
ನೈಜೀರಿಯಾದ ಅತ್ಯುನ್ನತ ಗೌರವ ಪಡೆದ ಪ್ರಧಾನಿ; ಬ್ರಿಟನ್ ರಾಣಿ ಬಳಿಕ ಈ ಪುರಸ್ಕಾರ ಪಡೆದ 2ನೇ ವಿದೇಶಿ ಗಣ್ಯ
ನೈಜೀರಿಯಾದ ಎರಡನೇ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪಡೆದ ಮೊದಲಿಗರು ರಾಣಿ ಎಲಿಜಬೆತ್. ಮೋದಿ ಎರಡನೆಯವರು. ಇದು ಪ್ರಧಾನಿ ಮೋದಿಗೆ ನೀಡಲಾಗುತ್ತಿರುವ 17ನೇ ಅಂತಾರಾಷ್ಟ್ರೀಯ ಪ್ರಶಸ್ತಿಯಾಗಿದೆ
ನೈಜೀರಿಯಾ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆ ದೇಶದ ಎರಡನೇ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯಾದ ʼಗ್ರ್ಯಾಂಡ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ನೈಜರ್ʼ ಪುರಸ್ಕಾರ ಮಾಡಿದ್ದಾರೆ. ಈ ಗೌರವ ಸ್ವೀಕರಿಸುವ ಎರಡನೇ ವಿದೇಶಿ ಗಣ್ಯ ಎಂಬ ಹೆಗ್ಗಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಪಾತ್ರರಾಗಿದ್ದಾರೆ. ಅಂದ ಹಾಗೆ ಮೋದಿ ಅವರಿಗೆ ಕೆಲವೇ ದಿನಗಳ ಹಿಂದೆ ಕೆರಿಬಿಯನ್ ರಾಷ್ಟ್ರವಾದ ಡೊಮೆನಿಕಾವು ತನ್ನ ಅತ್ಯುನ್ನತ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು. ಹೀಗೆ ಕೆಲವೇ ದಿನಗಳ ಅಂತರದಲ್ಲಿ ಮೋದಿ ಎರಡೆರಡು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಅಂದ ಹಾಗೆ ಬ್ರಿಟ್ನ ರಾಣಿ, ಕ್ವೀನ್ ಎಲಿಜಬೆತ್ ರಲ್ಲಿ ಜಿಕಾನ್ ಪ್ರಶಸ್ತಿ ಪಡೆದ ಏಕೈಕ ವಿದೇಶಿ ಗಣ್ಯರಾಗಿದ್ದರು. ಅವರ ನಂತರ ಇದನ್ನು ಪಡೆದಿರುವ ವಿದೇಶದ ಗಣ್ಯರೆಂದರೆ ನರೇಂದ್ರ ಮೋದಿ ಮಾತ್ರ. ನರೇಂದ್ರ ಮೋದಿ ಅವರ ಪಾಲಿಗೆ ಇದು 17ನೇ ಅಂತಾರಾಷ್ಟ್ರೀಯ ಪ್ರಶಸ್ತಿಯಾಗಿದೆ.
ನೈಜೀರಿಯಾ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬು ಅವರ ಆಹ್ವಾನದ ಮೇರೆಗೆ ಮೋದಿ ಮೂರು ರಾಷ್ಟ್ರಗಳ ಭೇಟಿಯ ಮೊದಲ ಹಂತದಲ್ಲಿದ್ದಾರೆ. ಕಳೆದ 17 ವರ್ಷಗಳಲ್ಲಿ ಭಾರತದ ಪ್ರಧಾನಿಯೊಬ್ಬರು ನೈಜೀರಿಯಾಕ್ಕೆ ಭೇಟಿ ನೀಡುತ್ತಿರುವುದು ಇದೇ ಪ್ರಥಮ ಬಾರಿ.
ನೈಜೀರಿಯಾ ತನ್ನ ಜಿಕಾನ್ ಪ್ರಶಸ್ತಿಯೊಂದಿಗೆ ಪ್ರಧಾನಿ ಮೋದಿಗೆ ಗೌರವ ಸಲ್ಲಿಸಲಿದೆ ಎಂದು ಭಾರತೀಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮೋದಿ ಅವರಿಗೆ ದೇಶವೊಂದು ನೀಡುತ್ತಿರುವ 17ನೇ ಅಂತಾರಾಷ್ಟ್ರೀಯ ಪ್ರಶಸ್ತಿ ಇದಾಗಿದೆ.
