ಪುಟಿನ್ ಕೊರಿಯಾ ಭೇಟಿ: ಉಕ್ರೇನ್ ಯುದ್ಧಕ್ಕೆ ಬೆಂಬಲದ ಭರವಸೆ
ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮಗಳಿಗೆ ಆರ್ಥಿಕ ಮತ್ತು ತಾಂತ್ರಿಕ ಸಹಾಯಕ್ಕೆ ಪ್ರತಿಯಾಗಿ ಉಕ್ರೇನ್‌ನಲ್ಲಿ ಮಾಸ್ಕೋದ ಯುದ್ಧಕ್ಕೆ ಯುದ್ಧಸಾಮಗ್ರಿ-ಶಸ್ತ್ರಾಸ್ತ್ರಗಳನ್ನು ಒದಗಿಸಬಹುದು.
ಉಕ್ರೇನ್‌ನಲ್ಲಿ ರಷ್ಯಾದ ಯುದ್ಧಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಬುಧವಾರ(ಜೂನ್ 18) ಭರವಸೆ ನೀಡಿದರು.
ಕೊರಿಯಾಕ್ಕೆ ಆರ್ಥಿಕ ನೆರವು ಮತ್ತು ತಂತ್ರಜ್ಞಾನ ವರ್ಗಾವಣೆಗೆ ಪ್ರತಿಯಾಗಿ ಉಕ್ರೇನ್‌ನಲ್ಲಿ ಮಾಸ್ಕೋದ ಯುದ್ಧಕ್ಕೆ ಬೆಂಬಲ ನೀಡಲು ಉತ್ತರ ಕೊರಿಯಾ ರಷ್ಯಾಕ್ಕೆ ಅಗತ್ಯವಿರುವ ಯುದ್ಧಸಾಮಗ್ರಿಗಳನ್ನು ಒದಗಿಸುವ ಕುರಿತು ಆತಂಕ ಹೆಚ್ಚುತ್ತಿರುವ ನಡುವೆಯೇ ಪುಟಿನ್ ಅವರು ಪ್ಯೋಂಗ್‌ಯಾಂಗ್‌ಗೆ ಭೇಟಿ ನೀಡಿದ್ದಾರೆ.
ಸಮತೋಲನ ಕಾಪಾಡುವಲ್ಲಿ ರಷ್ಯಾದ ಪಾತ್ರ: ʻಸಾರ್ವಭೌಮತ್ವ, ಭದ್ರತಾ ಹಿತಾಸಕ್ತಿ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ರಕ್ಷಿಸಲು ಉಕ್ರೇನ್‌ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆ ನಡೆಸಲು ರಷ್ಯಾದ ಸರ್ಕಾರ, ಸೇನೆ ಮತ್ತು ಜನರಿಗೆ ಸಂಪೂರ್ಣ ಬೆಂಬಲ ನೀಡಲಾಗುತ್ತದೆ ಎಂದು ಕಿಮ್ ಹೇಳಿದ್ದಾರೆʼ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ಹೇಳಿವೆ. ಉತ್ತರ ಕೊರಿಯಾದ ಬೆಂಬಲ ಹೇಗಿರಲಿದೆ ಎಂಬುದು ಸ್ಪಷ್ಟವಾಗಿಲ್ಲ.
ʻಜಗತ್ತಿನಲ್ಲಿ ಕಾರ್ಯತಂತ್ರದ ಸ್ಥಿರತೆ ಮತ್ತು ಸಮತೋಲವನ್ನು ಕಾಪಾಡುವಲ್ಲಿ ರಷ್ಯಾದ ಪಾತ್ರ ಪ್ರಮುಖವಾಗಿದೆ. ವಿಶ್ವದ ಪರಿಸ್ಥಿತಿ ಉಲ್ಬಣಗೊಳ್ಳುತ್ತಿದೆ ಮತ್ತು ವೇಗವಾಗಿ ಬದಲಾಗುತ್ತಿದೆ. ಇಂಥ ಪರಿಸ್ಥಿತಿಯಲ್ಲಿ ನಾವು ರಷ್ಯಾದೊಂದಿಗೆ ಕಾರ್ಯತಂತ್ರದ ಸಂವಹನವನ್ನು ಬಲಪಡಿಸಲು ಉದ್ದೇಶಿಸಿದ್ದೇವೆ,ʼ ಎಂದು ಹೇಳಿದ್ದಾರೆ.
