
Shoot Out: ಶಾಲಾ ಬಾಲಕಿಯಿಂದ ಗುಂಡಿನ ದಾಳಿ: ಇಬ್ಬರ ಸಾವು, ಆರು ಮಂದಿಗೆ ಗಂಭೀರ ಗಾಯ
Shoot Out: ಶೂಟೌಟ್ ಘಟನೆಯಲ್ಲಿ ಆರು ಜನರು ತೀವ್ರವಾಗಿ ಗಾಯಗೊಂಡಿದ್ದು, ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಅಮೆರಿಕದ ವಿಸ್ಕಾನ್ಸಿನ್ನ ಶಾಲೆಯೊಂದರಲ್ಲಿ ಸೋಮವಾರ (ಡಿಸೆಂಬರ್ 16) ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಗುಂಡಿನ ಸುರಿಮಳೆಗೈದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕರೊಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಶೂಟರ್ ಬಳಿಕ ಮೃತದೇಹವಾಗಿ ಪತ್ತೆಯಾಗಿದ್ದಾನೆ ಎಂದು ವರದಿಗಳು ತಿಳಿಸಿವೆ.
ಶಿಶುವಿಹಾರದಿಂದ 12 ನೇ ತರಗತಿಯವರೆಗೆ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಖಾಸಗಿ ಶಾಲೆಯಾದ ಅಬುಂಡಂಟ್ ಲೈಫ್ ಕ್ರಿಶ್ಚಿಯನ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಶೂಟರ್ ಹ್ಯಾಂಡ್ ಗನ್ ಬಳಸಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪೊಲೀಸರ ತಂಡವು ಶಾಲೆಗೆ ತಲುಪುವ ಹೊತ್ತಿಗೆ ಶಾಲಾ ಆವರಣದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಶೂಟ್ ಮಾಡಿದ ಬಾಲಕಿಯ ಗುರುತು ಕುರಿತು ಅಧಿಕಾರಿಗಳು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ. ಮಾಧ್ಮಮಗಳ ವರದಿ ಪ್ರಕಾರ ಗುಂಡು ಹಾರಿಸಿದ್ದು 17 ವರ್ಷದ ಹುಡುಗಿ ಎಂದು ಹೇಳಲಾಗಿದೆ. ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದೆ ಮತ್ತು ಗುಂಡು ತಗುಲಿದ ಶಿಕ್ಷಕರೊಬ್ಬರು ಮತ್ತು ಇತರ ಮೂವರು ವಿದ್ಯಾರ್ಥಿಗಳು ಬದುಕುಳಿಯುವ ನಿರೀಕ್ಷೆಯಿದೆ ಎಂದು ಮ್ಯಾಡಿಸನ್ ಪೊಲೀಸ್ ಮುಖ್ಯಸ್ಥ ಶಾನ್ ಬಾರ್ನ್ಸ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಇತರ ಇಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದ್ದಾಎ.
ಗುಂಡಿನ ದಾಳಿಯ ಹಿಂದಿನ ಉದ್ದೇಶ ಇನ್ನೂ ತಿಳಿದುಬಂದಿಲ್ಲ ಎಂದು ಹೇಳಿದೆ. ತನಿಖೆಗೆ ಶೂಟ್ ಮಾಡಿದ ಬಾಲಕಿಯ ಕುಟುಂಬವು ಸಹಕರಿಸುತ್ತಿದೆ ಎಂದು ಹೇಳಿದ್ದಾರೆ. .
"ಇಂದು ಮ್ಯಾಡಿಸನ್ಗೆ ಮಾತ್ರವಲ್ಲ, ನಮ್ಮ ಇಡೀ ದೇಶಕ್ಕೆ ದುಃಖದ, ದುಃಖದ ದಿನ" ಎಂದು ಬಾರ್ನ್ಸ್ ಸುದ್ದಿಗಾರರಿಗೆ ತಿಳಿಸಿದರು. ಈ ವರ್ಷವೊಂದರಲ್ಲೇ ಅಮೆರಿಕದ ಶಾಲೆಗಳಲ್ಲಿ 322 ಗುಂಡಿನ ದಾಳಿ ಪ್ರಕರಣ ನಡೆಯುತ್ತಿವೆ. ಇದು ಇತ್ತೀಚಿನ ಪ್ರಕರಣವಾಗಿದೆ.