![Narendra Modi: ಪ್ರಧಾನಿ ಮೋದಿಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅಪ್ಪುಗೆಯ ಸ್ವಾಗತ Narendra Modi: ಪ್ರಧಾನಿ ಮೋದಿಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅಪ್ಪುಗೆಯ ಸ್ವಾಗತ](https://karnataka.thefederal.com/h-upload/2025/02/11/511922-modi-3.webp)
Narendra Modi: ಪ್ರಧಾನಿ ಮೋದಿಗೆ ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅಪ್ಪುಗೆಯ ಸ್ವಾಗತ
Narendra Modi: ಫ್ರಾನ್ಸ್‌ನಲ್ಲಿ ನಡೆಯುತ್ತಿರುವ 'AI ಆ್ಯಕ್ಷನ್ ಶೃಂಗಸಭೆಯಲ್ಲಿ (AI summit) ಭಾಗವಹಿಸಲು ಮೋದಿ ತೆರಳಿದ್ದಾರೆ. ಈ ಜಾಗತಿಕ ಶೃಂಗಸಭೆಯ ಸಹ- ಅಧ್ಯಕ್ಷತೆಯನ್ನು ಭಾರತದ ಪ್ರಧಾನಿ ವಹಿಸಿಕೊಂಡಿದ್ದಾರೆ.
ನವದೆಹಲಿ: ಮೂರು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಫ್ರಾನ್ಸ್‌ನಲ್ಲಿ ಇಳಿದಿದ್ದರೆ. ಈ ವೇಳೆ ಅವರಿಗೆ ಫ್ರಾನ್ಸ್ ಅಧಿಕಾರಿಗಳು ಹಾಗೂ ಭಾರತೀಯ ಸಮುದಾಯದಿಂದ ಭವ್ಯ ಸ್ವಾಗತ ದೊರಕಿದೆ. ಬಳಿಕ ಅವರು ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್ ಅವರನ್ನು ಭೇಟಿಯಾಗಿದ್ದಾರೆ.
"ಪ್ಯಾರಿಸ್‌ನಲ್ಲಿ ನನ್ನ ಸ್ನೇಹಿತ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರನ್ನು ಭೇಟಿಯಾದುದು ಸಂತೋಷಕರ," ಎಂದು ಸೋಮವಾರ ಮೋದಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಮ್ಮ ಎರಡು ರಾಷ್ಟ್ರಗಳ ಪ್ರವಾಸದ ಮೊದಲ ಹಂತದ ಅಂಗವಾಗಿ ಮೋದಿ ಪ್ಯಾರಿಸ್‌ಗೆ ಹೋಗಿದ್ದು ಬಳಿಕ ಅವರು ಅಮೆರಿಕಕ್ಕೆ ತೆರಳಿ ಟ್ರಂಪ್ ಭೇಟಿ ಮಾಡಲಿದ್ದಾರೆ.
ಸಭೆಯ ಸಹ ಅಧ್ಯಕ್ಷ
ಫ್ರಾನ್ಸ್‌ನಲ್ಲಿ ನಡೆಯುತ್ತಿರುವ 'AI ಆಕ್ಷನ್ ಶೃಂಗಸಭೆಯಲ್ಲಿ ಭಾಗವಹಿಸಲು ಮೋದಿ ತೆರಳಿದ್ದಾರೆ. ಈ ಜಾಗತಿಕ ಶೃಂಗಸಭೆಯ ಸಹ-ಅಧ್ಯಕ್ಷತೆಯನ್ನು ಪ್ರಧಾನಿ ಮೋದಿ ವಹಿಸಲಿದ್ದಾರೆ.
ಫ್ರಾನ್ಸ್ ಅಧ್ಯಕ್ಷ ಆಯೋಜಿಸಿದ್ದ ಭೋಜನಕೂಟದಲ್ಲಿ ಮೋದಿ ಪಾಲ್ಗೊಂಡರು. ಈ ವೇಳೆ ಮ್ಯಾಕ್ರನ್ ಅವರು ಅಪ್ಪುಗೆಯ ಮೂಲಕ ಸ್ವಾಗತಿಸಿದರು. ಭೋಜನಕೂಟದಲ್ಲಿ, ಪ್ರಧಾನಿ ಮೋದಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರನ್ನು ಭೇಟಿಯಾದರು. ಮೋದಿ ಫ್ರಾನ್ಸ್‌ಗೆ ಆಗಮಿಸುತ್ತಿದ್ದಂತೆ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಭಾರತೀಯ ವಲಸಿಗರು ಹರ್ಷ ವ್ಯಕ್ತಪಡಿಸಿದರು.
ಶೃಂಗಸಭೆಯಲ್ಲಿ ತಂತ್ರಜ್ಞಾನ. ಪರಮಾಣು ಶಕ್ತಿ ಸೇರಿದಂತೆ ಪ್ರಮುಖ ವಿಷಯಗಳ ಕುರಿತು ಚರ್ಚೆ ನಡೆಯಲಿದೆ. ಸಭೆಯ ಬಳಿಕ ಪ್ರಧಾನಿ ಮೋದಿ ಮತ್ತು ಅವರ ಫ್ರಾನ್ಸ್ ಸಹವರ್ತಿ ಮ್ಯಾಕ್ರನ್ ಸೇರಿಕೊಂಡು ಬಂದರು ನಗರಿ ಮಾರ್ಸಿಲ್ಲೆಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಫೆಬ್ರವರಿ 12ರಂದು ಅಲ್ಲಿ ಹೊಸ ಭಾರತೀಯ ರಾಯಭಾರಿ ಕಚೇರಿ ಉದ್ಘಾಟಿಸಲಿದ್ದಾರೆ.
ಅದೇ ದಿನ ಇಬ್ಬರು ನಾಯಕರು ಮಾರ್ಸೇನಲ್ಲಿ ಇರುವ ಮಜರ್ಗ್‌ಸ್ ಯುದ್ಧ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ, ಪ್ರಥಮ ಮಹಾಯುದ್ಧದಲ್ಲಿ ಬಲಿಯಾದ ಭಾರತೀಯ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ.