ಪಾಕಿಸ್ತಾನ ಚುನಾವಣೆ: ಪಿಎಂಎಲ್-ಎನ್ ಗೆಲುವಿನ ಸಾಧ್ಯತೆ
x
ರಾವಲ್ಪಿಂಡಿಯಲ್ಲಿ ಸೈನಿಕರು ಬೀದಿಯಲ್ಲಿ ಗಸ್ತು ತಿರುಗಿದರು(ಫೋಟೋ: PTI/AP)

ಪಾಕಿಸ್ತಾನ ಚುನಾವಣೆ: ಪಿಎಂಎಲ್-ಎನ್ ಗೆಲುವಿನ ಸಾಧ್ಯತೆ


ಪಾಕಿಸ್ತಾನದಲ್ಲಿ ಚುನಾವಣೆ ನಡೆದಿದ್ದು, ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್-ಎನ್) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ವರದಿಗಳ ಪ್ರಕಾರ, ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಎರಡನೇ ಹಾಗೂ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಮತ್ತು ಇತರ ಪಕ್ಷಗಳು ನಂತರದ ಸ್ಥಾನದಲ್ಲಿವೆ.

ಹೊಸ ಸರ್ಕಾರವನ್ನು ಆಯ್ಕೆ ಮಾಡಲು ಫೆಬ್ರವರಿ 8 ರಂದು ಚುನಾವಣೆ ನಡೆಯಿತು. 44 ರಾಜಕೀಯ ಪಕ್ಷಗಳು ಸ್ಪರ್ಧಿಸಿದ್ದು, ಫೆಡರಲ್ ಅಸೆಂಬ್ಲಿಯಲ್ಲಿ 5,121 ಅಭ್ಯರ್ಥಿಗಳು ಮತ್ತು ಪ್ರಾಂತೀಯ ಅಸೆಂಬ್ಲಿಗಳಲ್ಲಿ 12,695 ಅಭ್ಯರ್ಥಿಗಳು ಪಾಲ್ಗೊಂಡಿದ್ದಾರೆ.

ಮತದಾನ ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ನಡೆಯಿತು. ಭದ್ರತೆಗೆ 6,50,000 ಕ್ಕೂ ಹೆಚ್ಚು ಸೈನಿಕರು, ಮಿಲಿಟರಿ ಪೊಲೀಸ್ ಮತ್ತು ಸಾಮಾನ್ಯ ಪೊಲೀಸ್ ಅನ್ನು ನಿಯೋಜಿಸಲಾಗಿತ್ತು. ಪಿಎಂಎಲ್-ಎನ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ 115 ರಿಂದ 132 ಸ್ಥಾನ ಗೆಲ್ಲುವ ಸಾಧ್ಯತೆಯಿದೆ. ಮಹಿಳೆಯರು ಮತ್ತು ಅಲ್ಪಸಂಖ್ಯಾತರ ಸ್ಥಾನಗಳು ಒಟ್ಟಾದರೆ, ಬಹುಮತದ ಸರ್ಕಾರ ರಚಿಸಲು ಅವಕಾಶವಿದೆ. ಪ್ರಾಂತೀಯ ಅಸೆಂಬ್ಲಿಗೆ ಸಂಬಂಧಿಸಿದಂತೆ, 297 ರಲ್ಲಿ 190 ಸ್ಥಾನಗಳನ್ನು ಗೆಲ್ಲಬಹುದು. ಅಂದರೆ ಪಂಜಾಬ್ ಅಸೆಂಬ್ಲಿಯಲ್ಲಿ ಸಂಪೂರ್ಣ ಬಹುಮತ ದೊರೆಯಲಿದೆ.

ಪಿಪಿಪಿ ನಿರೀಕ್ಷೆಗಳು: ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಸಿಂಧ್‌ನಲ್ಲಿ ತನ್ನ ಸರ್ಕಾರ ರಚಿಸಬಹುದು. ಪಿಪಿಪಿ 35 ರಿಂದ 40 ಸ್ಥಾನ ಗೆಲ್ಲುವ ನಿರೀಕ್ಷೆಯಿದೆ ಎಂದು ಎಕ್ಸಿಟ್ ಪೋಲ್ ಹೇಳಿಸಿದೆ. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್‌ 23 ರಿಂದ 29 ಸ್ಥಾನ, ಮುತ್ತಹಿದಾ ಕ್ವಾಮಿ ಮೂವ್‌ಮೆಂಟ್ 12-14 ಸ್ಥಾನ ಹಾಗೂ ಜಮಿಯತ್ ಉಲೇಮಾ-ಎ-ಇಸ್ಲಾಂ (ಜೆಯುಐ), ಪಾಕಿಸ್ತಾನ್ ಮುಸ್ಲಿಂ ಲೀಗ್ (ಕ್ಯೂ) ಮತ್ತು ಇಸ್ಲಾಮಿ ಜಮ್ಹೂರಿ ಇತ್ತೆಹಾದ್ (ಐಜೆಐ) ತಲಾ ಎರಡು ಸ್ಥಾನ ಗಳಿಸಬಹುದು.

ನವಾಜ್ ಷರೀಫ್ ಮುಂದಿನ ಪ್ರಧಾನಿ?: ನವಾಜ್ ಷರೀಫ್ ಅವರು ಪ್ರಧಾನಿಯಾಗಲಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಹೇಳಿವೆ. ಆದರೆ, ಅವರಿಗೆ ಸರಳ ಬಹುಮತ ಪಡೆಯಲು ಸಾಧ್ಯವಾಗುತ್ತದೆಯೇ ಎಂಬುದು ಸ್ಪಷ್ಟವಾಗಿಲ್ಲ. ʻಹಣದ ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನಿ ಸೇನೆಯು ಚುನಾವಣೆಯನ್ನು ನಡೆಸುತ್ತಿದೆʼ ಎಂದು ಇಂಟರ್ನ್ಯಾಷನಲ್ ಕ್ರೈಸಿಸ್ ಗ್ರೂಪ್ (ಐಸಿಜಿ) ಏಷ್ಯಾ ನಿರ್ದೇಶಕ ಹಕ್ ಹ್ವಾಂಗ್-ಲೆಟ್ ಹೇಳಿದ್ದಾರೆ. ಐಎಂಎಫ್‌ನೊಂದಿಗೆ ಹೊಸ, ದೀರ್ಘಾವಧಿ ಒಪ್ಪಂದವನ್ನು ಖಚಿತಪಡಿಸಿ ಕೊಳ್ಳಲು ಪ್ರಯತ್ನಿಸಲಾಗುತ್ತಿದೆ. ಆದರೆ ರಾಜಕೀಯ ಸ್ಥಿರತೆಯ ಅಭಾವದಲ್ಲಿ ಆರ್ಥಿಕ ಹೊಂದಾಣಿಕೆ ಆದ್ಯತೆಯ ಚಟುವಟಿಕೆಯಾಗುವುದಿಲ್ಲʼ ಎಂದು ಹೇಳಿದ್ದಾರೆ.

Read More
Next Story