ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ಸೆಪ್ಟೆಂಬರ್ 21 ರಂದು
x

ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ಸೆಪ್ಟೆಂಬರ್ 21 ರಂದು


ಕೊಲಂಬೊ, ಜುಲೈ 26: ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ ಸೆಪ್ಟೆಂಬರ್ 21 ರಂದು ನಡೆಯಲಿದೆ ಎಂದು ಚುನಾವಣೆ ಆಯೋಗ ಶುಕ್ರವಾರ ಪ್ರಕಟಿಸಿದೆ.

ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ದೇಶದ ಭವಿಷ್ಯವನ್ನು ನಿರ್ಧರಿಸುವ ಪ್ರಮುಖ ಸ್ಪರ್ಧೆ ಕುರಿತ ತಿಂಗಳು ಊಹಾಪೋಹಗಳಿಗೆ ಘೋಷಣೆ ಅಂತ್ಯ ಹಾಡಿದೆ. 2022 ರಲ್ಲಿ ಶ್ರೀಲಂಕಾ ಆರ್ಥಿಕ ದಿವಾಳಿ ಹೊಂದಿದ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.

ಶುಕ್ರವಾರ ಹೊರಡಿಸಿದ ರಾಜ್ಯಪತ್ರದ ಪ್ರಕಾರ, ಸಂವಿಧಾನದ 31 (3) ಕ್ಕೆ ಅನುಗುಣವಾಗಿ ಸೆಪ್ಟೆಂಬರ್ 21 ರಂದು ಚುನಾವಣೆ ನಡೆಯಲಿದ್ದು, ಆಗಸ್ಟ್ 15 ರಂದು ನಾಮಪತ್ರಗಳನ್ನು ಸ್ವೀಕರಿಸಲಾಗುವುದು ಎಂದು ಹೇಳಿದೆ.

ಹಾಲಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರ ಅವಧಿಯನ್ನು ವಿಸ್ತರಿಸಲು ಚುನಾವಣೆಯನ್ನು ಮುಂದೂಡಲಾಗುವುದು ಎಂಬ ಊಹಾಪೋಹ ಅಂತ್ಯಗೊಂಡಿದೆ. ಪ್ರತಿಪಕ್ಷಗಳು ಚುನಾವಣೆ ನಡೆಯುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದವು.

2022 ರ ಮಧ್ಯದಲ್ಲಿ ಪದಚ್ಯುತಗೊಂಡ ಮಾಜಿ ಅಧ್ಯಕ್ಷ ಗೊಟಬಾಯ ರಾಜಪಕ್ಸೆ ಅವರ ಬಾಕಿ ಅವಧಿಯನ್ನು ಕೊನೆಗೊಳಿಸಲು ಚುನಾವಣೆಯನ್ನು ನಿಗದಿಪಡಿಸಲಾಗಿದೆ. ನವೆಂಬರ್ 2019 ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೊಟಬಾಯ ಅವರು ಸುಮಾರು 7 ದಶಲಕ್ಷ ಮತಗಳೊಂದಿಗೆ ಚುನಾಯಿತರಾಗಿದ್ದರು. ಆರ್ಥಿಕತೆಯನ್ನು ನಿಭಾಯಿಸಲು ವಿಫಲರಾದ ಅವರನ್ನು ಕೆಳಗಿಳಿಯುವಂತೆ ಒತ್ತಾಯಿಸಿ, 2022 ರ ಆರಂಭದಲ್ಲಿ ಹತ್ತಾರು ಸಾವಿರ ನಾಗರಿಕರು ರಸ್ತೆಗಿಳಿದಿದ್ದರು. ಆಗ ಪ್ರಧಾನಮಂತ್ರಿ, ರಾಜಪಕ್ಸೆ ಉತ್ತರಾಧಿಕಾರಿಯಾಗಿ ಸಂಸತ್ತಿನ ಮೂಲಕ ಚುನಾಯಿತರಾದರು.

ವಿಕ್ರಮಸಿಂಘೆ(75) ಅವರು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ ನೆರವು ಪಡೆದು, ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸುವ ಕಷ್ಟಕರ ಕೆಲಸವನ್ನು ಕೈಗೊಂಡರು. 2022 ರ ಮೊದಲ ತ್ರೈಮಾಸಿಕದಲ್ಲಿ ಭಾರತವು ಶ್ರೀಲಂಕಾಕ್ಕೆ 4 ಶತಕೋಟಿ ಡಾಲರ್‌ ನೆರವು ನೀಡಿತು. ಇದು ಆಹಾರ ಮತ್ತು ಅಗತ್ಯ ಆಮದುಗಳಿಗೆ ಬಳಕೆಯಾಯಿತು. ಏಪ್ರಿಲ್ ಮಧ್ಯದ ವೇಳೆಗೆ ದಿವಾಳಿಯನ್ನು ಘೋಷಿಸಿತು. ಒಂದು ವರ್ಷದ ನಂತರ ಐಎಂಎಫ್‌ನ ಮೊದಲ ಕಂತಿನ 3 ಶತಕೋಟಿ ಡಾಲರ್‌ ನೆರವನ್ನು ನಾಲ್ಕು ವರ್ಷಗಳವರೆಗೆ ವಿಸ್ತರಿಸಲಾಯಿತು. ಈ ಸುಧಾರಣೆಗಳು ಸರ್ಕಾರಕ್ಕೆ ಜನಪ್ರಿಯತೆ ತಂದುಕೊಡಲಿಲ್ಲ.

ವಿಕ್ರಮಸಿಂಘೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ನಿರೀಕ್ಷೆಯಿದೆ. ಅವರು ಅಧಿಕೃತವಾಗಿ ಉಮೇದುವಾರಿಕೆಯನ್ನು ಪ್ರಕಟಿಸಬೇಕಿದೆ. ಶ್ರೀಲಂಕಾದ ಮಾಜಿ ಸೇನಾ ಮುಖ್ಯಸ್ಥ ಮತ್ತು ಎಲ್‌ಟಿಟಿಇ ನಾಶಕ್ಕೆ ಕಾರಣವಾದ ಫೀಲ್ಡ್ ಮಾರ್ಷಲ್ ಶರತ್ ಫೋನ್ಸೆಕಾ ಅವರು ಗುರುವಾರ ತಮ್ಮ ಉಮೇದುವಾರಿಕೆಯನ್ನು ಘೋಷಿಸಿದ್ದಾರೆ. ಪ್ರಮುಖ ಪ್ರತಿಪಕ್ಷವಾದ ಸಮಗಿ ಜನ ಬಲವೆಗಾಯ (ಎಸ್‌ಜೆಬಿ) ನಾಯಕ ಸಜಿತ್ ಪ್ರೇಮದಾಸ, ಮಾರ್ಕ್ಸ್‌ವಾದಿ ಜೆವಿಪಿ ನಾಯಕ ಅನುರ ಕುಮಾರ ಡಿಸ್ಸನಾಯಕ ಮತ್ತು ನ್ಯಾಯ ಸಚಿವ ವಿಜಯದಾಸ ರಾಜಪಕ್ಷೆ ಕೂಡ ಸ್ಪರ್ಧೆಯಲ್ಲಿದ್ದಾರೆ.

Read More
Next Story