ವಿಮಾನ ಅಪಘಾತ: ಮಲಾವಿಯ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಸಾವು
x

ವಿಮಾನ ಅಪಘಾತ: ಮಲಾವಿಯ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಸಾವು


ಬ್ಲಾಂಟೈರ್ (ಮಲಾವಿ)- ಮಲಾವಿಯ ಉಪಾಧ್ಯಕ್ಷ ಸೌಲೋಸ್ ಚಿಲಿಮಾ ಮತ್ತು ಒಂಬತ್ತು ಮಂದಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ದೇಶದ ಅಧ್ಯಕ್ಷ ಲಾಜರಸ್ ಚಕ್ವೆರಾ ತಿಳಿಸಿದ್ದಾರೆ.

ಒಂದು ದಿನಕ್ಕೂ ಹೆಚ್ಚು ಕಾಲ ನಡೆದ ಶೋಧದ ನಂತರ ಉಪಾಧ್ಯಕ್ಷರು ಪ್ರಯಾಣಿಸುತ್ತಿದ್ದ ಮಿಲಿಟರಿ ವಿಮಾನದ ಅವಶೇಷಗಳು ಉತ್ತರ ಭಾಗದ ಪರ್ವತ ಪ್ರದೇಶದಲ್ಲಿ ಪತ್ತೆಯಾಗಿವೆ. ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ ಎಂದು ದೂರದರ್ಶನದಲ್ಲಿ ಹೇಳಿದರು.

ಕೆಟ್ಟ ಹವಾಮಾನ ಮತ್ತು ಗೋಚರತೆ ಇಲ್ಲದ ಕಾರಣ ಮುಝು ನ ವಿಮಾನ ನಿಲ್ದಾಣದಲ್ಲಿ ಇಳಿಯಬಾರದು. ಲಿಲೋಂಗ್ವೆಗೆ ವಾಪಸಾಗುವಂತೆ ಏರ್ ಟ್ರಾಫಿಕ್ ಕಂಟ್ರೋಲರ್‌ಗಳು ಹೇಳಿದರು. ಆನಂತರ ವಿಮಾನದ ಸಂಪರ್ಕ ತಪ್ಪಿಹೋಗಿ, ರಾಡಾರ್‌ನಿಂದ ಕಣ್ಮರೆಯಾಯಿತು.

ವಿಮಾನದಲ್ಲಿ ಏಳು ಪ್ರಯಾಣಿಕರು ಮತ್ತು ಮೂವರು ಸೇನಾ ಸಿಬ್ಬಂದಿ ಇದ್ದರು. ಮಲವಿಯನ್ ಸಶಸ್ತ್ರ ಪಡೆ ನಿರ್ವಹಿಸುವ ಸಣ್ಣ, ಪ್ರೊಪೆಲ್ಲರ್ ಚಾಲಿತ ವಿಮಾನವು ಡಾರ್ನಿಯರ್ 228 ಮಾದರಿಯದು. 1988 ರಲ್ಲಿ ಮಲಾವಿಯನ್ ಸೈನ್ಯಕ್ಕೆ ವಿತರಿಸಲಾಯಿತು ಎಂದು ಸಿಎಚ್‌ ಏವಿಯೇಷನ್ ವೆಬ್‌ಸೈಟ್ ಹೇಳಿದೆ. ಸುಮಾರು 600 ಸಿಬ್ಬಂದಿ ಮುಝು ಬಳಿಯ ವಿಫ್ಯಾ ಪರ್ವತಗಳಲ್ಲಿನ ವಿಶಾಲ ಅರಣ್ಯದಲ್ಲಿ ಹುಡುಕಾಟ ನಡೆಸಿದರು.

ಚಿಲಿಮಾ ಅವರು ತಮ್ಮ ಎರಡನೇ ಅವಧಿಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಮಾಜಿ ಅಧ್ಯಕ್ಷ ಪೀಟರ್ ಮುತಾರಿಕಾ ಅವರೊಟ್ಟಿಗೆ ಮೊದಲ ಅವಧಿ(2014-2019). 2019 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಅವರು ಮುತಾರಿಕಾ ಮತ್ತು ಚಕ್ವೇರಾ ಅವರ ನಂತರ ಮೂರನೇ ಸ್ಥಾನ ಪಡೆದರು. ಚುನಾವಣೆ ಅಕ್ರಮಗಳಿಂದ ನ್ಯಾಯಾಲಯ ಆಯ್ಕೆಯನ್ನು ರದ್ದುಗೊಳಿಸಿತು. 2020 ರಲ್ಲಿ ಚಕ್ವೇರಾ ಅಧ್ಯಕ್ಷರಾಗಿ ಆಯ್ಕೆಯಾದರು.

ಚಿಲಿಮಾ ಅವರು ಮಲಾವಿ ಸಶಸ್ತ್ರ ಪಡೆಗಳು ಮತ್ತು ಪೊಲೀಸರಿಗೆ ಆಯುಧ ಖರೀದಿ ಒಪ್ಪಂದ ನೀಡಲು ಹಣವನ್ನು ಪಡೆದ ಆರೋಪ ಎದುರಿಸುತ್ತಿದ್ದರು. ಕಳೆದ ತಿಂಗಳು ಫಿರ್ಯಾದಿಗಳು ಆರೋಪ ಕೈಬಿಟ್ಟು, ಪ್ರಕರಣ ವಾಪಸ್‌ ತೆಗೆದುಕೊಂಡರು.

Read More
Next Story