US presidential election: ಕಮಲಾ ಹ್ಯಾರಿಸ್‌ ಗೆಲುವಿಗಾಗಿ ತಮಿಳುನಾಡಿನ ಆಕೆಯ ಪೂರ್ವಜರ ಹಳ್ಳಿಯಲ್ಲಿ ವಿಶೇಷ ಪೂಜೆ
x
ಶ್ರೀ ಧರ್ಮ ಶಾಸ್ತಾ ದೇವಸ್ಥಾನದಲ್ಲಿ ಕಮಲಾ ಹ್ಯಾರಿಸ್‌ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

US presidential election: ಕಮಲಾ ಹ್ಯಾರಿಸ್‌ ಗೆಲುವಿಗಾಗಿ ತಮಿಳುನಾಡಿನ ಆಕೆಯ ಪೂರ್ವಜರ ಹಳ್ಳಿಯಲ್ಲಿ ವಿಶೇಷ ಪೂಜೆ

ತುಳಸೇಂದ್ರಪುರಂ ಕಮಲಾ ಅವರ ಅಜ್ಜ ಮತ್ತು ಮಾಜಿ ಭಾರತೀಯ ರಾಜತಾಂತ್ರಿಕ ಪಿ ವಿ ಗೋಪಾಲನ್ ಅವರ ಪೂರ್ವಜರ ಗ್ರಾಮವಾಗಿದೆ. ಕಮಲಾ ಹ್ಯಾರಿಸ್‌ ಅವರ ತಾಯಿ ಶ್ಯಾಮಲಾ ಪಿ ವಿ ಗೋಪಾಲನ್ ಅವರ ಪುತ್ರಿ


Click the Play button to hear this message in audio format

ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ಮಂಗಳವಾರ ( ನವೆಂಬರ್ 5) ಆರಂಭಗೊಂಡಿದೆ. ಈ ಚುನಾವಣೆಯಲ್ಲಿ ಅಮೆರಿಕದ ಉಪಾಧ್ಯಕ್ಷರಾಗಿರುವ ಡೆಮಾಕ್ರಟಿಕ್‌ ಪಕ್ಷದ ಕಮಲಾ ಹ್ಯಾರಿಸ್ ಹಾಗೂ ಮಾಜಿ ಅಧ್ಯಕ್ಷ ರಿಪಬ್ಲಿಕ್‌ ಡೊನಾಲ್ಡ್ ಟ್ರಂಪ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ. ಇದೇ ವೇಳೆ ಕಮಲಾ ಹ್ಯಾರಿಸ್‌ ಚುನಾವಣೆಯಲ್ಲಿ ಗೆದ್ದು ಬರಲಿ ಎಂದು ಆಕೆಯ ಪೂರ್ವಜರ ಗ್ರಾಮವಾದ ತಮಿಳುನಾಡಿನ ತುಳಸೇಂದ್ರಪುರಂ ಗ್ರಾಮಸ್ಥರು ಹಾರೈಸುತ್ರತಿದ್ದಾರೆ. ಗ್ರಾಮಸ್ಥರು ಆಕೆಯ ಪೂರ್ವಜರ ಗ್ರಾಮದಲ್ಲಿರುವ ಶ್ರೀ ಧರ್ಮ ಶಾಸ್ತಾ ದೇವಸ್ಥಾನದಲ್ಲಿ ಕಮಲಾ ಹ್ಯಾರಿಸ್‌ ಗೆಲುವಿಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

ತುಳಸೇಂದ್ರಪುರಂ ಕಮಲಾ ಅವರ ಅಜ್ಜ ಮತ್ತು ಮಾಜಿ ಭಾರತೀಯ ರಾಜತಾಂತ್ರಿಕ ಪಿ ವಿ ಗೋಪಾಲನ್ ಅವರ ಪೂರ್ವಜರ ಗ್ರಾಮ. ಕಮಲಾ ಹ್ಯಾರಿಸ್‌ ಅವರ ತಾಯಿ ಶ್ಯಾಮಲಾ ಪಿ ವಿ ಗೋಪಾಲನ್ ಅವರ ಪುತ್ರಿ

