Donald Trump: ಮೊದಲ ದಿನವೇ ಹಲವು ಮಹತ್ವದ ನಿರ್ಣಯಗಳಿಗೆ ಸಹಿ ಹಾಕಿದ ನೂತನ ಅಧ್ಯಕ್ಷ ಟ್ರಂಪ್‌
x
ಡೊನಾಲ್ಡ್‌ ಟ್ರಂಪ್‌.

Donald Trump: ಮೊದಲ ದಿನವೇ ಹಲವು ಮಹತ್ವದ ನಿರ್ಣಯಗಳಿಗೆ ಸಹಿ ಹಾಕಿದ ನೂತನ ಅಧ್ಯಕ್ಷ ಟ್ರಂಪ್‌

Donald Trump: ಹೊಸ ಅಮೆರಿಕದ ಉದಯ ಎಂಬ ಪರಿಕಲ್ಪನೆಯೊಂದಿಗೆ ರಾಜ್ಯಭಾರಕ್ಕೆ ಮುಂದಾಗಿರುವ ಟ್ರಂಪ್‌, ವಲಸಿಗರ ಮೇಲಿನ ನಿರ್ಬಂಧ, ಕ್ಯಾಪಿಟಲ್‌ ಹಿಲ್‌ ದಂಗೆಕೋರರಿಗೆ ಕ್ಷಮಾದಾನ ಸೇರಿದಂತೆ ಹಲವಾರು ಮಹತ್ವದ ಆದೇಶಗಳಿಗೆ ಸಹಿ ಹಾಕಿದ್ದಾರೆ.


ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ʼಹೊಸ ಅಮೆರಿಕದ ಉದಯʼ ಎಂಬ ಪರಿಕಲ್ಪನೆಯನ್ನು ಹುಟ್ಟು ಹಾಕಿದ್ದಾರೆ. ಅಂತೆಯೇ ಅವರು 47ನೇ ಅ‍ಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಮಹತ್ವದ ಹಲವು ಆದೇಶಗಳಿಗೆ ಸಹಿ ಹಾಕಿದ್ದಾರೆ.

ನಾನಾ ಗಡಿಗಳ ಮೂಲಕ ನುಸುಳಿ ಬಂದು ಯಾವುದೇ ದಾಖಲೆ ಇಲ್ಲದೆ ಅಮೆರಿಕದಲ್ಲಿ ವಾಸಿಸುತ್ತಿರುವ ಲಕ್ಷಾಂತರ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವುದಾಗಿ ಟ್ರಂಪ್‌ ಪಣತೊಟ್ಟಿದ್ದಾರೆ. ಪನಾಮ ಕಾಲುವೆಯನ್ನು ಅಮೆರಿಕ ವಾಪಸ್ ಪಡೆಯಲಿದೆ ಹಾಗೂ ಮೆಕ್ಸಿಕೊ ಕೊಲ್ಲಿಯನ್ನು ಮರುನಾಮಕರಣ ಮಾಡುತ್ತೇವೆ ಎಂದು ಟ್ರಂಪ್‌ ಹೇಳಿದ್ದಾರೆ.

ʼಹೊಸ ಅಮೆರಿಕದ ಉದಯʼ ಎಂಬ ಪರಿಕಲ್ಪನೆಯಡಿ ಟ್ರಂಪ್‌,ವಲಸಿಗರ ಮೇಲಿನ ನಿರ್ಬಂಧ ಹೆಚ್ಚಿಸುವ ಪ್ರಮುಖ ಆದೇಶಕ್ಕೆ ಸಹಿ ಮಾಡಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ತಮ್ಮ ಹಿಂದಿನ ಅವಧಿ ಕೊನೆಗೊಳ್ಳುವ ವೇಳೆಯಲ್ಲಿ ರಿಪಬ್ಲಿಕನ್‌ ಪಕ್ಷದ ಬೆಂಬಲಿಗರು ಕ್ಯಾಪಿಟಲ್‌ ಹಿಲ್‌ಗೆ ನುಗ್ಗಿ ದಾಂಧಲೆ ಮಾಡಿದ್ದರು. ಅವರಿಗೆ ಕ್ಷಮಾದಾನ ವಿಧಿಸಿದ್ದಾರೆ. ಅದೇ ರೀತಿ ದೇಶದ ಮರಣದಂಡನೆ ಕಾಯಿದೆಯಲ್ಲೂ ಬದಲಾವಣೆ ತರುವ ಆದೇಶಕ್ಕೆ ಮುದ್ರೆ ಒತ್ತಿದ್ದಾರೆ.

