Mark Carney: ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನೆ ಆಯ್ಕೆ: ಇವರ ಹಿನ್ನೆಲೆ ಏನು?
x

Mark Carney: ಕೆನಡಾ ನೂತನ ಪ್ರಧಾನಿಯಾಗಿ ಮಾರ್ಕ್ ಕಾರ್ನೆ ಆಯ್ಕೆ: ಇವರ ಹಿನ್ನೆಲೆ ಏನು?

ಲಿಬರಲ್ ಪಾರ್ಟಿಯ ನಾಯಕತ್ವಕ್ಕಾಗಿ ನಡೆದ ಚುನಾವಣೆಯಲ್ಲಿ ಮಾರ್ಕ್ ಕಾರ್ನೆ ಅವರು ಶೇ.85.9ರಷ್ಟು ಮತಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಗೆಲುವು ಸಾಧಿಸಿದರು.


ಲಿಬರಲ್ ಪಕ್ಷವು ಮಾರ್ಕ್ ಕಾರ್ನೆ (Mark Carney) ಅವರು ಕೆನಡಾದ ನೂತನ ಪ್ರಧಾನಿಯಾಗಿ ಪದಗ್ರಹಣ ಮಾಡಲಿದ್ದಾರೆ. ಬ್ಯಾಂಕರ್ ಆಗಿದ್ದೆ ಮಾರ್ಕ್ ಕಾರ್ನೆ ಅವರನ್ನು ಪಕ್ಷದ ಮುಖ್ಯಸ್ಥರಾಗಿ ಆಯ್ಕೆ ಮಾಡಿರುವ ಕಾರಣ ಅವರು ಪಿಎಂ ಹುದ್ದೆಗೇರಲಿದ್ದಾರೆ. ಹಲವು ವಿವಾದಗಳನ್ನು ಮೈಗೆ ಎಳೆದುಕೊಂಡಿರುವ ನಿರ್ಗಮಿತ ಪ್ರಧಾನಿ ಜಸ್ಟಿನ್ ಟ್ರುಡೋ ಹುದ್ದೆಯನ್ನು ಮಾರ್ಕ್ ಕಾರ್ನೆ ಅಲಂಕರಿಸಲಿದ್ದಾರೆ.

ಲಿಬರಲ್ ಪಾರ್ಟಿಯ ನಾಯಕತ್ವಕ್ಕಾಗಿ ನಡೆದ ಚುನಾವಣೆಯಲ್ಲಿ ಮಾರ್ಕ್ ಕಾರ್ನೆ ಅವರು ಶೇ.85.9ರಷ್ಟು ಮತಗಳನ್ನು ಪಡೆಯುವ ಮೂಲಕ ಅಭೂತಪೂರ್ವ ಗೆಲುವು ಸಾಧಿಸಿದರು. 59 ವರ್ಷದ ಮಾರ್ಕ್ ಕಾರ್ನೆ ಅವರು ಶೀಘ್ರದಲ್ಲೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಜನವರಿಯಲ್ಲಿ ಜಸ್ಟಿನ್ ಟ್ರುಡೋ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಜಸ್ಟಿನ್ ಟ್ರುಡೋ ಆಡಳಿತ ವೈಖರಿ ಕುರಿತು ಸಾರ್ವಜನಿಕವಾಗಿ ಟೀಕೆಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಅವರು ರಾಜೀನಾಮೆ ನೀಡಿದ್ದರು. ಹಾಗೆಯೇ, ಬೇರೆಯವರು ಪ್ರಧಾನಿಯಾಗುವವರೆಗೆ ಹುದ್ದೆಯಲ್ಲಿ ಮುಂದುವರಿಯುತ್ತೇನೆ ಎಂದು ತಿಳಿಸಿದ್ದರು. ಜಸ್ಟಿನ್ ಟ್ರುಡೋ ಅವಧಿಯಲ್ಲಿಯೇ ಭಾರತದ ಜತೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿತ್ತು. ಇದಾದ ಬಳಿಕ ಹಲವು ವಿಷಯಗಳ ಕುರಿತು ಸ್ವಪಕ್ಷದಲ್ಲೇ ಟ್ರುಡೋ ವಿರುದ್ಧ ಅಸಮಾಧಾನ ಉಂಟಾಗಿತ್ತು.

ಕಾರ್ನೆ ಯಾರು ?

ಕೆನಡಾದ ಪುಟ್ಟ ಹಳ್ಳಿಯೊಂದರಲ್ಲಿ ಜನಿಸಿದ ಮಾರ್ಕ್ ಕಾರ್ನೆ, ಕೆನಡಾ ಮಾತ್ರವಲ್ಲ, ಜಗತ್ತಿನ ಪ್ರಮುಖ ಹಣಕಾಸು ತಜ್ಞರಲ್ಲಿ ಒಬ್ಬರಾಗಿದ್ದಾರೆ. ಹಾರ್ವರ್ಡ್ ವಿವಿಯಲ್ಲಿ ಪದವಿ ಅಧ್ಯಯನ ಮಾಡಿ, ಕೆನಡಾದ ಕೇಂದ್ರೀಯ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಕೆನಡಾ ಮುಖ್ಯಸ್ಥರಾಗಿ, 2008ರಲ್ಲಿ ಕೆನಡಾವನ್ನು ಆರ್ಥಿಕ ದಿವಾಳಿತನದಿಂದ ಮುಕ್ತಗೊಳಿಸಿದ ಖ್ಯಾತಿ ಹೊಂದಿದ್ದಾರೆ. ಅಲ್ಲದೆ, ಶತಮಾನಗಳ ಇತಿಹಾಸವಿರುವ ಬ್ಯಾಂಕ್ ಆಫ್ ಇಂಗ್ಲೆಂಡ್ ನ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇವರು ಈಗ ರಾಜಕೀಯದಲ್ಲೂ ಮಹತ್ವದ ಮುನ್ನಡೆ ಸಾಧಿಸಿದ್ದಾರೆ.

Read More
Next Story