ಒಪ್ಪಂದಕ್ಕೆ ಸಹಿಗೆ ನಿರ್ಧಾರ: ತಮ್ಮ ಆರ್ಥಿಕ ಮತ್ತು ಮಿಲಿಟರಿ ಸಹಕಾರವನ್ನು ವಿಸ್ತರಿಸಲು ಮತ್ತು ವಾಷಿಂಗ್ಟನ್ ವಿರುದ್ಧ ಸಂಘಟಿತರಾಗಲು ಕಿಮ್ ಅವರೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವುದಾಗಿ ಪುಟಿನ್ ಹೇಳಿದರು.
ಉಕ್ರೇನ್‌ನಲ್ಲಿ ಕ್ರೆಮ್ಲಿನ್‌ನ ನೀತಿಗಳನ್ನು ದೃಢವಾಗಿ ಬೆಂಬಲಿಸಿದ್ದಕ್ಕಾಗಿ ಉತ್ತರ ಕೊರಿಯಾಕ್ಕೆ ಧನ್ಯವಾದ ಅರ್ಪಿಸಿದರು. ರಷ್ಯಾ 2022 ರಲ್ಲಿ ಉಕ್ರೇನಿನಲ್ಲಿ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿತು.
ʻಹೊಸ ದಾಖಲೆಯು ಉಭಯ ದೇಶಗಳ ದೀರ್ಘಕಾಲೀನ ಸಂಬಂಧಗಳ ಆಧಾರವಾಗಿರಲಿದೆʼ ಎಂದು ಪುಟಿನ್ ಸುದ್ದಿಸಂಸ್ಥೆಗಳಿಗೆ ತಿಳಿಸಿದರು.
ಎರಡೂ ರಾಷ್ಟ್ರಗಳಿಗೆ ವಿಶ್ವ ಸಂಸ್ಥೆಯಿಂದ ನಿರ್ಬಂಧ: ಉತ್ತರ ಕೊರಿಯಾ ಪರಮಾಣು ಶಸ್ತ್ರಾಸ್ತ್ರಗಳು ಮತ್ತು ಕ್ಷಿಪಣಿ ಕಾರ್ಯಕ್ರಮಗ ಳಿಂದಾಗಿ ವಿಶ್ವ ಸಂಸ್ಥೆಯ ರಕ್ಷಣಾ ಮಂಡಳಿಯಿಂದ ಆರ್ಥಿಕ ನಿರ್ಬಂಧಕ್ಕೆ ಒಳಗಾಗಿದೆ. ಉಕ್ರೇನ್ ಮೇಲಿನ ಆಕ್ರಮಣದಿಂದ ಅಮೆರಿಕ ಹಾಗೂ ಅದರ ಪಾಶ್ಚಿಮಾತ್ಯ ಪಾಲುದಾರರ ನಿರ್ಬಂಧಗಳಿಂದ ರಷ್ಯಾ ಸೆಣಸುತ್ತಿದೆ.
ಉತ್ತರ ಕೊರಿಯಾದ ಮಾಧ್ಯಮಗಳು ಉಭಯ ನಾಯಕರ ನಡುವಿನ ಸಭೆಯನ್ನು ಐತಿಹಾಸಿಕ ಘಟನೆ ಎಂದು ಬಣ್ಣಿಸಿವೆ. ʻಎರಡು ರಾಷ್ಟ್ರಗಳ ಸ್ನೇಹ ಮತ್ತು ಏಕತೆಯ ಅಜೇಯತೆ ಮತ್ತು ಉಳಿದುಕೊಳ್ಳುವಿಕೆಯನ್ನು ಪ್ರದರ್ಶಿಸುತ್ತದೆ ಎಂದು ಬಣ್ಣಿಸಿದೆ.
