Sunita Williams : ಪುಟಿದೆದ್ದ ʼಬಾಹ್ಯಾಕಾಶ ರಾಣಿʼ; ಭಾರತ ಸಂಜಾತೆಯ ವಿಶ್ವ ದಾಖಲೆಯ ಸ್ಪೇಸ್‌ ವಾಕ್‌
x
ಬಾಹ್ಯಾಕಾಶ ನಡಿಗೆ ನಡೆಸಿದ ಸುನಿತಾ ವಿಲಿಯಮ್ಸ್‌.

Sunita Williams : ಪುಟಿದೆದ್ದ ʼಬಾಹ್ಯಾಕಾಶ ರಾಣಿʼ; ಭಾರತ ಸಂಜಾತೆಯ ವಿಶ್ವ ದಾಖಲೆಯ ಸ್ಪೇಸ್‌ ವಾಕ್‌

Sunita Williams : ಬಾಹ್ಯಾಕಾಶ ನಡಿಗೆ 18.31 IST ( ಭಾರತೀಯ ಕಾಲಮಾನ ಸಂಜೆ 6:31ಕ್ಕೆ ) ಕ್ಕೆ ಪ್ರಾರಂಭಗೊಂಡಿತು. ವಿಲಿಯಮ್ಸ್ ಮತ್ತು ಹೇಗ್ ಮೊದಲು ಗೈರೊ ಅಸೆಂಬ್ಲಿಯನ್ನು ಬದಲಾಯಿಸಿದರು.


ಬಾಹ್ಯಾಕಾಶ ಕೇಂದ್ರದಲ್ಲಿರುವ ನಾಸಾದ ಗಗನಯಾತ್ರಿ ಸುನಿತಾ ವಿಲಿಯಮ್ಸ್ (Sunita Williams) ಸುರಕ್ಷಿತವಾಗಿದ್ದಾರೆ. ಅವರ ಆರೋಗ್ಯ ಕಾಳಜಿ ವ್ಯಕ್ತಪಡಿಸಿದ್ದವರಿಗೆ ಸಮಾಧಾನವಾಗಿದೆ. ಗುರುವಾರ ಅವರು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಬಾಹ್ಯಾಕಾಶ ನಡಿಗೆ Spacewalk) ಮಾಡಿದ್ದಾರೆ. ನಿಲ್ದಾಣದ ಕಮಾಂಡರ್, ಆಗಿರುವ ಅವರು ಕೆಲ ದುರಸ್ತಿ ಕಾರ್ಯಕ್ಕಾಗಿ ಸಹವರ್ತಿ ನಿಕ್ ಹೇಗ್ ಜೊತೆ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ. ಇದು ಅವರ 8ನೆಯ ಬಾಹ್ಯಾಕಾಶ ನಡಿಗೆಯಾಗಿದೆ.59 ವರ್ಷದವರಾಗಿರುವ ಅವರು ಈ ಸಾಧನೆ ಮಾಡಿದ ವಿಶ್ವದ ಮೊಟ್ಟ ಮೊದಲ ಮಹಿಳಾ ಗಗನಯಾತ್ರಿ ಎಂಬ ವಿಶ್ವ ದಾಖಲೆ ಮಾಡಿದ್ದಾರೆ. ಇಲ್ಲಿಗೆ ಅವರ ಸಾಧನೆ ನಿಂತಿಲ್ಲ. ಶೀಘ್ರದಲ್ಲೇ ಮತ್ತೊಂದು ಬಾಹ್ಯಾಕಾಶ ನಡಿಗೆಯನ್ನು ಅವರು ಮಾಡಲಿದ್ದಾರೆ.


ಬಾಹ್ಯಾಕಾಶ ನಡಿಗೆ 18.31 IST ( ಭಾರತೀಯ ಕಾಲಮಾನ ಸಂಜೆ 6:31ಕ್ಕೆ ) ಕ್ಕೆ ಪ್ರಾರಂಭಗೊಂಡಿತು. ವಿಲಿಯಮ್ಸ್ ಮತ್ತು ಹೇಗ್ ಮೊದಲು ಗೈರೊ ಅಸೆಂಬ್ಲಿಯನ್ನು ಬದಲಾಯಿಸಿದರು. ಇದು ಟ್ರ್ಯಾಕ್ ಮಾಡುವ ಒಂದು ನಿರ್ಣಾಯಕ ಹಾರ್ಡ್‌ವೇರ್ . ಹೊಸ ಜೋಡಣೆ ಮಾಡಿದ ಬಳಿಕ ಹೇಗ್ ಬದಲಿ ಘಟಕವನ್ನು ಇಟ್ಟುಕೊಂಡರು.

ಹೊಸದಾಗಿ ಸ್ಥಾಪಿಸಲಾದ ಗೈರೋ ಕಾರ್ಯಾಚರಿಸುತ್ತಿದೆ ಎಂದು ಗ್ರೌಂಡ್ ಕಂಟ್ರೋಲ್ ತಂಡಗಳು ದೃಢಪಡಿಸಿದವು. ವಿಲಿಯಮ್ಸ್ ನಂತರ ಹಾರ್ಮನಿ ಮಾಡ್ಯೂಲ್‌ನ ಮೇಲೆ ಅಳವಡಿಸಲಾದ ಪ್ರತಿಫಲಕ ಬದಲಾಯಿಸಿದರು, ಬಾಹ್ಯಾಕಾಶ ನೌಕೆಗಳಿಗೆ ಮಾರ್ಗದರ್ಶನ ನೀಡಲು ಇದು ಅವಶ್ಯಕವಾಗಿದೆ.

ಇನ್ನು ಸ್ಪೇಸ್‌ ಸ್ಟೇಷನ್‌ನ ದೂರದರ್ಶಕವು ಮೇ 2023 ರಿಂದ ಸಮಸ್ಯೆಗಳನ್ನು ಎದುರಿಸುತ್ತಿತ್ತು. ಕೂಲಿಂಗ್ ಲೂಪ್ ಸಮಸ್ಯೆಯಿಂದಾಗಿ ಗಗನಯಾತ್ರಿಗಳ ಸೂಟ್ ಏರ್‌ಲಾಕ್‌ಗೆ ನೀರು ಸೋರಿಕೆ ಉಂಟಾಗುತ್ತಿತ್ತು.

ಸುನಿತಾ ವಿಲಿಯಮ್ಸ್ ತಮ್ಮ ಒಟ್ಟು ಎಂಟು ಬಾಹ್ಯಾಕಾಶ ನಡಿಗೆಯಲ್ಲಿ 56 ಗಂಟೆ 40 ನಿಮಿಷ ಕಳೆದಿದ್ದಾರೆ.ನಿಕ್ ಹೇಗ್‌ಗೆ, ನಾಲ್ಕನೇ ಬಾಹ್ಯಾಕಾಶ ನಡಿಗೆಯಾಗಿದೆ. ವಿಲಿಯಮ್ಸ್ ಮತ್ತು ಹೇಗ್ ಜನವರಿ 23, 2025 ರಂದು ಮತ್ತೊಂದು ಬಾಹ್ಯಾಕಾಶ ನಡಿಗೆ ನಡೆಸಲು ಸಿದ್ಧರಾಗಿದ್ದಾರೆ.

Read More
Next Story