ಕಮಲಾ ಹ್ಯಾರಿಸ್‌ ಗ್ರಾಮದಲ್ಲಿ ಸಂಭ್ರಮ

ಕಮಲಾ ಹ್ಯಾರಿಸ್‌ ಅವರು ಆಗಸ್ಟ್ 2020 ರಲ್ಲಿ ಡೆಮಾಕ್ರಟಿಕ್‌ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡಾಗ ಈ ಗ್ರಾಮವು ಗಮನ ಸೆಳೆದಿತ್ತು. ಅದೇ ವರ್ಷ ಕಮಲಾ ಹ್ಯಾರಿಸ್‌ ಅವರ ವಿಜಯೋತ್ಸವನ್ನು ಈ ಗ್ರಾಮದಲ್ಲಿ ಆಚರಿಸಲಾಯಿತು. ಈ ಮಣ್ಣಿನ ಮಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿ ವಿಶ್ವದ ಅತ್ಯಂತ ಪ್ರಭಾವಿ ರಾಷ್ಟ್ರದ ಅಧ್ಯಕ್ಷೆಯಾಗಲಿ ಎಂಬುವುದು ನಮ್ಮೆಲ್ಲರ ಹೃತ್ಪೂರ್ವಕ ಪ್ರಾರ್ಥನೆಗಳು ಎಂದು ಪಾಲಿಕೆ ಸದಸ್ಯೆ ಅರುಲ್ಮೋಳಿ ಮತ್ತು ಅವರ ಪತಿ ಟಿ ಸುಧಾಕರ್ ಹೇಳಿದ್ದಾರೆ. ಇದರೊಂದಿಗೆ ಅವರು ಕಮಲಾ ಅವರ ಪೂರ್ವಜರ ಕುಲದೈವವಾದ ಶ್ರೀ ಧರ್ಮ ಶಾಸ್ತಾ ದೇವಸ್ಥಾನದಲ್ಲಿ ಪ್ರಧಾನ ದೇವರಿಗೆ ವಿಶೇಷ 'ಅರ್ಚನೆ' ಜೊತೆಗೆ ಶ್ರೀಗಂಧ ಮತ್ತು ಅರಿಶಿನದ ವಿಶೇಷ ಅಭಿಷೇಕ ಮಾಡಿಸಿದ್ದಾರೆ. ಚುನಾವಣೆಯಲ್ಲಿ ಜಯಗಳಿಸಲಿ ಎಂದು ಹಾರೈಸಿ ಆಕೆಯ ಭಾವಚಿತ್ರವಿರುವ ಬೃಹತ್ ಬ್ಯಾನರ್ ಕಟ್ಟಿದ್ದಾರೆ.

ಕಮಲಾಗೆ ಪ್ರಾರ್ಥನೆ

ಇದೇ ರೀತಿಯ ಪ್ರಾರ್ಥನೆಗಳು ಮಧುರೈನಲ್ಲಿಕೂಡ ನಡೆಯಿತು. ಅಲ್ಲಿ ಆಧ್ಯಾತ್ಮಿಕ ಸಂಸ್ಥೆಯಾದ ಅನುಷಾನಾಥಿನ್ ಅನುಗ್ರಹಂ ನವೆಂಬರ್ 4 ರಂದು ವಿಶೇಷ ಪ್ರಾರ್ಥನೆ ನಡೆಸಿದೆ. ಕಮಲಾ ಅವರು ಚುನಾವಣೆಯಲ್ಲಿ ಗೆದ್ದರೆ ಜಿಲ್ಲೆಯ ಪೈಂಗನಾಡು ಗ್ರಾಮದ ಮುಖಂಡರು, ಬಡವರಿಗೆ ‘ಅನ್ನದಾನ’ ಮಾಡುವುದಾಗಿ ಹರಕೆ ಹೊತ್ತಿದ್ದಾರೆ.

"ಅವರ ಪೂರ್ವಜರು ನಮ್ಮ ಹಳ್ಳಿಯವರು. ಅವರು ದೊಡ್ಡ ಹುದ್ದೆಗಾಗಿ ಹೋರಾಡುತ್ತಿರುವ ಮಹಿಳೆ. ಅವರು ವಿಜಯಶಾಲಿಯಾಗಿ ಬರಬೇಕು ಎಂದು ಪಾಲಿಕೆ ಸದಸ್ಯೆ ಅರುಲ್ಮೋಳಿ ಹೇಳುತ್ತಾರೆ.

ಕಮಲಾ ಅವರ ಸಂಪರ್ಕ

ಕಮಲಾ ಅವರ ತಾಯಿಯ ತಂದೆ ಗೋಪಾಲನ್ ಅವರು ಚೆನ್ನೈಗೆ ತೆರಳುವ ಮೊದಲು ಈ ಗ್ರಾಮದಲ್ಲಿ ಜನಿಸಿದ್ದರು. ಅವರು ಶ್ರೀ ಧರ್ಮ ಶಾಸ್ತಾ ದೇವಸ್ಥಾನಕ್ಕೆ ಸುಮಾರು ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದರು.

2014 ರಲ್ಲಿ ಕಮಲಾ ಹ್ಯಾರಿಸ್ ಅವರ ಹೆಸರಿನಲ್ಲಿ ದೇವಸ್ಥಾನಕ್ಕೆ ಅದರ ಕುಂಭಾಭಿಷೇಕ (ಪ್ರತಿಷ್ಠಾಪನೆ) ಗಾಗಿ 5,000 ರೂಪಾಯಿಗಳನ್ನು ದೇಣಿಗೆ ನೀಡಲಾಗಿತ್ತು. ಇದು ಅವರ ದೇವಸ್ಥಾನದೊಂದಿಗಿನ ಸಂಪರ್ಕವನ್ನು ಸೂಚಿಸುತ್ತದೆ. ಆದರೆ ಅವರ ಕುಟುಂಬದವರು ಯಾರೂ ಕೂಡ ಇಲ್ಲಿ ವಾಸಿಸುತ್ತಿಲ್ಲ. ಆಕೆಯ ದೇಣಿಗೆ ದೇವಾಲಯದ ಅಧಿಕಾರಿಗಳು ದೇವಾಲಯಕ್ಕೆ ದಾನಿಗಳ ಪಟ್ಟಿಯನ್ನು ಹೊಂದಿರುವ ಕಲ್ಲಿನ ಫಲಕದಲ್ಲಿ ಆಕೆಯ ಹೆಸರನ್ನು ಕೆತ್ತಲಾಗಿದೆ.

Read More
Next Story