H-1B Visa: ಭಾರತೀಯ ಐಟಿ ಕ್ಷೇತ್ರಕ್ಕೆ ಶುಭ ಸುದ್ದಿ; ಎಚ್‌-1ಬಿ ವೀಸಾ ಬೆಂಬಲಿಸಿದ ಟ್ರಂಪ್‌
x
ಡೊನಾಲ್ಡ್‌ ಟ್ರಂಪ್‌.

H-1B Visa: ಭಾರತೀಯ ಐಟಿ ಕ್ಷೇತ್ರಕ್ಕೆ ಶುಭ ಸುದ್ದಿ; ಎಚ್‌-1ಬಿ ವೀಸಾ ಬೆಂಬಲಿಸಿದ ಟ್ರಂಪ್‌

H-1B Visa: ಟ್ರಂಪ್‌ ಹೇಳಿಕೆಯು ಅಮೆರಿಕದಲ್ಲಿ ವಿವಾದಕ್ಕೆ ಕಾರಣವಾಗಿದೆ. ದಾಖಲೆರಹಿತ ವಲಸಿಗರನ್ನು ಗಡೀಪಾರು ಮಾಡುವ ಮತ್ತು ಕಾನೂನುಬದ್ಧ ವಲಸೆ ನಿರ್ಬಂಧಿಸುವ ಅವರ ಭರವಸೆಗೆ ವ್ಯತಿರಿಕ್ತ ಎಂಬ ಅಭಿಪ್ರಾಯ ವ್ಯಕ್ತಗೊಂಡಿವೆ.


ವಲಸೆ ನೀತಿ ಹಾಗೂ ವಲಸಿಗರನ್ನು ಸದಾ ದ್ವೇಷಿಸುವ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಭಾನುವಾರ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದಾರೆ. ಅವರು ಎಚ್‌ 1ಬಿ ವೀಸಾ ನೀತಿಯನ್ನು ಬೆಂಬಲಿಸುವ ಮೂಲಕ ಟೆಕ್‌ ದೈತ್ಯ ಎಲಾನ್‌ ಮಸ್ಕ್‌ ಪರ ನಿಂತಿದ್ದು, ತಮ್ಮನ್ನು ಚುನಾವಣೆಯಲ್ಲಿ ಬಹುವಾಗಿ ಬೆಂಬಲಿಸಿದ್ದ ಬಲಪಂಥೀಯರ ಗುಂಪಿನ ವಿರೋಧಕ್ಕೆ ಕಟ್ಟಿಕೊಂಡಿದ್ದಾರೆ .

ಏತನ್ಮಧ್ಯೆ , ಟ್ರಂಪ್ ತಮ್ಮ ಹಿಂದಿ ಆಡಳಿತ ಅವಧಿಯಲ್ಲಿ ನಿರ್ಬಂಧಿತ ವಲಸೆ ನೀತಿಗಳನ್ನು ಜಾರಿಗೆ ತಂದಿದ್ದರು. ಹೀಗಾಗಿ ಟ್ರಂಪ್‌ ಆಯ್ಕೆಯಾದ ತಕ್ಷಣ ಭಾರತದ ಐಟಿ ಸಂಸ್ಥೆಗಳು ಕಳವಳಕ್ಕೆ ಒಳಗಾಗಿದ್ದವು. ಇದೀಗ ಅವರೆಲ್ಲರೂ ನಿರಾಳರಾಗಿದ್ದಾರೆ.

ಟ್ರಂಪ್ ಅವರ ವಲಸೆ ವಿರೋಧಿ ನಿಲುವು ಅವರ 2016ರ ಮತ್ತು 2020ರ ಚುನಾವಣಾ ಪ್ರಚಾರದ ಪ್ರಮುಖ ಅಂಶವಾಗಿತ್ತು. ದಾಖಲೆರಹಿತ ವಲಸಿಗರನ್ನು ಗಡೀಪಾರು ಮಾಡುವ ಮತ್ತು ಕಾನೂನುಬದ್ಧ ವಲಸೆ ನಿರ್ಬಂಧಿಸುವ ಅವರ ಭರವಸೆ ಭರ್ಜರಿ ಯಶಸ್ಸಿಗೆ ಕಾರಣವಾಗಿತ್ತು.

