Will Shubhas Shukla return to Earth from space today?
x

ಭಾರತದ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು 

ಬಾಹ್ಯಾಕಾಶದಿಂದ ಶುಭಾಂಶು ಶುಕ್ಲಾ ಇಂದು ಭೂಮಿಗೆ ವಾಪಸ್‌

ಗಗನ ನೌಕೆ ಮೂಲಕ ಭೂಮಿಗೆ ವಾಪಸ್‌ ಬರುವ ವೇಳೆ ಅಂತಿಮ ಹಂತದಲ್ಲಿ ತಾಂತ್ರಿಕ ತೊಂದರೆಗಳಾಗಿ ಸಮಯ ಬದಲಾವಣೆಯಾದರೆ ಭೂಮಿಗೆ ಬರುವ ದಿನಾಂಕ ಮುಂದೂಡುವ ಸಾಧ್ಯತೆ ಇದೆ.


ಆಕ್ಸಿಯಂ-4 ಮಿಷನ್‌ನ ಭಾಗವಾಗಿ ಬಾಹ್ಯಾಕಾಶಕ್ಕೆ ತೆರಳಿದ್ದ ಭಾರತದ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಪೂರ್ವ ನಿಗದಿಯಂತೆ ಗುರುವಾರ(ಜು.10) ಭೂಮಿಗೆ ಮರಳಲಿದ್ದಾರೆ.

ಗಗನ ನೌಕೆ ಮೂಲಕ ಭೂಮಿಗೆ ವಾಪಸ್‌ ಬರುವ ವೇಳೆ ಅಂತಿಮ ಹಂತದಲ್ಲಿ ತಾಂತ್ರಿಕ ತೊಂದರೆಗಳಾಗಿ ಸಮಯ ಬದಲಾವಣೆಯಾದರೆ ಭೂಮಿಗೆ ಬರುವ ದಿನಾಂಕ ಮುಂದೂಡುವ ಸಾಧ್ಯತೆ ಇದ್ದು ಎರಡು ವಾರಕ್ಕೆ ತೆರಳಿರುವ ಗಗನಯಾತ್ರಿಗಳು ಮತ್ತೆ ಕೆಲವು ದಿನ ಅಲ್ಲೇ ಕಳೆಯಲಿದ್ದಾರೆ.

ಗಗನಯಾತ್ರಿಗಳು ವಾಪಸ್‌ ಆಗುವ ಬಗ್ಗೆ ನಾಸಾ ಅಥವಾ ಆಕ್ಸಿಯಂ ಇದುವರೆಗೆ ಅಧಿಕೃತವಾಗಿ ಪ್ರಕಟಣೆ ಹೊರಡಿಸಿಲ್ಲ. ಆದರೆ ಯೂರೋಪ್‌ ಸ್ಪೇಸ್‌ ಏಜನ್ಸಿ ಹಾಗೂ ಪೊಲೆಂಡ್‌ನ ತನ್ನ ಗಗನಯಾನಿ ಜು.14 ಕ್ಕೂ ಮೊದಲು ಜರ್ಮನಿಗೆ ಮರಳುವ ಸಾಧ್ಯತೆ ಇಲ್ಲ ಎಂದು ಹೇಳಿರುವುದರಂದ ನಾಲ್ವರು ಗಗನಯಾತ್ರಿಗಳು ಭೂಮಿಗೆ ಮರಳುವ ಪ್ರಕ್ರಿಯೆ ಮುಂದೂಡಿಕೆಯ ಸುಳಿವು ನೀಡಿದೆ.

ವಿವಿಧ ತಾಂತ್ರಿಕ ಕಾರಣಗಳಿಂದಾಗಿ ಆಕ್ಸಿಯಂ-4 ಮಿಷನ್‌ನ ಉಡಾವಣೆಯನ್ನು ಹಲವು ಬಾರಿ ಮುಂದೂಡಲಾಗಿತ್ತು. ನಂತರ ಜೂನ್ 25 ರಂದು ಬೆಳಗಿನ ಜಾವ 2:31ಕ್ಕೆ (EDT) ಫ್ಲಾರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ ಎಕ್ಸ್‌ನ ಫಾಲ್ಕನ್- 9 ರಾಕೆಟ್ ಮೂಲಕ ಉಡಾವಣೆ ಮಾಡಲಾಗಿತ್ತು. ಬಾಹ್ಯಕಾಶಕ್ಕೆ ತೆರಳಿದ್ದ ಶುಭಾಂಶು ಶುಕ್ಲಾ ಅಲ್ಲಿಂದಲೇ ಪ್ರಧಾನಿ ನರೇಂದ್ರ ಮೋದಿ, ಬೆಂಗಳೂರು ಹಾಗೂ ಭೂಪಾಲ್‌ನ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ್ದರು.

Read More
Next Story