ರಷ್ಯಾ: ಡಾಗೆಸ್ತಾನದಲ್ಲಿ ಬಂದೂಕುಧಾರಿಗಳ ದಾಳಿ, 15 ಪೊಲೀಸರು ಬಲಿ
x

ರಷ್ಯಾ: ಡಾಗೆಸ್ತಾನದಲ್ಲಿ ಬಂದೂಕುಧಾರಿಗಳ ದಾಳಿ, 15 ಪೊಲೀಸರು ಬಲಿ


ಮಾಸ್ಕೋ, ಜೂನ್ 24- ರಷ್ಯಾದ ದಕ್ಷಿಣ ಗಣರಾಜ್ಯವಾದ ಡಾಗೆಸ್ತಾನ್‌ನಲ್ಲಿ ಶಸ್ತ್ರಸಜ್ಜಿತ ಉಗ್ರರು ನಡೆಸಿದ ದಾಳಿಯಿಂದ 15 ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು, ಪಾದ್ರಿ ಸೇರಿದಂತೆ ಹಲವು ನಾಗರಿಕರು ಭಾನುವಾರ ಸಾವನ್ನಪ್ಪಿದ್ದಾರೆ ಎಂದು ಗವರ್ನರ್ ಸೆರ್ಗೆಯ್ ಮೆಲಿಕೋವ್ ವಿಡಿಯೋ ಹೇಳಿಕೆಯಲ್ಲಿ ಸೋಮವಾರ ಬೆಳಗ್ಗೆ ತಿಳಿಸಿದ್ದಾರೆ.

ಎರಡು ನಗರಗಳಲ್ಲಿ ಎರಡು ಚರ್ಚ್‌ಗಳು, ಆರಾಧನ ಮಂದಿರ ಮತ್ತು ಪೊಲೀಸ್ ಠಾಣೆ ಮೇಲೆ ಗುಂಡಿನ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ʻಸಶಸ್ತ್ರ ದಂಗೆಯ ಇತಿಹಾಸವಿರುವ ಮುಸ್ಲಿಂ ಪ್ರಧಾನ ಪ್ರದೇಶದಲ್ಲಿ ನಡೆದ ಭಯೋತ್ಪಾದಕ ಕೃತ್ಯ,ʼ ಎಂದು ರಷ್ಯಾದ ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ಸಮಿತಿ ಹೇಳಿದೆ.

ಸೋಮವಾರ, ಮಂಗಳವಾರ ಮತ್ತು ಬುಧವಾರ ಈ ಪ್ರದೇಶದಲ್ಲಿ ಶೋಕಾಚರಣೆ ನಡೆಯಲಿದೆ.

ಕ್ಯಾಸ್ಪಿಯನ್ ಸಮುದ್ರ ಪ್ರದೇಶದಲ್ಲಿರುವ ಡರ್ಬೆಂಟ್ ನಗರದ ಚರ್ಚ್‌, ಆರಾಧನ ಮಂದಿರದ ಮೇಲೆ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪು ಗುಂಡು ಹಾರಿಸಿದೆ ಎಂದು ಡಾಗೆಸ್ತಾನ್ ಆಂತರಿಕ ಸಚಿವಾಲಯ ತಿಳಿಸಿದೆ. ಚರ್ಚ್ ಮತ್ತು ಆರಾಧನ ಮಂದಿರ ಎರಡೂ ಹೊತ್ತಿ ಉರಿದಿವೆ. ಡಾಗೆಸ್ತಾ‌ನದ ರಾಜಧಾನಿ ಮಖಚ್ಕಲಾದಲ್ಲಿ ಚರ್ಚ್ ಮತ್ತು ಟ್ರಾಫಿಕ್ ಪೊಲೀಸ್ ಠಾಣೆ ಮೇಲೆ ಏಕಕಾಲದಲ್ಲಿ ದಾಳಿ ನಡೆದಿದೆ.

ಪ್ರದೇಶದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯನ್ನು ಘೋಷಿಸಲಾಗಿದೆ. ಎಷ್ಟು ಮಂದಿ ಬಂದೂಕುಧಾರಿಗಳನ್ನು ಹತ್ಯೆ ಮಾಡಲಾಗಿ ದೆ ಎನ್ನುವುದು ಹಾಗೂ ದಾಳಿಯಲ್ಲಿ ಎಷ್ಟು ಮಂದಿ ಉಗ್ರಗಾಮಿಗಳು ಭಾಗಿಯಾಗಿದ್ದರು ಎಂಬುದು ಸ್ಪಷ್ಟವಾಗಿಲ್ಲ ದಾಳಿಯ ಹೊಣೆಗಾರಿಕೆಯನ್ನು ಯಾರೂ ಹೊತ್ತುಕೊಂಡಿಲ್ಲ. ಅಧಿಕಾರಿಗಳು ತನಿಖೆ ಪ್ರಾರಂಭಿಸಿದ್ದಾರೆ.

ದಾಳಿಯಲ್ಲಿ ಪುತ್ರರ ಪಾಲ್ಗೊಳ್ಳುವಿಕೆಯ ಆರೋಪದ ಮೇಲೆ ಡಾಗೆಸ್ತಾನದ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ ಎಂದು ರಷ್ಯಾದ ರಾಜ್ಯ ಸುದ್ದಿ ಸಂಸ್ಥೆ ತಾಸ್ ಹೇಳಿದೆ.

ʻಪ್ರದೇಶದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಉಗ್ರಗಾಮಿಗಳ ನೆಲೆಗಳನ್ನು ಕಂಡುಹಿಡಿಯುವವರೆಗೆ ದಾಳಿ ಮುಂದುವರಿಯಲಿದೆ,ʼ ಎಂದು ಮೆಲಿಕೋವ್‌ ಹೇಳಿದರು. ದಾಳಿಗಳು ವಿದೇಶದಲ್ಲಿ ಸಿದ್ಧಗೊಂಡಿರಬಹುದು. ಘಟನೆಗೂ ಉಕ್ರೇನ್‌ನಲ್ಲಿ ರಷ್ಯಾದ ಯುದ್ಧಕ್ಕೂ ಸಂಬಂಧವಿದೆ ಎಂದು ಹೇಳಿದರು.

ಕಳೆದ ಮಾರ್ಚ್‌ನಲ್ಲಿ ಮಾಸ್ಕೋದ ಸಭಾಂಗಣದಲ್ಲಿ ಬಂದೂಕುಧಾರಿಗಳು ಗುಂಡು ಹಾರಿಸಿ, 145 ಜನರನ್ನು ಕೊಂದಿದ್ದರು. ಘಟನೆಯ ಹೊಣೆ ಗಾರಿಕೆಯನ್ನು ಇಸ್ಲಾಮಿಕ್ ಸ್ಟೇಟ್ ಗುಂಪಿನ ಅಂಗ ಸಂಸ್ಥೆ ಹೊತ್ತುಕೊಂಡಿತ್ತು. ರಷ್ಯಾದ ಅಧಿಕಾರಿಗಳು ಯಾವುದೇ ಪುರಾವೆ ನೀಡದೆ, ದಾಳಿಯನ್ನು ಉಕ್ರೇನಿಗೆ ಜೋಡಿಸಲು ಪ್ರಯತ್ನಿಸಿದರು. ಆದರೆ, ಉಕ್ರೇನ್‌ ತನ್ನ ಪಾಲ್ಗೊಳ್ಳುವಿಕೆಯನ್ನು ನಿರಾಕರಿಸಿತ್ತು.

Read More
Next Story