Pawan Kalyans son hurt in Singapore fire accident
x

ಪುತ್ರ ಮಾರ್ಕ್​ ಜತೆ ಪವನ್ ಕಲ್ಯಾಣ್​ (ಸಂಗ್ರಹ ಚಿತ್ರ- ಎಕ್ಸ್​ ಪೋಸ್ಟ್​)

ಸಿಂಗಾಪುರದಲ್ಲಿ ಬೆಂಕಿ ಅನಾಹುತ; ಪವನ್ ಕಲ್ಯಾಣ್​ ಪುತ್ರ ಮಾರ್ಕ್​ ಶಂಕರ್​ಗೆ ಗಾಯ

ಮಾರ್ಕ್ ಶಂಕರ್, ಪವನ್ ಕಲ್ಯಾಣ್ ಮತ್ತು ಅವರ ಮೂರನೇ ಪತ್ನಿ ಆನ್ನಾ ಲೆಜ್ನೆವಾ ಅವರ ಪುತ್ರನಾಗಿದ್ದು, ಅಕ್ಟೋಬರ್ 10, 2017 ರಂದು ಜನಿಸಿದ್ದಾನೆ. 8 ವರ್ಷದವನಾಗಿರುವ ಮಾರ್ಕ್, ಸಿಂಗಾಪುರದಲ್ಲಿ ತನ್ನ ಶಿಕ್ಷಣ ಮುಂದುವರಿಸುತ್ತಿದ್ದಾನೆ.


ಆಂಧ್ರಪ್ರದೇಶದ ಉಪ ಮುಖ್ಯಮಂತ್ರಿ ಹಾಗೂ ಖ್ಯಾತ ನಟ ಪವನ್ ಕಲ್ಯಾಣ್ ಅವರ ಕಿರಿಯ ಪುತ್ರ ಮಾರ್ಕ್ ಶಂಕರ್, ಸಿಂಗಾಪುರದ ಶಾಲೆಯೊಂದರಲ್ಲಿ ಏಪ್ರಿಲ್ 7ರಂದು ನಡೆದ ಅಗ್ನಿ ಅವಘಡದಲ್ಲಿ ಗಾಯಗೊಂಡಿದ್ದಾನೆ. ಈ ಘಟನೆಯಲ್ಲಿ ಮಾರ್ಕ್​ನ ಕೈ ಮತ್ತು ಕಾಲುಗಳಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು, ಹೊಗೆ ಸೇವನೆಯಿಂದ ಉಸಿರಾಟದ ತೊಂದರೆಯೂ ಉಂಟಾಗಿದೆ. ಪ್ರಸ್ತುತ ಅವರು ಸಿಂಗಾಪುರದ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಆರಂಭಿಕ ವರದಿಗಳು ತಿಳಿಸಿವೆ.

ಪವನ್ ಕಲ್ಯಾಣ್ ಅವರು ಘಟನೆ ನಡೆದಾಗ ಅಲ್ಲೂರಿ ಸೀತಾರಾಮ ರಾಜು (ಎಎಸ್ಆರ್) ಜಿಲ್ಲೆಯ ಮಾನ್ಯಂ ಪ್ರದೇಶದಲ್ಲಿ ನಿಗದಿಯಾಗಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದರು. "ನಾನು ಕುರಿಡಿ ಗ್ರಾಮದ ಬುಡಕಟ್ಟು ಜನರಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸುವುದಾಗಿ ಭರವಸೆ ನೀಡಿದ್ದೆ. ಆ ಭರವಸೆಯನ್ನು ಈಡೇರಿಸಿ, ನಂತರ ಸಿಂಗಾಪುರಕ್ಕೆ ತೆರಳುತ್ತೇನೆ," ಎಂದು ಅವರು ಎಕ್ಸ್​ಪೋಸ್ಟ್​​ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಪವನ್ ಕಲ್ಯಾಣ್ ವಿಶಾಖಪಟ್ಟಣಂಗೆ ತೆರಳಿ, ಅಲ್ಲಿಂದ ಸಿಂಗಾಪುರಕ್ಕೆ ಹೊರಡುವ ಯೋಜನೆ ಹಾಕಿಕೊಂಡಿದ್ದಾರೆ. ಈ ಘಟನೆಯಿಂದಾಗಿ ಅವರ ಉಳಿದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಎಎಸ್ಆರ್ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಲ್ಲಿ ಸೋಮವಾರದಿಂದ ಎರಡು ದಿನಗಳ ಪ್ರವಾಸವನ್ನು ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸಕ್ಕಾಗಿ ಆಯೋಜಿಸಲಾಗಿತ್ತು. ಆದರೆ, ಮಗನ ಆರೋಗ್ಯದ ಬಗ್ಗೆ ತಿಳಿದ ನಂತರ, ಅವರನ್ನು ತಕ್ಷಣ ಸಿಂಗಾಪುರಕ್ಕೆ ತೆರಳಲು ಅಧಿಕಾರಿಗಳು ಮತ್ತು ಪಕ್ಷದ ಮುಖಂಡರು ಮನವೊಲಿಸಿದ್ದಾರೆ.

ಮೂರನೇ ಪತ್ನಿಯ ಮಗ

ಮಾರ್ಕ್ ಶಂಕರ್, ಪವನ್ ಕಲ್ಯಾಣ್ ಮತ್ತು ಅವರ ಮೂರನೇ ಪತ್ನಿ ಆನ್ನಾ ಲೆಜ್ನೆವಾ ಅವರ ಪುತ್ರನಾಗಿದ್ದು, ಅಕ್ಟೋಬರ್ 10, 2017 ರಂದು ಜನಿಸಿದ್ದಾನೆ. 8 ವರ್ಷದವನಾಗಿರುವ ಮಾರ್ಕ್, ಸಿಂಗಾಪುರದಲ್ಲಿ ತನ್ನ ಶಿಕ್ಷಣ ಮುಂದುವರಿಸುತ್ತಿದ್ದಾನೆ. ಈ ಘಟನೆಯಲ್ಲಿ ಒಟ್ಟು 19 ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದರಲ್ಲಿ 15 ಮಕ್ಕಳು ಸೇರಿದ್ದಾರೆ. ಶಾಲೆಯ ಎರಡನೇ ಮತ್ತು ಮೂರನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದನ್ನು 30 ನಿಮಿಷಗಳಲ್ಲಿ ಆರಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ತಿಳಿಸಿವೆ.

ಪವನ್ ಕಲ್ಯಾಣ್ ಅವರ ಪುತ್ರನ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Read More
Next Story