ಅಧ್ಯಕ್ಷ ಅಸಾದ್​ ಪರಾರಿ, ಸಿರಿಯಾ ಬಂಡುಕೋರರ ಕೈವಶ
x

ಅಧ್ಯಕ್ಷ ಅಸಾದ್​ ಪರಾರಿ, ಸಿರಿಯಾ ಬಂಡುಕೋರರ ಕೈವಶ

ಸಿಎನ್ಎನ್ ವರದಿಯ ಪ್ರಕಾರ, ಸಿರಿಯಾದ ಬಂಡುಕೋರ ಪಡೆಗಳು ರಾಜಧಾನಿ ಡಮಾಸ್ಕಸ್ ಮೇಲೆ ನಿಯಂತ್ರಣ ಸಾಧಿಸಿದೆ. ಅಧ್ಯಕ್ಷ ಬಷರ್ ಅಲ್-ಅಸ್ಸಾದ್ ರಾಜಧಾನಿಯಿಂದ ಪಲಾಯನ ಮಾಡಿದ್ದಾರೆ ಎಂದು ಬಂಡುಕೋರರು ಹೇಳಿಕೊಂಡಿದ್ದಾರೆ .


ಯುದ್ಧ ಮತ್ತು ಆಂತರಿಕ ಸಂಘರ್ಷದಲ್ಲೇ ಬೇಯುತ್ತಿರುವ ಸಿರಿಯಾ ಮತ್ತೊಂದು ಬಾರಿ ಬಂಡುಕೋರರ ಕೈವಶವಾಗಿದೆ. ನಾವು ರಾಜಧಾನಿ ಡಮಾಸ್ಕಸ್​ ತಮ್ಮ ನಿಯಂತ್ರಣದಲ್ಲಿ ಎಂದು ಉಗ್ರರು ಹೇಳಿಕೊಂಡಿದ್ದಾರೆ. ಅಧ್ಯಕ್ಷ ಬಷರ್ ಅಲ್​ ಅಸಾದ್ ಪರಾರಿಯಾಗಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ. ಏತನ್ಮಧ್ಯೆ, ಅಸಾದ್​ ಡಮಾಸ್ಕಸ್​ನಿಂದ ಹೊರಟ ಕೆಲವೇ ಕ್ಷಣಗಳಲ್ಲಿ ವಿಮಾನ ಅಪಘಾತಕ್ಕೀಡಾಗಿದೆ ಎಂದೂ ಹೇಳಲಾಗುತ್ತಿದೆ.


"ನಾವು ಡಮಾಸ್ಕಸ್ ನಗರವನ್ನು ನಿರಂಕುಶಾಧಿಕಾರಿ ಬಷರ್ ಅಲ್-ಅಸ್ಸಾದ್​​ನಿಂದ ಮುಕ್ತವೆಂದು ಘೋಷಿಸುತ್ತೇವೆ" ಎಂದು ಮಿಲಿಟರಿ ಕಾರ್ಯಾಚರಣೆ ಕಮಾಂಡ್ ಭಾನುವಾರ (ಡಿಸೆಂಬರ್ 8) ಟೆಲಿಗ್ರಾಮ್​ ಪೋಸ್ಟ್​​ನಲ್ಲಿ ಬರೆದಿದೆ ಎಂದು ಸಿಎನ್ಎನ್ ಉಲ್ಲೇಖಿಸಿದೆ. "ಪ್ರಪಂಚದಾದ್ಯಂತ ಸ್ಥಳಾಂತರಗೊಂಡವರಿಗೆ ಸಿರಿಯಾ ನಿಮಗಾಗಿ ಕಾಯುತ್ತಿದೆ." ಎಂದೂ ಬರೆದುಕೊಂಡಿದೆ.

ಬಂಡುಕೋರರು ಡಮಾಸ್ಕಸ್ ಪ್ರವೇಶಿಸಿ ಡಮಾಸ್ಕಸ್ ನ ಉತ್ತರಕ್ಕಿರುವ ಸಯದ್ನಾಯಾ ಮಿಲಿಟರಿ ಕಾರಾಗೃಹವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿರುವುದಾಗಿ ಹೇಳಿಕೊಂಡಿದ್ದರು.

