ಶ್ರೀಲಂಕಾ: ಅಧ್ಯಕ್ಷೀಯ ಚುನಾವಣೆ- ರಾನಿಲ್ ಗೆ ಬೆಂಬಲ ಹೆಚ್ಚಳ
x

ಶ್ರೀಲಂಕಾ: ಅಧ್ಯಕ್ಷೀಯ ಚುನಾವಣೆ- ರಾನಿಲ್ ಗೆ ಬೆಂಬಲ ಹೆಚ್ಚಳ


ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ಅವರಿಗೆ 30 ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಮತ್ತು ಒಕ್ಕೂಟಗಳು ಬೆಂಬಲ ನೀಡಿವೆ.

ವಿಕ್ರಮಸಿಂಘೆ(75) ಅವರು ಗುರುವಾರ ಸ್ವತಂತ್ರ ಅಭ್ಯರ್ಥಿ ಎಂದು ಘೋಷಿಸಿದರು. ಆಡಳಿತಾರೂಢ ಯುನೈಟೆಡ್ ನ್ಯಾಶನಲ್ ಪಾರ್ಟಿ (ಯುಎನ್‌ಪಿ)ಯ ನಾಯಕನಿಗೆ ಶ್ರೀಲಂಕಾ ಪೊದುಜನ ಪೆರಮುನ (ಎಸ್‌ಎಲ್‌ಪಿಪಿ)ದಿಂದ ಬೇರ್ಪಟ್ಟ ಗುಂಪು ಬೆಂಬಲ ನೀಡಿದೆ.

ನಮಲ್ ಅಭ್ಯರ್ಥಿ: ಮಾಜಿ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಅವರ ಪುತ್ರ ನಮಲ್ ರಾಜಪಕ್ಸೆ (38) ಅವರನ್ನು ವಿಕ್ರಮಸಿಂಘೆ ವಿರುದ್ಧ ಎಸ್‌ಎಲ್‌ಪಿಪಿ ಕಣಕ್ಕಿಳಿಸಿದೆ. ವಿಕ್ರಮಸಿಂಘೆ ಅವರ ಪ್ರಮುಖ ಪ್ರತಿಸ್ಪರ್ಧಿಗಳೆಂದರೆ, ಅವರ ಮಾಜಿ ಉಪನಾಯಕ ಸಜಿತ್ ಪ್ರೇಮದಾಸ ಮತ್ತು ಮಾರ್ಕ್ಸ್‌ವಾದಿ ಜನತಾ ವಿಮುಕ್ತಿ ಪೆರಮುನ (ಜೆವಿಪಿ) ನಾಯಕ ಅನುರ ಕುಮಾರ ಡಿಸನಾಯಕೆ.

ಆರ್ಥಿಕ ಬಿಕ್ಕಟ್ಟಿನ ವಿರುದ್ಧದ ಸಾಮೂಹಿಕ ಪ್ರತಿಭಟನೆ ನಂತರ 2022 ರಲ್ಲಿ ಗೋಟಾಬಯ ರಾಜಪಕ್ಸೆ ಅವರು ಪದಚ್ಯುತಗೊಂಡ ನಂತರ ವಿಕ್ರಮಸಿಂಘೆ ಅವರು ತಾತ್ಕಾಲಿಕ ಅಧ್ಯಕ್ಷರಾಗಿ ಆಯ್ಕೆಯಾದರು. ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಒತ್ತಾಯದ ಮೇರೆಗೆ ಆರ್ಥಿಕ ಸುಧಾರಣೆಗಳನ್ನು ಪ್ರಾರಂಭಿಸಿದ ವಿಕ್ರಮಸಿಂಘೆ, ಆರ್ಥಿಕತೆಯನ್ನು ಹೇಗೆ ರಕ್ಷಿಸಲಾಯಿತು ಎಂಬ ಕುರಿತು ಗುರುವಾರ ಮಾತನಾಡಿದರು.

ಆರ್ಥಿಕ ಬದಲಾವಣೆ: ʻಈ ಕಷ್ಟಕರ ಕೆಲಸವನ್ನು ನಿಭಾಯಿಸಲು ನನಗೆ ಬೆಂಬಲ ನೀಡಿದವರಿಗೆ ನಾನು ಕೃತಜ್ಞನಾಗಿದ್ದೇನೆ. ದೇಶದ ಜವಾಬ್ದಾರಿಯನ್ನು ನಿರ್ವಹಿಸುವ ಸವಾಲು ಎದುರಾದಾಗ ನಾನು ಓಡಿಹೋಗಲಿಲ್ಲ,ʼ ಎಂದು ವಿತ್ತ ಸಚಿವರೂ ಆಗಿರುವ ವಿಕ್ರಮಸಿಂಘೆ ಹೇಳಿದರು.

ಅವರ ಸುಧಾರಣೆಗಳು ವ್ಯಾಪಕವಾಗಿ ಮೆಚ್ಚುಗೆ ಪಡೆದಿಲ್ಲ: ಆದರೆ, ಅಗತ್ಯ ವಸ್ತುಗಳ ಕೊರತೆ ಕೊನೆಗೊಂಡಿದೆ. ಆದರೆ, ಜನರು ಕಷ್ಟ ಎದುರಿಸುತ್ತಿದ್ದಾರೆ ಎಂದು ವಿರೋಧ ಪಕ್ಷಗಳು ಹೇಳುತ್ತವೆ.


Read More
Next Story