ಬಿಗಿಗೊಳಿಸಿದ್ದ ಟ್ರಂಪ್‌

ಡೊನಾಲ್ಡ್‌ ಟ್ರಂಪ್‌ ಹಿಂದಿನ ಆಡಳಿತದ ಅವಧಿಯಲ್ಲಿ, ಎಚ್ 1-ಬಿ ವೀಸಾ ಯೋಜನೆಗೆ ಹಿನ್ನಡೆಯಾಗಿತ್ತು. ವೀಸಾ ನಿರಾಕರಣೆ ಪ್ರಮಾಣವು 2016ರಲ್ಲಿದ್ದ ಶೇಕಡಾ 6 ರಿಂದ 2018 ರಲ್ಲಿ ಶೇಕಡಾ 24 ಕ್ಕೆ ಏರಿಕೆಯಾಗಿತ್ತು. ಅರ್ಜಿ ಶುಲ್ಕ ಮತ್ತು ಕಠಿಣ ಮೌಲ್ಯಮಾಪನ ಮಾನದಂಡಗಳು ಕಠಿಣಗೊಂಡಿದ್ದೇ ಇದಕ್ಕೆ ಕಾರಣವಾಗಿತ್ತು.

"ನಾನು (ಎಚ್ 1-ಬಿ) ವೀಸಾಗಳನ್ನು ಇಷ್ಟಪಡುತ್ತೇನೆ, ನಾನು ಯಾವಾಗಲೂ ವೀಸಾಗಳ ಪರವಾಗಿರುತ್ತೇನೆ, ಅದಕ್ಕಾಗಿಯೇ ನಾವು ಅವುಗಳನ್ನು ಟ್ರಂಪ್ ನಾಯಕತ್ವದ ಯೋಜನೆಗಳಲ್ಲಿ ಸೇರಿಸಿಕೊಂಡಿದ್ದೇವೆ ಎಂದು ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನ್ಯೂಯಾರ್ಕ್ ಪೋಸ್ಟ್ ಜತೆ ಮಾತನಾಡುತ್ತಾ ಹೇಳಿದ್ದಾರೆ. ಈ ಹೇಳಿಕೆ ಆಂತರಿಕವಾಗಿ ಕೋಪಕ್ಕೆ ಕಾರಣವಾಗಿದೆ.

ಟ್ರಂಪ್‌ ಬೆಂಬಲಿಗೆ ಗೊಂದಲ

ಈ ಚರ್ಚೆಯು ಟ್ರಂಪ್ ಬೆಂಬಲಿಗರ ಆತಂಕಕ್ಕೆ ಕಾರಣವಾಗಿದೆ. ಮಸ್ಕ್ ಸೇರಿದಂತೆ ಟೆಕ್ ಉದ್ಯಮಿಗಳು ಈ ಕಾರ್ಯಕ್ರಮದ ಪರವಾಗಿ ವಾದಿಸಿದರೆ ಇತರರು ವಲಸೆ ನಿಯಂತ್ರಣಗಳಿಗೆ ಒತ್ತಾಯಿಸಿದ್ದಾರೆ. ಟೆಸ್ಲಾ ಸಿಇಒ ಮಸ್ಕ್ ತಮ್ಮ ಎಕ್ಸ್ ನಲ್ಲಿ ಪೋಸ್ಟ್‌ನಲ್ಲಿ,ʼʼವಿದೇಶದಿಂದ ಉತ್ಕೃಷ್ಟ ಎಂಜಿನಿಯರಿಂಗ್ ಪ್ರತಿಭೆಗಳನ್ನು ಕರೆದುಕೊಂಡು ಬರುವುದು ಅಮೆರಿಕದ ವಿಜಯಕ್ಕೆ ಅತ್ಯಗತ್ಯ" ಎಂದು ಹೇಳಿದ್ದಾರೆ. ಇದಕ್ಕಾಗಿ ಸಮರ ಸಾರುವೆ ಎಂದಿದ್ದರು. ಇದು ಟೆಕ್‌ ಉದ್ಯಮಿಗಳ ನಡುವಿನ ಬಿರುಕಿಗೆ ಕಾರಣವಾಗಿತ್ತು.