24 ವರ್ಷಗಳಲ್ಲಿ ಉತ್ತರ ಕೊರಿಯಾಕ್ಕೆ ತಮ್ಮ ಮೊದಲ ಪ್ರವಾಸ ಮಾಡಿರುವ ಪುಟಿನ್, ʻಸಮಾನತೆ ಮತ್ತು ಪರಸ್ಪರ ಹಿತಾಸಕ್ತಿಗಳಿಗೆ ಗೌರವವನ್ನು ಆಧರಿಸಿದ ಉಭಯ ದೇಶಗಳ ನಡುವಿನ ಆಪ್ತ ಸ್ನೇಹವನ್ನು ಶ್ಲಾಘಿಸಿದ್ದಾರೆ. ಅಮೆರಿಕ ಮತ್ತು ಅದರ ಸಾಮ್ರಾಜ್ಯಶಾಹಿ ಪ್ರಾಬಲ್ಯ ನೀತಿ ವಿರುದ್ಧದ ಹೋರಾಟವನ್ನು ಗಮನಿಸಿದ್ದು,ʻ ಉಕ್ರೇನಿಗೆ ಸಂಬಂಧಿಸಿದ ರಷ್ಯಾದ ನೀತಿಗಳಿಗೆ ನಿಮ್ಮ ಸ್ಥಿರವಾದ ಮತ್ತು ಬದಲಾಗದ ಬೆಂಬಲವನ್ನು ಪ್ರಶಂಸಿಸುತ್ತೇವೆ,ʼ ಎಂದು ಪುಟಿನ್ ಹೇಳಿದ್ದಾರೆ.
ಭವ್ಯ ಸ್ವಾಗತ: ಪುಟಿನ್ ಅವರನ್ನು ಸ್ವಾಗತಿಸಲು ಬೃಹತ್ ಜನಸಮೂಹ ಬೀದಿಗಳಲ್ಲಿ ಸಾಲುಗಟ್ಟಿ ನಿಂತಿತ್ತು. ʻಪುಟಿನ್ ಸ್ವಾಗತʼ ಎಂದು ಘೋಷಣೆ ಕೂಗುತ್ತ, ಹೂವುಗಳನ್ನು ಎರಚಿದರು ಮತ್ತು ಉತ್ತರ ಕೊರಿಯಾ ಹಾಗೂ ರಷ್ಯಾದ ಧ್ವಜಗಳನ್ನು ಬೀಸಿದರು.
ಮಂಗಳವಾರ ಸಂಜೆ ಪುಟಿನ್ ಅವರನ್ನು ಕಿಮ್ ಭೇಟಿಯಾದರು. ಬುಧವಾರ ಬೆಳಗ್ಗೆ ನಗರದ ಮುಖ್ಯ ಚೌಕದಲ್ಲಿ ನಡೆದ ಅದ್ದೂರಿ ಸ್ವಾಗತ ಸಮಾರಂಭದಲ್ಲಿ ಪುಟಿನ್ ಭಾಗವಹಿಸಿದರು. ಕಿಮ್ ವಿದೇಶಾಂಗ ಸಚಿವ ಚೋ ಸೋನ್ ಹುಯಿ, ಆಡಳಿತ ಪಕ್ಷದ ಕಾರ್ಯದರ್ಶಿ ಜೋ ಯೋಂಗ್ ವಾನ್, ಕಿಮ್ ಸಹೋದರಿ ಕಿಮ್ ಯೋ ಜಾಂಗ್ ಮತ್ತಿತರ ಪ್ರಮುಖ ಸದಸ್ಯರನ್ನು ಪರಿಚಯಿಸಲಾಯಿತು. ಪುಟಿನ್ ಅವರ ವಿದೇಶಾಂಗ ನೀತಿ ಸಲಹೆಗಾರ ಯೂರಿ ಉಷಕೋವ್ ಪ್ರಕಾರ, ಉಪ ಪ್ರಧಾನಿ ಡೆನಿಸ್ ಮಾಂಟ್ರುರೊವ್, ರಕ್ಷಣಾ ಸಚಿವ ಆಂಡ್ರೇ ಬೆಲೌಸೊವ್ ಮತ್ತು ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಸೇರಿದಂತೆ ಹಲವು ಉನ್ನತ ಅಧಿಕಾರಿಗಳು ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ.
ರಷ್ಯಾ-ಉತ್ತರ ಕೊರಿಯಾ ಸಂಬಂಧ: ಯುಎಸ್ ಮತ್ತು ದಕ್ಷಿಣ ಕೊರಿಯಾದ ಅಧಿಕಾರಿಗಳ ಪ್ರಕಾರ , ಉತ್ತರ ಕೊರಿಯಾ ರಷ್ಯಾಕ್ಕೆ ಫಿರಂಗಿ, ಕ್ಷಿಪಣಿಗಳು ಮತ್ತು ಇತರ ಮಿಲಿಟರಿ ಉಪಕರಣಗಳನ್ನು ಉಕ್ರೇನ್‌ನಲ್ಲಿ ಬಳಸಲು ಒದಗಿಸುತ್ತಿದೆ. ಪ್ಯೊಂಗ್ಯಾಂಗ್ ಮತ್ತು ಮಾಸ್ಕೋ ಎರಡೂ ಈ ಆರೋಪಗಳನ್ನು ನಿರಾಕರಿಸಿವೆ.