ಟ್ರಂಪ್‌ ಸಹಿ ಹಾಕಿದ ಪ್ರಮುಖ ಆದೇಶಗಳು

1. ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರಬರುವ ಆದೇಶಕ್ಕೆ ಟ್ರಂಪ್ ಸಹಿ.

2. ಅಮೆರಿಕ ಸರ್ಕಾರದ ಎಲ್ಲ ಉದ್ಯೋಗಿಗಳು ಪೂರ್ಣ ಪ್ರಮಾಣದಲ್ಲಿ ಕಚೇರಿಗೆ ಹಾಜರಾಗಬೇಕು. ಇನ್ನು ಮುಂದೆ ವರ್ಕ್ ಫ್ರಂ ಹೋಂ(ಮನೆಯಿಂದಲೇ ಕೆಲಸ)ಗೆ ಅವಕಾಶವಿಲ್ಲ.

3. ಪ್ಯಾರಿಸ್ ಹವಾಮಾನ ಒಪ್ಪಂದದಿಂದ ಅಮೆರಿಕ ಹೊರಕ್ಕೆ. ಈ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದಾಗಲೂ ಇದೇ ಘೋಷಣೆ ಮಾಡಿದ್ದರು.

4. ಅಮೆರಿಕದ ದಕ್ಷಿಣ ಗಡಿಯಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಣೆ. ವಲಸೆ ಮತ್ತು ಆಶ್ರಯಕ್ಕೆ ಸಂಬಂಧಿಸಿ ಹಲವು ಹೊಸ ನಿರ್ಬಂಧಗಳ ಘೋಷಣೆ.

5. 2021ರ ಜನವರಿ 6ರಂದು ಅಮೆರಿಕದ ಸಂಸತ್ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಭಾಗಿಯಾದ 1,500 ಬೆಂಬಲಿಗರಿಗೆ ಟ್ರಂಪ್ ರಿಂದ ಕ್ಷಮಾದಾನ.

6. . ತೃತೀಯ ಲಿಂಗಿಗಳಿಗೆ ಸಮಾನತೆಯ ಹಕ್ಕು ನೀಡುವ ಆದೇಶಗಳು ರದ್ದು. ಅಮೆರಿಕದಲ್ಲಿ ಇನ್ನು ಮುಂದೆ ಎರಡೇ ಲಿಂಗಗಳು ಇರಲಿವೆ. ಗಂಡು ಮತ್ತು ಹೆಣ್ಣು ಮಾತ್ರ.

7. ದೇಶದಲ್ಲಿ ಇಂಧನ ಉತ್ಪಾದನೆಗೆ ಒತ್ತು ನೀಡುವ ನಿಟ್ಟಿನಲ್ಲಿ "ರಾಷ್ಟ್ರೀಯ ಇಂಧನ ತುರ್ತು ಪರಿಸ್ಥಿತಿ" ಘೋಷಣೆ. ಡ್ರಿಲ್ಲಿಂಗ್ ಕಾರ್ಯಕ್ಕೆ ಉತ್ತೇಜನ ನೀಡಿ ಇಡೀ ಜಗತ್ತಿಗೆ ಇಂಧನ ರಫ್ತುದಾರ ದೇಶವಾಗಿ ಹೊರಹೊಮ್ಮುವ ಉದ್ದೇಶ

8. ಚೀನಾದ ಟಿಕ್ ಟಾಕ್ ಅಪ್ಲಿಕೇಷನ್ ಗೆ ನಿಷೇಧ ಹೇರುವ ಕಾನೂನಿಗೆ 75 ದಿನಗಳ ತಡೆಯಾಜ್ಞೆ.

9. ಪ್ಯಾಲೆಸ್ತೀನಿಯರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ಆಕ್ರಮಿತ ವೆಸ್ಟ್ ಬ್ಯಾಂಕ್ ನಲ್ಲಿ ನೆಲೆಸಿರುವ ಇಸ್ರೇಲಿಗರ ಮೇಲೆ ಬೈಡೆನ್ ಸರ್ಕಾರ ವಿಧಿಸಿದ್ದ ನಿರ್ಬಂಧ ರದ್ದು.

10. ಭಯೋತ್ಪಾದನೆಗೆ ಪ್ರೋತ್ಸಾಹ ನೀಡುತ್ತಿದೆ ಎಂಬ ಕಾರಣಕ್ಕೆ ಕ್ಯೂಬಾವನ್ನು ಕಪ್ಪುಪಟ್ಟಿಗೆ ಸೇರಿಸಿದ್ದ ಬೈಡೆನ್ ಸರ್ಕಾರದ ಆದೇಶವೂ ರದ್ದು.

Read More
Next Story