
Sunita Williams Return | ಮಾರ್ಚ್ 18ರಂದು ಭೂಮಿಗೆ ಮರಳಲಿರುವ ಸುನೀತಾ ವಿಲಿಯಮ್ಸ್
ನಾಸಾ ನೀಡಿದ ಮಾಹಿತಿ ಪ್ರಕಾರ, ನೌಕೆ ಇಳಿಯುವ ಸಮಯ ಮಂಗಳವಾರ (ಮಾರ್ಚ್ 18) ಸಂಜೆ 5:57 (ವಾಷಿಂಗ್ಟನ್ ಸಮಯ) (ಭಾರತೀಯ ಕಾಲಮಾನ ಪ್ರಕಾರ ಮಾರ್ಚ್ 19, ಬುಧವಾರ ಮುಂಜಾನೆ 3:27).
ಒಂಬತ್ತು ತಿಂಗಳಿಗೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್) ಉಳಿದಿದ್ದ ಯುಎಸ್ ಗಗನಯಾತ್ರಿಗಳಾದ ಸುನೀತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಮಂಗಳವಾರ (ಮಾರ್ಚ್ 17) ಭೂಮಿಗೆ ಮರಳಲಿದ್ದಾರೆ ಎಂದು ನಾಸಾ ಭಾನುವಾರ ತಿಳಿಸಿದೆ.
ವಿಲಿಯಮ್ಸ್ ಮತ್ತು ವಿಲ್ಮೋರ್ ಅವರನ್ನು ಸ್ಪೇಸ್ ಎಕ್ಸ್ ಕ್ರೂ -9 ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಭೂಮಿಗೆ ಕರೆಸಿಕೊಳ್ಳಲಾಗುವುದು ಎಂದು ಯುಎಸ್ ಬಾಹ್ಯಾಕಾಶ ಸಂಸ್ಥೆ ತಿಳಿಸಿದೆ ಮತ್ತು ಫ್ಲೋರಿಡಾ ಕರಾವಳಿಯಲ್ಲಿ ಇಳಿಯಲಿದೆ ಎಂದು ಹೇಳಿದೆ.
ನಾಸಾ ಪ್ರಕಾರ, ನೌಕೆ ಇಳಿಯುವ ಸಮಯ ಮಂಗಳವಾರ (ಮಾರ್ಚ್ 18) ಸಂಜೆ 5:57 (ವಾಷಿಂಗ್ಟನ್ ಸಮಯ) (ಭಾರತೀಯ ಕಾಲಮಾನ ಪ್ರಕಾರ ಮಾರ್ಚ್ 19, ಬುಧವಾರ ಮುಂಜಾನೆ 3:27).
ಮಾರ್ಚ್ 17 ರ ಸೋಮವಾರ ರಾತ್ರಿ 10:45 ಕ್ಕೆ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಬಾಹ್ಯಾಕಾಶ ನಿಲ್ದಾಣದಿಂದ ಬೇರ್ಪಟ್ಟು ಭೂಮಿಯ ಕಡೆಗೆ ಪ್ರಯಾಣ ಆರಂಭಿಸಲಿದೆ. ಅದರ ನೇರ ಪ್ರಸಾರವೂ ಲಭ್ಯವಿದೆ ಎಂದು ನಾಸಾ ಹೇಳಿದೆ.
ಕ್ರೂ -9 ಮಿಷನ್ ಮರಳುವ ನಿಟ್ಟಿನಲ್ಲಿ ಫ್ಲೋರಿಡಾದ ಕರಾವಳಿಯಲ್ಲಿ ಹವಾಮಾನ ಮತ್ತು ಸ್ಪ್ಲಾಶ್ ಡೌನ್ ಪರಿಸ್ಥಿತಿಗಳನ್ನು ನಿರ್ಣಯಿಸಲು ನಾಸಾ ಮತ್ತು ಸ್ಪೇಸ್ಎಕ್ಸ್ ಭಾನುವಾರ ಸಭೆ ಸೇರಿದವು.
ಪರಿಸ್ಥಿತಿಗಳ ಆಧಾರದ ಮೇಲೆ ಲ್ಯಾಂಡ್
ಮಾರ್ಚ್ 18 ರ ಮಂಗಳವಾರ ಸಂಜೆ ಮುನ್ಸೂಚನೆ ನೀಡಿದ ಅನುಕೂಲಕರ ಪರಿಸ್ಥಿತಿಗಳ ಆಧಾರದ ಕ್ರ್ಯೂ- 9 ಭೂಮಿಯಲ್ಲಿ ಇಳಿಯಲಿದೆ. ಯಾಕೆಂದರೆ ವಾರಾಂತ್ಯದಲ್ಲಿ ಹವಾಮಾನ ಪರಿಸ್ಥಿತಿಗಳು ಪೂರಕವಾಗಿಲ್ಲದ ಕಾರಣ ಅದಕ್ಕಿಂತ ಮೊದಲೇ ಇಳಿಸುವ ಯೋಜನೆ ಇದೆ.
ಸುನೀತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಜತೆಗೆ ನಿಕ್ ಹೇಗ್ ಹಾಗೂ ಅಲೆಕ್ಸಾಂಡರ್ ಅವರು ಸೇರಿ ಒಟ್ಟು ನಾಲ್ವರನ್ನು ಗಗನನೌಕೆಯು ಫ್ಲೋರಿಡಾದ ಕಡಲ ತೀರಕ್ಕೆ ಬಂದು ಇಳಿಯಲಿದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.
ಬೋಯಿಂಗ್ ಸಂಸ್ಥೆಯ ಸ್ಟಾರ್ ಲೈನರ್ ಗಗನನೌಕೆಯಲ್ಲಿ 2024ರ ಜೂನ್ 5ರಂದು ಇವರು ಐಎಸ್ ಎಸ್ ಗೆ ತೆರಳಿದ್ದರು. ಒಂಬತ್ತು ದಿನಗಳ ಅಧ್ಯಯನದ ನಂತರ ಇವರು ಭೂಮಿಗೆ ವಾಪಸಾಗಬೇಕಿತ್ತು. ಆದರೆ, ಗಗನನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಮರಳಲು ಆಗಿರಲಿಲ್ಲ.