Mark Zuckerberg : ಫೇಸ್‌ಬುಕ್‌ ಮುಖ್ಯಸ್ಥ ಜುಕರ್‌ಬರ್ಗ್‌ಗೆ ಕೇಂದ್ರ ಸರ್ಕಾರದ ಎಚ್ಚರಿಕೆ
x
ಮಾರ್ಕ್‌ ಜುಕರ್‌ಬರ್ಗ್‌

Mark Zuckerberg : ಫೇಸ್‌ಬುಕ್‌ ಮುಖ್ಯಸ್ಥ ಜುಕರ್‌ಬರ್ಗ್‌ಗೆ ಕೇಂದ್ರ ಸರ್ಕಾರದ ಎಚ್ಚರಿಕೆ

Mark Zuckerberg : ಕೋವಿಡ್‌ ಕಾಲದ ನಾನಾ ಒತ್ತಡಗಳನ್ನು ನಿಯಂತ್ರಿಸಲು ಸಾಧ್ಯವಾಗದ ಭಾರತ ಸೇರಿದಂತೆ ಉಳಿದ ದೇಶಗಳ ಸರ್ಕಾರಗಳು 2024ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿವೆ ಎಂದು ಜುಕರ್‌ಬರ್ಗ್‌ ಹೇಳಿದ್ದರು.


2024ರ ಲೋಕಸಭಾ ಚುನಾವಣೆ ಕುರಿತು ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಮೆಟಾ ಮುಖ್ಯಸ್ಥ ಮಾರ್ಕ್ ಜುಕರ್ಬರ್ಗ್‌ಗೆ (Mark Zuckerberg ) ನೋಟಿಸ್‌ ನೀಡಲು ಸಂಸದೀಯ ಸ್ಥಾಯಿ ಸಮಿತಿ ಯೋಜನೆ ರೂಪಿಸಿದೆ.

ಜನವರಿ 10 ರಂದು ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದ ಫೇಸ್ಬುಕ್ ಸಹ-ಸಂಸ್ಥಾಪಕರು ಆಗಿರುವ ಜುಕರ್‌ಬರ್ಗ್‌, ಕೋವಿಡ್ ಸಾಂಕ್ರಾಮಿಕ ರೋಗ, ವಿಶ್ವದಾದ್ಯಂತ ಅಧಿಕಾರದಲ್ಲಿರುವ ಸರ್ಕಾರಗಳ ಮೇಲಿನ ನಂಬಿಕೆ ಕಳೆದುಕೊಳ್ಳಲು ಕಾರಣವಾಗಿದೆ ಎಂದು ಹೇಳಿದರು.

ವಿಶ್ವದಾದ್ಯಂತ ಆಡಳಿತ ಪಕ್ಷಗಳು 2024ರ ಚುನಾವಣೆಯಲ್ಲಿ ಸೋತಿವೆ ಎಂದು ಹೇಳಿದ ಅವರು, ಈ ಸಂದರ್ಭದಲ್ಲಿ ಭಾರತವನ್ನೂ ಉಲ್ಲೇಖಿಸಿಸಿದ್ದರು. ಆದರೆ, ಭಾರತದಲ್ಲಿ ಬಿಜೆಪಿ ತನ್ನ ಸ್ಥಾನಗಳನ್ನು ಕಳೆದುಕೊಂಡ ಹೊರತಾಗಿಯೂ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದೆ.

"ಜಾಗತಿಕವಾಗಿ ಒಂದೇ ರೀತಿಯ ವಿದ್ಯಮಾನ ಪ್ರಕಟಗೊಂಡಿದೆ. ಹಣದುಬ್ಬರ ಅಥವಾ ಕೋವಿಡ್ ಸಾಂಕ್ರಾಮಿಕ ರೋಗಗಳನ್ನು ಎದುರಿಸಲು ಆಡಳಿತ ಸರ್ಕಾರಗಳು ವಿಫಲಗೊಂಡವು ಎಂದು ಹೇಳಿದ್ದಾರೆ.

ಅಶ್ವಿನ್‌ ವೈಷ್ಣವ್‌ ಹೇಳಿದ್ದೇನು?

ಜುಕರ್ಬರ್ಗ್ ಅವರ ಹೇಳಿಕೆ ನಿರಾಕರಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಡಳಿತಾರೂಢ ಮೈತ್ರಿಕೂಟ ನಂಬಿಕೆ ಉಳಿಸಿಕೊಂಡಿದೆ ಎಂದು ಹೇಳಿದರು.

"2024 ರ ಚುನಾವಣೆಯಲ್ಲಿ ಭಾರತ ಸೇರಿದಂತೆ ಹೆಚ್ಚಿನ ಅಧಿಕಾರದಲ್ಲಿರುವ ಸರ್ಕಾರಗಳು ಕೋವಿಡ್ ನಂತರ ಸೋತಿವೆ ಎಂಬ ಜುಕರ್ಬರ್ಗ್ ಅವರ ಹೇಳಿಕೆಯು ತಪ್ಪು ಗ್ರಹಿಕೆ " ಎಂದು ವೈಷ್ಣವ್ ಹೇಳಿದ್ದಾರೆ.

"ಮೆಟಾ, ಜುಕರ್ಬರ್ಗ್ ತಪ್ಪು ಮಾಹಿತಿ ನೀಡುವುದನ್ನು ನೋಡುವುದೇ ನಿರಾಶಾದಾಯಕ . ಸತ್ಯಗಳು ಮತ್ತು ವಿಶ್ವಾಸಾರ್ಹತೆಯನ್ನು ಎತ್ತಿಹಿಡಿಯಬೇಕು " ಎಂದು ಅವರು ಹೇಳಿದ್ದಾರೆ.

ಬಿಜೆಪಿ ಸಂಸದನ ಎಚ್ಚರಿಕೆ

ತಪ್ಪು ಮಾಹಿತಿ ಹರಡಿದ ಆಧಾರದ ಮೇಲೆ ಮೆಟಾ ಮುಖ್ಯಸ್ಥರಿಗೆ ನೋಟಿಸ್‌ ನೀಡಲಾಗುವುದು ಬಿಜೆಪಿ ಸಂಸದ ಮತ್ತು ಸಂವಹನ ಮತ್ತು ಐಟಿ ಕುರಿತ ಸದನ ಸಮಿತಿಯ ಅಧ್ಯಕ್ಷ ನಿಶಿಕಾಂತ್ ದುಬೆ ಹೇಳಿದ್ದಾರೆ. "ಪ್ರಜಾಪ್ರಭುತ್ವ ದೇಶದ ಬಗ್ಗೆ ತಪ್ಪು ಮಾಹಿತಿ ನೀಡುವುದು ಸರಿಯಲ್ಲಿ. ಈ ತಪ್ಪಿಗೆ ಸಂಸತ್ತು ಮತ್ತು ಭಾರತದ ಜನರ ಕ್ಷಮೆಯಾಚಿಸಬೇಕು" ಎಂದು ದುಬೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Read More
Next Story