ಟ್ರಂಪ್ ಅವರ ಅಡಿಯಲ್ಲಿ ವೆಚ್ಚ ಕಡಿತ ಸಮಿತಿಯ ಸಹ-ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ವಿವೇಕ್ ರಾಮಸ್ವಾಮಿ, ಯುಎಸ್ ಹೆಚ್ಚು ನುರಿತ ಪದವೀಧರರ ಕೊರತೆ ಎದುರಿಸುತ್ತಿದೆ, ಇದು ಎಚ್ 1-ಬಿ ಕಾರ್ಯಕ್ರಮವನ್ನು ಅನಿವಾರ್ಯಗೊಳಿಸುತ್ತದೆ ಎಂದು ವಾದಿಸಿದ್ದರು.

ಎಡ

ಎಚ್ 1-ಬಿ ಕಾರ್ಮಿಕರನ್ನು ಬೆಂಬಲಿಸುವ ಟೆಸ್ಲಾ ಸಿಇಒ ಅವರ ಹೇಳಿಕೆಗಳು ಟ್ರಂಪ್ ಅವರನ್ನು ಬೆಂಬಲಿಸುತ್ತಿದ್ದ ಹಲವಾರು ಪ್ರಮುಖ ಸಂಪ್ರದಾಯವಾದಿಗಳನ್ನು ಕೆರಳಿಸಿದೆ. , ರಿಪಬ್ಲಿಕನ್ ಪ್ರಚಾರಕ್ಕೆ 250 ಮಿಲಿಯನ್ ಡಾಲರ್ ಗಿಂತ ಹೆಚ್ಚು ಹಣ ಇವರು ಹೊಂದಿಸಿದ್ದರು.

"ಅಧ್ಯಕ್ಷ ಟ್ರಂಪ್ ಮತ್ತು ಬಿಗ್ ಟೆಕ್ ನಡುವಿನ ಅನಿವಾರ್ಯ ವಿಚ್ಛೇದನವನ್ನು ಎದುರು ನೋಡುತ್ತಿದ್ದೇನೆ" ಎಂದು ಪಿತೂರಿ ಸಿದ್ಧಾಂತಗಳಿಗೆ ಹೆಸರುವಾಸಿಯಾದ ಬಲಪಂಥೀಯ ಮ್ಯಾಗಾ ವ್ಯಕ್ತಿ ಲಾರಾ ಲೂಮರ್ ಹೇಳಿದರು. "ನಾವು ಅಧ್ಯಕ್ಷ ಟ್ರಂಪ್ ಅವರನ್ನು ತಂತ್ರಜ್ಞರಿಂದ ರಕ್ಷಿಸಬೇಕಾಗಿದೆ" ಎಂದು ಅವರು ಸುದ್ದಿ ಸಂಸ್ಥೆ ಎಎಫ್‌ಗೆ ತಿಳಿಸಿದ್ದಾರೆ.

ಟ್ರಂಪ್ ಅಮೆರಿಕದ ಕಾರ್ಮಿಕರನ್ನು ಉತ್ತೇಜಿಸಬೇಕು ಮತ್ತು ವಲಸೆಯನ್ನು ಮತ್ತಷ್ಟು ಮಿತಿಗೊಳಿಸಬೇಕು ಎಂದು ಬಲಪಂಥೀಯ ಲಾರಾ ಲೂಮರ್ ಹೇಳಿದ್ದಾರೆ.

Read More
Next Story