ಒಮಾನ್ ಮಸೀದಿಯಲ್ಲಿ ಗುಂಡಿನ ದಾಳಿ: ಭಾರತೀಯ ಸೇರಿ 6 ಸಾವು
x

ಒಮಾನ್ ಮಸೀದಿಯಲ್ಲಿ ಗುಂಡಿನ ದಾಳಿ: ಭಾರತೀಯ ಸೇರಿ 6 ಸಾವು

ಗುಂಡಿನ ದಾಳಿಯಿಂದ ಭಾರತೀಯ ಪ್ರಜೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಒಮಾನ್ ನ ವಿದೇಶಾಂಗ ಸಚಿವಾಲಯ ತಿಳಿಸಿದೆ,ʼ ಎಂದು ಮಸ್ಕತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದೆ


ಒಮಾನ್‌ನ ರಾಜಧಾನಿಯ ಶಿಯಾ ಮುಸ್ಲಿಂ ಮಸೀದಿ ಬಳಿ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ(ಐಸಿಸ್) ಗುಂಪು ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯರೊಬ್ಬರು ಸೇರಿದಂತೆ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಮಸ್ಕತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.

ಇಮಾಮ್ ಅಲಿ ಮಸೀದಿ ಬಳಿ ಸೋಮವಾರ ರಾತ್ರಿ ಗುಂಡಿನ ದಾಳಿ ನಡೆದಿದೆ. ಪೊಲೀಸ್ ಸಿಬ್ಬಂದಿ ಮತ್ತು ನಾಲ್ವರು ಪಾಕಿಸ್ತಾನಿ ಪ್ರಜೆಗಳು ಸಾವಿಗೀಡಾಗಿದ್ದು, 28 ಮಂದಿ ಗಾಯಗೊಂಡಿದ್ದಾರೆ.

ʻಗುಂಡಿನ ದಾಳಿಯಿಂದ ಭಾರತೀಯ ಪ್ರಜೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಇನ್ನೊಬ್ಬರು ಗಾಯಗೊಂಡಿದ್ದಾರೆ ಎಂದು ಒಮಾನ್ ನ ವಿದೇಶಾಂಗ ಸಚಿವಾಲಯ ತಿಳಿಸಿದೆ,ʼ ಎಂದು ಮಸ್ಕತ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಎಕ್ಸ್‌ ನಲ್ಲಿ ಪೋಸ್ಟ್ ಮಾಡಿದೆ. ‌

ಅಲ್ ವಾದಿ ಅಲ್ ಕಬೀರ್ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದು, ಭದ್ರತಾ ಪಡೆಗಳು ಮೂವರು ದಾಳಿಕೋರರನ್ನು ಹೊಡೆದುರುಳಿಸಿವೆ ಎಂದು ಹೇಳಿಕೆ ತಿಳಿಸಿದೆ. ದಾಳಿಯಲ್ಲಿ ನಾಲ್ವರು ಪಾಕಿಸ್ತಾನಿ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.

ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಇರಾಕ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಶಿಯಾಗಳ ಸಮಾರಂಭ, ಮೆರವಣಿಗೆ ಮತ್ತು ಆರಾಧಕರನ್ನುಗುರಿಯಾಗಿಸಿಕೊಂಡು ಐಸಿಸ್ ದಾಳಿ ನಡೆಸುತ್ತಿದೆ. ಆದರೆ, ಶಿಯಾಗಳು ಅಲ್ಪಸಂಖ್ಯಾತರಾಗಿರುವ ಒಮಾನ್‌ನಲ್ಲಿ ಇದುವರೆಗೆ ದಾಳಿ ನಡೆದಿರಲಿಲ್ಲ.

Read More
Next Story