Sunita Williamss: ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುವಿಕೆ ಮತ್ತೊಮ್ಮೆ ವಿಳಂಬ: ಹೊಸ ದಿನಾಂಕ ಪ್ರಕಟಿಸಿದ ನಾಸಾ
x

Sunita Williams's: ಸುನೀತಾ ವಿಲಿಯಮ್ಸ್ ಭೂಮಿಗೆ ಮರಳುವಿಕೆ ಮತ್ತೊಮ್ಮೆ ವಿಳಂಬ: ಹೊಸ ದಿನಾಂಕ ಪ್ರಕಟಿಸಿದ ನಾಸಾ

Sunita Williams's: ಸ್ಪೇಸ್​ ಎಕ್ಸ್​ ಯೋಜನೆಯ ಪ್ರಕಾರ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಹಿಂದಿರುಗಿಸಲು ಯೋಜಿಸಲಾಗಿತ್ತು. ಎಲ್ಲವೂ ಯೋಜನೆಯಂತೆ ನಡೆದಿದ್ದರೆ, ವಿಲಿಯಮ್ಸ್ ಈ ತಿಂಗಳಲ್ಲಿಯೇ ಭೂಮಿಗೆ ಕಾಲಿಡಬೇಕಾಗಿತ್ತು.


ಕಳೆದ 9 ತಿಂಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಉಳಿದಿರುವ ನಾಸಾ ಗಗನಯಾತ್ರಿ ಭಾರತ ಮೂಲದ ಸುನೀತಾ ವಿಲಿಯಮ್ಸ್ ಅವರು ಭೂಮಿಗೆ ಮರಳುವ ದಿನಾಂಕ ಮತ್ತಷ್ಟು ವಿಸ್ತರಣೆಗೊಂಡಿದೆ. ಸ್ಪೇಸ್ಎಕ್ಸ್ ತನ್ನ ಕ್ರ್ಯೂ-10 ಮಿಷನ್ ಉಡಾವಣೆಯನ್ನು ತಾಂತ್ರಿಕ ಕಾರಣಗಳಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಈ ಮಿಷನ್‌ ಮೂಲಕ ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಗನಯಾತ್ರಿಗಳನ್ನುಬದಲಾಯಿಸುವ ಯೋಜನೆ ಇತ್ತು.

ಸ್ಪೇಸ್​ ಎಕ್ಸ್​ ಯೋಜನೆಯ ಪ್ರಕಾರ ವಿಲಿಯಮ್ಸ್ ಮತ್ತು ಅವರ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಅವರನ್ನು ಭೂಮಿಗೆ ಹಿಂದಿರುಗಿಸಲು ಯೋಜಿಸಲಾಗಿತ್ತು. ಎಲ್ಲವೂ ಯೋಜನೆಯಂತೆ ನಡೆದಿದ್ದರೆ, ವಿಲಿಯಮ್ಸ್ ಈ ತಿಂಗಳಲ್ಲಿಯೇ ಭೂಮಿಗೆ ಕಾಲಿಡಬೇಕಾಗಿತ್ತು. ಆದರೆ, ಫಾಲ್ಕನ್ 9 ರಾಕೆಟ್‌ಗೆ ಸಂಬಂಧಿಸಿದ ಗ್ರೌಂಡ್ ಸಪೋರ್ಟ್ ಕ್ಲಾಂಪ್ ಆರ್ಮ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಕಾರಣ, ಉಡಾವಣೆ ಮುಂದೂಡಲಾಗಿದೆ ಎಂದು ನಾಸಾ ತಿಳಿಸಿದೆ.

ತಾಂತ್ರಿಕ ದೋಷವನ್ನು ಸರಿಪಡಿಸಿದ ನಂತರ, ಕ್ರೂ-10 ಮಿಷನ್ ಶನಿವಾರ ಯಶಸ್ವಿಯಾಗಿ ಉಡಾವಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸುನೀತಾ ವಿಲಿಯಮ್ಸ್ ಮತ್ತು ವಿಲ್ಮೋರ್ ಮಾರ್ಚ್ 20ರ ನಂತರ ಐಎಸ್ಎಸ್‌ನಿಂದ ನಿರ್ಗಮಿಸುವ ನಿರೀಕ್ಷೆಯಿದೆ.

ನಾಸಾದ ಸುರಕ್ಷತೆ ಭರವಸೆ

ಕ್ರೂ-10 ಮಿಷನ್ ಹೊಸ ಗಗನಯಾತ್ರಿಗಳ ತಂಡವನ್ನು ಐಎಸ್ಎಸ್‌ಗೆ ಕಳುಹಿಸಲಿದೆ. ಇದರಲ್ಲಿ ನಾಸಾದ ಅನ್ನೆ ಮೆಕ್ಲೈನ್ ಮತ್ತು ನಿಕೋಲ್ ಅಯರ್ಸ್, ಜಾಕ್ಸಾದ ಟಕುಯಾ ಒನಿಶಿ, ಮತ್ತು ರೋಸ್‌ಕಾಸ್ಮೋಸ್‌ನ ಕಿರಿಲ್ ಪೆಸ್ಕೊವ್ ಸೇರಿದ್ದಾರೆ. ವಿಳಂಬದ ಹೊರತಾಗಿಯೂ, ಗಗನಯಾತ್ರಿಗಳ ಆರೋಗ್ಯ ಮತ್ತು ಸುರಕ್ಷತೆ ನಮ್ಮ ಮೊದಲ ಆದ್ಯತೆ" ಎಂದು ನಾಸಾ ಹೇಳಿದೆ. ಬಾಹ್ಯಾಕಾಶ ಕೇಂದ್ರದಲ್ಲಿರುವ ಸಿಬ್ಬಂದಿಗೆ ಅಗತ್ಯ ವಸ್ತುಗಳನ್ನು ನಾಸಾ ಒದಗಿಸುತ್ತಿದೆ ಎಂದು ಹೇಳಿದೆ.


9 ತಿಂಗಳ ಕಾಯುವಿಕೆ

9 ತಿಂಗಳ ಹಿಂದೆ, ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಬೋಯಿಂಗ್‌ನ ಸ್ಟಾರ್ ಲೈನರ್ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣಿಸಿದ್ದರು. ಮೊದಲು ಕೇವಲ 8 ದಿನಗಳ ಪ್ರವಾಸ ಯೋಜಿಸಲಾಗಿತ್ತು, ಆದರೆ, ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ, ಅವರು ವಾಪಸಾಗಲಾಗದೆ ಸ್ಪೇಸ್ ಸೆಂಟರ್​ನಲ್ಲಿ ಉಳಿಯಬೇಕಾಯಿತು.

ನಾಸಾ ಮತ್ತು ಸ್ಪೇಸ್ಎಕ್ಸ್ ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಲು ನಿರಂತರ ಪ್ರಯತ್ನ ನಡೆಸುತ್ತಿದ್ದು, ಗಗನಯಾತ್ರಿಗಳ ಸುರಕ್ಷಿತ ಮರಳುವಿಕೆಗಾಗಿ ಜಗತ್ತು ಕಾಯುತ್ತಿದೆ.

Read More
Next Story