ಡಿಸೆಂಬರ್​ 21 ವಿಶ್ವ ಧ್ಯಾನ ದಿನ : ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕಾರ
x
ಶ್ರೀ ಶ್ರೀ ರವಿಶಂಕರ ಗುರೂಜಿ

ಡಿಸೆಂಬರ್​ 21 ''ವಿಶ್ವ ಧ್ಯಾನ ದಿನ' : ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕಾರ

ಉದ್ಘಾಟನಾ ಆವೃತ್ತಿಯ ''ವಿಶ್ವ ಧ್ಯಾನ ದಿನ'' ನ್ಯೂಯಾರ್ಕ್​​ನಲ್ಲಿರುವ ವಿಶ್ವ ಸಂಸ್ಥೆಯ ಕಚೇರಿ ಆವರಣದಲ್ಲಿ ನಡೆಯಲಿದ್ದು ಭಾರತದ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಗುರೂಜಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.


ನ್ಯೂಯಾರ್ಕ್​ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆಯಲಿರುವ ಉದ್ಘಾಟನಾ ಆವೃತ್ತಿಯ 'ವಿಶ್ವ ಧ್ಯಾನ ದಿನ''ದ ಅಧಿವೇಶನದಲ್ಲಿ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಅಂತೆಯೇ ಡಿಸೆಂಬರ್​ 21 'ವಿಶ್ವ ಧ್ಯಾನ ದಿನ'' ಎಂದು ಘೋಷಿಸಲಾಯಿತು ಎಂದು ವಿಶ್ವ ಸಂಸ್ಥೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

''ವಿಶ್ವ ಧ್ಯಾನ ದಿನ''ವನ್ನು ಆಚರಿಸುವ ಯೋಜನೆಯನ್ನು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಸರ್ವಾನುಮತದಿಂದ ಅಂಗೀಕರಿಸಿದೆ. ಇದರೊಂದಿಗೆ ಭಾರತವು ಜಾಗತಿಕ ಸ್ವಾಸ್ಥ್ಯಕ್ಕೆ ನೀಡಿದ ಸ್ಮರಣೀಯ ಕೊಡುಗೆ ನೀಡುತ್ತಿದೆ ಎಂದು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಈ ಒಂದು ಐತಿಹಾಸಿಕ ಕ್ಷಣವು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು, ಭಾರತದ ಪ್ರಾಚೀನ ಜ್ಞಾನವನ್ನು ವಿಶ್ವದೊಂದಿಗೆ ಹಂಚಿಕೊಳಲ್ಲು ತೋರಿದ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತದೆ.

ಡಿಸೆಂಬರ್ 21 ವರ್ಷದ ಶುಭ ಸಮಯವಾದ ಭಾರತೀಯ ಸಂಪ್ರದಾಯದಲ್ಲಿ ಉತ್ತರಾಯಣದ ಪ್ರಾರಂಭಕ್ಕೆ ಹೊಂದಿಕೆಯಾಗುತ್ತದೆ. ಜೂನ್ 21ರಂದು ಆಚರಿಸಲಾಗುವ ಅಂತರರಾಷ್ಟ್ರೀಯ ಯೋಗ ದಿನಾಚರಣೆಗೆ ಪೂರಕವಾಗಿದೆ ಎಂದು ವಿಶ್ವ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

"ಭಾರತದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯಲ್ಲಿ ಬೇರೂರಿರುವ ಪ್ರಾಚೀನ ಅಭ್ಯಾಸವಾದ ಧ್ಯಾನವು. ಬುದ್ಧಿವಂತಿಕೆ ಮತ್ತು ಕೇಂದ್ರೀಕೃತ ಚಿಂತನೆಯಂತಹ ತಂತ್ರಗಳನ್ನು ಬಳಸಿಕೊಂಡು ಪ್ರಸ್ತುತ ಕ್ಷಣದ ಮೇಲೆ ಗಮನವನ್ನು ಕೇಂದ್ರೀಕರಿಸುವುದಾಗಿದೆ. ಇದು ಮಾನಸಿಕ ಸ್ಪಷ್ಟತೆ, ಭಾವನಾತ್ಮಕ ಶಾಂತಿ ಮತ್ತು ದೈಹಿಕ ವಿಶ್ರಾಂತಿ ಉತ್ತೇಜಿಸುತ್ತದೆ. ವೈಯಕ್ತಿಕ ಯೋಗಕ್ಷೇಮಕ್ಕೆ ಪ್ರಬಲ ಸಾಧನವಾಗಿದೆ " ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಶ್ರೀಶ್ರೀ ರವಿಶಂಕರ ಗುರೂಜಿ ಅವರ ರಚನಾತ್ಮಕ ಕಾರ್ಯಕ್ರಮಗಳು, ವೈಜ್ಞಾನಿಕ ಸಂಶೋಧನೆ ಮತ್ತು ಮಾನವೀಯ ಕಾರ್ಯಾಚರಣೆಗಳ ಮೂಲಕ ಅವರು ಧ್ಯಾನದ ಪರಿವರ್ತಕ ಶಕ್ತಿಯಾಗಿದ್ದಾರೆ " ಎಂದು ಅಧಿಕಾರಿ ಹೇಳಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಗಮನಾರ್ಹ ಸ್ವಯಂ-ಆರೈಕೆ ಸಾಧನವೆಂದು ಗುರುತಿಸಿರುವ ಧ್ಯಾನವು ಒತ್ತಡ ಕಡಿಮೆ ಮಾಡುತ್ತದೆ. ಒಟ್ಟಾರೆ ಮಾನಸಿಕ ಮತ್ತು ದೈಹಿಕ ಆರೋಗ್ಯ ಸುಧಾರಿಸುತ್ತದೆ ಎಂದು ಸಾಬೀತಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More
Next Story