ಪರಮಾಣು ಶಸ್ತ್ರಗಳ ಅಭಿವೃದ್ಧಿಗೊಳಿಸುವ ಕೊರಿಯಾದ ಪ್ರಯತ್ನಗಳಿಗೆ ಚೀನಾ ಹಾಗೂ ರಷ್ಯಾ ರಾಜಕೀಯ ರಕ್ಷಣೆ ಒದಗಿಸಿವೆ. ಮಾರ್ಚ್‌ನಲ್ಲಿ ವಿಶ್ವಸಂಸ್ಥೆಯಲ್ಲಿ ರಷ್ಯಾದ ವೀಟೋ, ಉತ್ತರ ಕೊರಿಯಾದ ವಿರುದ್ಧದ ವಿಶ್ವ ಸಂಸ್ಥೆಯ ಮೇಲ್ವಿಚಾರಣೆಯನ್ನು ಕೊನೆಗೊಳಿಸಿತು.
ದಕ್ಷಿಣ ಕೊರಿಯಾದ ವಿಶ್ಲೇಷಕರ ಪ್ರಕಾರ, ಕಿಮ್ ಅವರು ರಷ್ಯಾದಿಂದ ಆರ್ಥಿಕ ನೆರವು ಮತ್ತು ಸುಧಾರಿತ ಮಿಲಿಟರಿ ತಂತ್ರಜ್ಞಾನವನ್ನು ಅಪೇಕ್ಷಿಸುತ್ತಾರೆ. ಆದರೆ, ಪುಟಿನ್ ಅವರೊಂದಿಗಿನ ಚರ್ಚೆಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವ ಸಾಧ್ಯತೆಯಿಲ್ಲ.
ಕಿಮ್ಸ್ ಪರಮಾಣು ಕಾರ್ಯಕ್ರಮ: ಕಿಮ್ ಅವರ ಪರಮಾಣು ಕಾರ್ಯಕ್ರಮವು ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಒಳಗೊಂಡಿದೆ. ಇವು ಅಮೆರಿಕದ ಮುಖ್ಯ ಭೂಭಾಗವನ್ನು ತಲುಪಬಲ್ಲವು. ರಷ್ಯಾ ಬಾಹ್ಯಾಕಾಶ ರಾಕೆಟ್‌ಗಳು ಮತ್ತು ಮಿಲಿಟರಿ ವಿಚಕ್ಷಣ ಉಪಗ್ರಹಗಳಿಗೆ ಸಂಬಂಧಿಸಿದ ತಂತ್ರಜ್ಞಾನವನ್ನು ಉತ್ತರ ಕೊರಿಯಾಕ್ಕೆ ಒದಗಿಸುವ ಸಾಧ್ಯತೆ ಇದೆ.
ʻಉತ್ತರ ಕೊರಿಯಾವು ರಷ್ಯಾಕ್ಕೆ ಯುದ್ಧಸಾಮಗ್ರಿಗಳನ್ನು ಮತ್ತು ಉಕ್ರೇನ್‌ನಲ್ಲಿ ಬಳಸಲು ಇತರ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ. ಇರಾನ್ ನಾಗರಿಕರು ಮತ್ತು ನಾಗರಿಕ ಮೂಲಸೌಕರ್ಯಗಳ ವಿರುದ್ಧ ಬಳಸಿದ ಡ್ರೋನ್‌ಗಳು ಇನ್ನಿತರ ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ, ʼಎಂದು ಮಂಗಳವಾರ ನೇಟೋ ಮುಖ್ಯಸ್ಥ ಜೆನ್ಸ್ ಸ್ಟೋಲ್ಟೆನ್‌ಬರ್ಗ್ ಅವರೊಂದಿಗಿನ ಸಭೆ ನಂತರ ಅಮೆರಿಕ ರಾಜ್ಯ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್ ಸುದ್ದಿಗಾರರಿಗೆ ತಿಳಿಸಿದರು.