ಉಕ್ರೇನ್ ಮೇಲೆ ರಷ್ಯಾದಿಂದ ಬೃಹತ್ ಡ್ರೋನ್ ದಾಳಿ: 800ಕ್ಕೂ ಹೆಚ್ಚು ಡ್ರೋನ್‌ಗಳ ಬಳಕೆ
x

ಉಕ್ರೇನ್ ಮೇಲೆ ರಷ್ಯಾದಿಂದ ಬೃಹತ್ ಡ್ರೋನ್ ದಾಳಿ: 800ಕ್ಕೂ ಹೆಚ್ಚು ಡ್ರೋನ್‌ಗಳ ಬಳಕೆ

ಉಕ್ರೇನ್ ವಾಯುಪಡೆಯ ವಕ್ತಾರ ಯೂರಿ ಇಹ್ನಾತ್ ಅವರ ಪ್ರಕಾರ, ಭಾನುವಾರದ ಈ ದಾಳಿಯು ರಷ್ಯಾದ ಅತಿದೊಡ್ಡ ಡ್ರೋನ್ ದಾಳಿಯಾಗಿದೆ.


ರಷ್ಯಾವು ಕಳೆದ ರಾತ್ರಿ ಉಕ್ರೇನ್ ಮೇಲೆ 805 ಡ್ರೋನ್‌ಗಳು ಮತ್ತು ಡಿಕಾಯ್‌ಗಳನ್ನು (ದಾರಿತಪ್ಪಿಸುವ ಸಾಧನ) ಬಳಸಿ ಬೃಹತ್ ದಾಳಿ ನಡೆಸಿದೆ. ಇದು ಪೂರ್ಣ ಪ್ರಮಾಣದ ಆಕ್ರಮಣ ಆರಂಭವಾದಾಗಿನಿಂದ ನಡೆದ ಅತಿದೊಡ್ಡ ಡ್ರೋನ್ ದಾಳಿಯಾಗಿದೆ ಎಂದು ಉಕ್ರೇನ್‌ನ ವಾಯುಪಡೆ ತಿಳಿಸಿದೆ.

ಉಕ್ರೇನ್ ವಾಯುಪಡೆಯ ವಕ್ತಾರ ಯೂರಿ ಇಹ್ನಾತ್ ಅವರ ಪ್ರಕಾರ, ಭಾನುವಾರದ ಈ ದಾಳಿಯು ರಷ್ಯಾದ ಅತಿದೊಡ್ಡ ಡ್ರೋನ್ ದಾಳಿಯಾಗಿದೆ. ಇದರ ಜೊತೆಗೆ ರಷ್ಯಾ ವಿವಿಧ ಮಾದರಿಯ 13 ಕ್ಷಿಪಣಿಗಳನ್ನೂ ಉಡಾಯಿಸಿದೆ.

ಉಕ್ರೇನ್‌ನ ವಾಯುಪಡೆಯು 747 ಡ್ರೋನ್‌ಗಳು ಮತ್ತು ನಾಲ್ಕು ಕ್ಷಿಪಣಿಗಳನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿಕೆ ನೀಡಿದೆ. ಆದಾಗ್ಯೂ, ಉಕ್ರೇನ್‌ನಾದ್ಯಂತ 37 ಸ್ಥಳಗಳಲ್ಲಿ ಒಂಬತ್ತು ಕ್ಷಿಪಣಿಗಳು ಮತ್ತು 56 ಡ್ರೋನ್‌ಗಳು ಅಪ್ಪಳಿಸಿವೆ. ಹೊಡೆದುರುಳಿಸಲಾದ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಅವಶೇಷಗಳು ಎಂಟು ಸ್ಥಳಗಳ ಮೇಲೆ ಬಿದ್ದಿವೆ.

Read More
Next Story