಕೆ ಬಂದಿದೆ.


Click the Play button to hear this message in audio format

ತಮಿಳುನಾಡಿನ ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಬುಧಾಬಿಗೆ ಹೊರಡಲು ಸಜ್ಜಾಗಿದ್ದ ಎತಿಹಾದ್ ಏರ್‌ವೇಸ್ ವಿಮಾನದಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ತಾಂತ್ರಿಕ ದೋಷ (ಹೈಡ್ರಾಲಿಕ್ ಸೋರಿಕೆ) ಕಾಣಿಸಿಕೊಂಡಿದ್ದು, ವಿಮಾನದಲ್ಲಿದ್ದ 280ಕ್ಕೂ ಹೆಚ್ಚು ಪ್ರಯಾಣಿಕರು ಪಾರಾಗಿದ್ದಾರೆ.

ಚೆನ್ನೈನಿಂದ ಅಬುಧಾಬಿಗೆ ತೆರಳಬೇಕಿದ್ದ 'EY343' ಏರ್‌ಬಸ್ A320 ವಿಮಾನವು ಬೆಳಿಗ್ಗೆ 10:15ರ ಸುಮಾರಿಗೆ ಟೇಕ್-ಆಫ್ ಆಗಲು ರನ್‌ವೇಯತ್ತ ಚಲಿಸುತ್ತಿದ್ದಾಗ, ವಿಮಾನದ ಹೈಡ್ರಾಲಿಕ್ ಸಿಸ್ಟಮ್‌ನಲ್ಲಿ ದೋಷವಿರುವುದು ಹಾಗೂ ದ್ರವ ಸೋರಿಕೆಯಾಗುತ್ತಿರುವುದು ಪೈಲಟ್‌ಗಳ ಗಮನಕ್ಕೆ ಬಂದಿದೆ. ತಕ್ಷಣವೇ ಎಚ್ಚೆತ್ತ ಪೈಲಟ್‌ಗಳು ವಿಮಾನದ ಟೇಕ್-ಆಫ್ ಪ್ರಕ್ರಿಯೆಯನ್ನು ರದ್ದುಗೊಳಿಸಿ, ವಿಮಾನವನ್ನು ಸುರಕ್ಷಿತವಾಗಿ ಮರಳಿ ಪಾರ್ಕಿಂಗ್ ಬೇ ಗೆ ತಂದಿದ್ದಾರೆ.

ಬೆಂಕಿ ಹೊತ್ತಿಕೊಂಡಿಲ್ಲ

ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಳ್ಳುತ್ತಿದ್ದಂತೆ, ವಿಮಾನದ ಎಡಭಾಗದ ರೆಕ್ಕೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಸುದ್ದಿ ಹರಿದಾಡಿ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿತ್ತು. ಆದರೆ, ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಎತಿಹಾದ್ ಏರ್‌ವೇಸ್ ಈ ವದಂತಿಯನ್ನು ತಳ್ಳಿಹಾಕಿದೆ. "ವಿಮಾನದಲ್ಲಿ ಯಾವುದೇ ಬೆಂಕಿ ಅವಘಡ ಸಂಭವಿಸಿಲ್ಲ. ಕೇವಲ ತಾಂತ್ರಿಕ ದೋಷದಿಂದಾಗಿ ವಿಮಾನವನ್ನು ಟೇಕ್-ಆಫ್ ಮಾಡದೆ ವಾಪಸ್ ತರಲಾಯಿತು. ಮುನ್ನೆಚ್ಚರಿಕಾ ಕ್ರಮವಾಗಿ ಚೆನ್ನೈ ವಿಮಾನ ನಿಲ್ದಾಣದ ಸುರಕ್ಷತಾ ಪ್ರೋಟೋಕಾಲ್ ಪ್ರಕಾರ ತುರ್ತು ಸೇವೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು," ಎಂದು ಸ್ಪಷ್ಟಪಡಿಸಿದೆ.

ಪ್ರಯಾಣಿಕರು ಸುರಕ್ಷಿತ

ವಿಮಾನದಲ್ಲಿದ್ದ ಸುಮಾರು 280 ಪ್ರಯಾಣಿಕರನ್ನು ಹಾಗೂ ಸಿಬ್ಬಂದಿಯನ್ನು ಸುರಕ್ಷಿತವಾಗಿ ಕೆಳಗಿಳಿಸಲಾಗಿದ್ದು, ಯಾರಿಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ. ವಿಮಾನದ ತಾಂತ್ರಿಕ ದೋಷವನ್ನು ಎಂಜಿನಿಯರ್‌ಗಳ ತಂಡ ಸರಿಪಡಿಸಿದ ಬಳಿಕ, ನಿಗದಿತ ಸಮಯಕ್ಕಿಂತ ಸುಮಾರು ಮೂರು ಗಂಟೆ ವಿಳಂಬವಾಗಿ (ಮಧ್ಯಾಹ್ನ 2. 48ಕ್ಕೆ) ವಿಮಾನವು ಅಬುಧಾಬಿಯತ್ತ ಪ್ರಯಾಣ ಬೆಳೆಸಿತು. ಈ ಅನಿರೀಕ್ಷಿತ ವಿಳಂಬದಿಂದ ಪ್ರಯಾಣಿಕರಿಗಾದ ಅನಾನುಕೂಲತೆಗಾಗಿ ವಿಮಾನಯಾನ ಸಂಸ್ಥೆ ಕ್ಷಮೆಯಾಚಿಸಿದೆ.

Read More
Next Story