ನೇಪಾಳ ಪ್ರವಾಹಕ್ಕೆ 781 ಬಲಿ; 2,502 ಮಂದಿ ಇನ್ನೂ ನಾಪತ್ತೆ
x

ನೇಪಾಳದ ಭೀಕರ ಹಠಾತ್ ಪ್ರವಾಹದಲ್ಲಿ ಸಾವಿನ ಸಂಖ್ಯೆ 781ಕ್ಕೆ ಏರಿದ್ದು, 2,502 ಮಂದಿ ನಾಪತ್ತೆಯಾಗಿದ್ದಾರೆ.

ನೇಪಾಳ ಪ್ರವಾಹಕ್ಕೆ 781 ಬಲಿ; 2,502 ಮಂದಿ ಇನ್ನೂ ನಾಪತ್ತೆ

ಆಗಸ್ಟ್ 30ರಂದು ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಕನಿಷ್ಠ ಏಳು ಭಾರತೀಯರು ಸೇರಿದಂತೆ ಹಲವು ವಿದೇಶಿ ಪ್ರಜೆಗಳನ್ನು ರಕ್ಷಿಸಲಾಗಿದೆ.


Click the Play button to hear this message in audio format

ನೇಪಾಳದಲ್ಲಿ ಗ್ಲೇಸಿಯರ್ ಕುಸಿತದಿಂದ ಉಂಟಾದ ಭೀಕರ ಹಠಾತ್ ಪ್ರವಾಹದ ಬಳಿಕ ಸಾವಿನ ಸಂಖ್ಯೆ 781ಕ್ಕೆ ಏರಿಕೆಯಾಗಿದೆ. ನೇಪಾಳದ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಇನ್ನೂ 2,502 ಮಂದಿ ನಾಪತ್ತೆಯಾಗಿದ್ದು, ಅವರಲ್ಲಿ 592 ಮಂದಿ ವಿದೇಶಿ ಪ್ರಜೆಗಳಾಗಿದ್ದಾರೆ.

ಆಗಸ್ಟ್ 26ರಂದು ಟಿಬೆಟ್ ಗಡಿಯಲ್ಲಿರುವ ರಾಸುವಾ ಜಿಲ್ಲೆಯ ಭೋಟೆಕೋಶಿ ನದಿಯಲ್ಲಿ ಗ್ಲೇಸಿಯರ್ ಕುಸಿತದಿಂದ ಏಕಾಏಕಿ ಭಾರೀ ಪ್ರವಾಹ ಉಂಟಾಗಿತ್ತು. ಪ್ರವಾಹದ ರಭಸಕ್ಕೆ ಹಿಮಾಲಯದ ಹಲವು ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಣ್ಣು ಕುಸಿತ ಸಂಭವಿಸಿದ್ದು, ಮನೆಗಳು, ರಸ್ತೆಗಳು ಮತ್ತು ಇತರ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯಾಗಿದೆ.

6ನೇ ದಿನವೂ ಮುಂದುವರಿದ ರಕ್ಷಣಾ ಕಾರ್ಯಾಚರಣೆ

ದುರಂತ ಸಂಭವಿಸಿ ಆರನೇ ದಿನಕ್ಕೆ ಕಾಲಿಟ್ಟಿದ್ದು, ನೇಪಾಳ ಮತ್ತು ಚೀನಾದಲ್ಲಿ ರಕ್ಷಣಾ ತಂಡಗಳು ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿವೆ. ಪರ್ವತ ಪ್ರದೇಶಗಳಲ್ಲಿ ಹವಾಮಾನ ಹಾಗೂ ಭೌಗೋಳಿಕ ಪರಿಸ್ಥಿತಿಗಳು ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿವೆ.

ಚೀನಾದ ಗಡಿಯಾಚೆಯ ಗ್ಯಿರೋಂಗ್ ಕೌಂಟಿಯಲ್ಲೂ ಪ್ರವಾಹದ ಪರಿಣಾಮ ಭಾರೀ ಹಾನಿ ಸಂಭವಿಸಿದೆ. ಚೀನಾ ಅಧಿಕಾರಿಗಳ ಪ್ರಕಾರ, ಅಲ್ಲಿ 16 ಮಂದಿ ಮೃತಪಟ್ಟಿದ್ದು, 546 ಮಂದಿ ನಾಪತ್ತೆಯಾಗಿದ್ದಾರೆ.

ಏಳು ಭಾರತೀಯರು ರಕ್ಷಣೆ

ಆಗಸ್ಟ್ 30ರಂದು ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ ಕನಿಷ್ಠ ಏಳು ಭಾರತೀಯರು ಸೇರಿದಂತೆ ಹಲವು ವಿದೇಶಿ ಪ್ರಜೆಗಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ನಾಪತ್ತೆಯಾಗಿರುವವರ ಪತ್ತೆಗಾಗಿ ರಕ್ಷಣಾ ತಂಡಗಳು ವಿವಿಧ ಪ್ರದೇಶಗಳಲ್ಲಿ ಶೋಧ ಮುಂದುವರಿಸಿವೆ.

Read More
Next Story