ಪ್ರಧಾನಿ ಮೋದಿಗೆ ಕುವೈತ್ ನ ಅತ್ಯುನ್ನತ ಗೌರವ 'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್' ಪ್ರದಾನ
ಕುವೈತ್ ಈ ಗೌರವವನ್ನು ನಾನಾ ರಾಷ್ಟ್ರಗಳ ಮುಖ್ಯಸ್ಥರು ಮತ್ತು ವಿದೇಶಿ ಸಾರ್ವಭೌಮರು ಮತ್ತು ವಿದೇಶಿ ರಾಜಮನೆತನಗಳ ಸದಸ್ಯರಿಗೆ ಸ್ನೇಹದ ಸಂಕೇತವಾಗಿ ನೀಡಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾನುವಾರ (ಡಿಸೆಂಬರ್ 22ರಂದು) ಕುವೈತ್ ನ ಅತ್ಯುನ್ನತ ಗೌರವ 'ದಿ ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್' ನೀಡಿ ಗೌರವಿಸಲಾಗಿದೆ. ಕುವೈತ್ ನ ಅಮೀರ್ ಶೇಖ್ ಮೆಶಾಲ್ ಅಲ್-ಅಹ್ಮದ್ ಅಲ್-ಜಾಬರ್ ಅಲ್-ಸಬಾಹ್ ಅವರಿಂದ ಮೋದಿ ಈ ಗೌರವವನ್ನು ಸ್ವೀಕರಿಸಿದರು.
ಉಭಯ ದೇಶಗಳ ನಡುವಿನ ಉತ್ತಮ ಸಂಬಂಧ ಬಲಪಡಿಸಿದ್ದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಕುವೈತ್ ನ ಸರ್ಕಾರಿ ಸುದ್ದಿ ಸಂಸ್ಥೆ ಕುನಾ ವರದಿ ಮಾಡಿದೆ. ಆರ್ಡರ್ ಆಫ್ ಮುಬಾರಕ್ ಅಲ್ ಕಬೀರ್ ಕುವೈತ್‌ನ ನೈಟ್ ಹುಡ್ ಆರ್ಡರ್ ಆಗಿದೆ.
ಇದು ಪ್ರಧಾನಿ ಮೋದಿಗೆ ದೇಶವೊಂದು ನೀಡುವ 20ನೇ ಅಂತಾರಾಷ್ಟ್ರೀಯ ಗೌರವವಾಗಿದೆ.
ಕುವೈತ್‌ನ ಈ ಗೌರವವನ್ನು ರಾಷ್ಟ್ರಗಳ ಮುಖ್ಯಸ್ಥರು ಮತ್ತು ವಿದೇಶಿ ಸಾರ್ವಭೌಮರು ಮತ್ತು ವಿದೇಶಿ ರಾಜಮನೆತನಗಳ ಸದಸ್ಯರಿಗೆ ಸ್ನೇಹದ ಸಂಕೇತವಾಗಿ ನೀಡಲಾಗುತ್ತದೆ. ಈ ಹಿಂದೆ ಬಿಲ್ ಕ್ಲಿಂಟನ್, ಪ್ರಿನ್ಸ್ ಚಾರ್ಲ್ಸ್ ಮತ್ತು ಜಾರ್ಜ್ ಬುಷ್ ಅವರಂತಹ ವಿದೇಶಿ ನಾಯಕರಿಗೆ ಈ ಪ್ರಶಸ್ತಿಯನ್ನು ನೀಡಲಾಗಿತ್ತು.
ಎರಡು ದಿನಗಳ ಭೇಟಿಗಾಗಿ ಮೋದಿ ಶನಿವಾರ ಕುವೈತ್ ಗೆ ಆಗಮಿಸಿದರು. 40 ವರ್ಷಗಳಲ್ಲಿ ಕುವೈತ್ ಗೆ ಭೇಟಿ ನೀಡಿದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.