ನಮ್ಮ ಕೈದಿಗಳನ್ನು ಬಿಡುಗಡೆ ಮಾಡಿದ್ದೇವೆ. ಜೈಲಿನಲ್ಲಿದ್ದವರ ಸರಪಳಿಗಳನ್ನು ಬಿಚ್ಚಿದ್ದೇವೆ ಸಹದ್ನಾಯಾ ಜೈಲಿನಲ್ಲಿ ಅನ್ಯಾಯದ ಬಂಧನವನ್ನು ಅಂತ್ಯಗೊಳಿಸಿದ್ದೇವೆ. ನಾವು ಸಿರಿಯನ್ ಜನರೊಂದಿಗೆ ಈ ಸಂಭ್ರಮವನ್ನು ಆಚರಿಸುತ್ತೇವೆ" ಎಂದು ಸಿರಿಯನ್ ಬಂಡುಕೋರರು ಹೇಳಿದ್ದಾರೆ.

ಅಮ್ನೆಸ್ಟಿ ಇಂಟರ್​ನ್ಯಾಷನಲ್​ ಸಂಸ್ಥೆ 2017ರ ವರದಿಯಲ್ಲಿ ಸಯ್ಯದ್ನಾಯಾ ಜೈಲನ್ನು "ಮಾನವ ಕಸಾಯಿಖಾನೆ" ಎಂದು ಕರೆದಿದೆ.

ಜುಲೈ 2023ರಲ್ಲಿ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈಕಮಿಷನರ್ ಕಚೇರಿಯ ವರದಿಯು ಸೈದ್ನಾಯಾ ಸೇರಿದಂತೆ ಸಿರಿಯನ್ ಬಂಧನ ಕೇಂದ್ರಗಳಲ್ಲಿ ಚಿತ್ರಹಿಂಸೆ ಮತ್ತು ಕ್ರೂರ, ಅಮಾನವೀಯ ವರ್ತನೆಯ ಮಾದರಿಗಳಿವೆ ಎಂದು ಹೇಳಿತ್ತು.

ಹೋಮ್ಸ್ ನಗರ ವಶಕ್ಕೆ

ಸಿರಿಯಾ ಸೇನೆಯು ಹಿಮ್ಮೆಟ್ಟಲು ಪ್ರಾರಂಭಿಸಿದ ನಂತರ ಇಸ್ಲಾಮಿಕ್ ಬಣ ಹಯಾತ್ ತಹ್ರಿರ್ ಅಲ್-ಶಾಮ್ (ಎಚ್​ಟಿಎಸ್​) ಕಳೆದ ರಾತ್ರಿ ತನ್ನ ಪಡೆಗಳು ಸಿರಿಯಾದ ಮೂರನೇ ಅತಿದೊಡ್ಡ ನಗರವಾದ ಹೋಮ್ಸ್​ ನಗರ ಪ್ರವೇಶಿಸಿದ್ದೇವೆ ಎಂದು ಘೋಷಿಸಿತ್ತು.

ಮೆಡಿಟರೇನಿಯನ್ ಕರಾವಳಿಯುದ್ದಕ್ಕೂ ಡಮಾಸ್ಕಸ್ ಮತ್ತು ಅಸ್ಸಾದ್ ಅವರ ಭದ್ರಕೋಟೆಗಳ ನಡುವಿನ ನಿರ್ಣಾಯಕ ಕೊಂಡಿಯಾಗಿರುವ ಈ ನಗರವು ಬಂಡುಕೋರರ ಕೈಗೆ ಸಿಕ್ಕಿದ್ದು ಅವರ ಮೊದಲ ಜಯವಾಗಿತ್ತು.

ಎಚ್​ಟಿಎಸ್ ನಾಯಕ ಅಬು ಮೊಹಮ್ಮದ್ ಅಲ್-ಜೊಲಾನಿ ತಮ್ಮ ಪಡೆಗಳು "ಹೋಮ್ಸ್ ಮತ್ತು ಡಮಾಸ್ಕರ್​ನ ಹೊಸ್ತಿಲಲ್ಲಿವೆ . ಕ್ರಿಮಿನಲ್ ಆಡಳಿತ ಕೊನೆಯಾಗಲಿವೆ" ಎಂದು ಘೋಷಿಸಿದರು.

ಸಂಘಟಿತ ದಾಳಿಯಲ್ಲಿ, ಬಂಡುಕೋರರು ಮುಖ್ಯವಾಗಿ ಡ್ರೂಜ್ ಜನಸಂಖ್ಯೆಯನ್ನು ಹೊಂದಿರುವ ನೈಋತ್ಯ ನಗರವಾದ ಸ್ವೈಡಾ ಮತ್ತು ಇಸ್ರೇಲಿ ಆಕ್ರಮಿತ ಗೋಲನ್ ಹೈಟ್ಸ್ ಬಳಿಯ ಕ್ಯುನೆಟ್ರಾವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿವೆ.

Read More
Next Story