ಮೋದಿಗೆ 'ಕಿ ಟು ಸಿಟಿ ' ಉಡುಗೊರೆ
ಭಾನುವಾರ (ನವೆಂಬರ್ 17) ನೈಜೀರಿಯಾಕ್ಕೆ ಆಗಮಿಸಿದ ಮೋದಿಯವರನ್ನು ಫೆಡರಲ್ ಕ್ಯಾಪಿಟಲ್ ಟೆರಿಟರಿ ಸಚಿವ ನ್ಯೆಸೊಮ್ ಎಜೆನ್ವೊ ವಿಕ್ ಆತ್ಮೀಯವಾಗಿ ಸ್ವಾಗತಿಸಿದರು. ಅವರು ಅವರಿಗೆ ಅಬುಜಾ ನಗರದ "ಕಿ ಟು ಸಿಟಿ " ಅನ್ನು ಉಡುಗೊರೆಯಾಗಿ ನೀಡಿದರು.
"ನೈಜೀರಿಯಾದ ಜನರು ಪ್ರಧಾನಿ ಮೋದಿ ಅವರ ಮೇಲೆ ಇಟ್ಟಿರುವ ನಂಬಿಕೆಯನ್ನು ಈ ಕೀಲಿ ಸಂಕೇತಿಸುತ್ತದೆ" ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಮೂರು ರಾಷ್ಟ್ರಗಳ ಪ್ರವಾಸದಲ್ಲಿ ಪ್ರಧಾನಿ ಮೋದಿ ಬ್ರೆಜಿಲ್ ಮತ್ತು ಗಯಾನಾಕ್ಕೂ ಭೇಟಿ ನೀಡಲಿದ್ದಾರೆ.
ಏನಿದು ಕಿ ಟು ಸಿಟಿ ಗೌರವ
ದಿ ಕೀ ಟು ದಿ ಸಿಟಿ ಎಂಬುದು ಜನ ಸಮುದಾಯದ ಮೇಲೆ ಗಮನಾರ್ಹ ಪರಿಣಾಮ ಬೀರಿದ ವ್ಯಕ್ತಿಗಳಿಗೆ ನೀಡುವ ಸಾಂಕೇತಿಕ ಗೌರವ. ಇದು ಮಧ್ಯಕಾಲೀನ ಸಂಪ್ರದಾಯವನ್ನು ಆಧರಿಸಿದೆ. ರಾಜನೊಬ್ಬ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ನಗರಕ್ಕೆ ಭೇಟಿ ನೀಡಿದಾಗ ಕೀಲಿಯನ್ನು ನೀಡುವ ಸಂಪ್ರದಾಯದ ಭಾಗ. . ಕೀಲಿಯು ನಗರದ ಮೇಲೆ ಆಡಳಿತಗಾರನ ನಿಯಂತ್ರಣ ಮತ್ತು ನಗರದ ರಾಜಕೀಯ ಅಧಿಕಾರವನ್ನು ಗೌರವಿಸುವ ಅವರ ಉದ್ದೇಶವನ್ನು ಹೊಂದಿರುತ್ತದೆ.
ಆಧುನಿಕ ಕಾಲದಲ್ಲಿ, ನಗರದ ಕೀಲಿಯನ್ನು ನಗರ ಅಥವಾ ಸಮುದಾಯಕ್ಕೆ ಗಮನಾರ್ಹ ಕೊಡುಗೆ ನೀಡಿದ ಜನರಿಗೆ ನೀಡಲಾಗುತ್ತದೆ, ವಿಶೇಷ ನಾಗರಿಕರು, ನಿವಾಸಿಗಳು, ಅತಿಥಿಗಳಿಗೆ ನೀಡಲಾಗುತ್ತದೆ. ಈ ಪ್ರಶಸ್ತಿಯನ್ನು ಫ್ರೀಡಂ ಆಫ್ ದಿ ಸಿಟಿ ಎಂದೂ ಕರೆಯುತ್ತಾರೆ. ಅದೇ ರೀತಿ ಮೋದಿಗೂ ನೈಜೀರಿಯಾಕ್ಕೆ ಭೇಟಿ ನೀಡಿದಾಗ ಕಿ ಟು ಸಿಟಿ ನೀಡಲಾಗಿದೆ.