Israels Attack on Hezbollah | ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ- 490 ಕ್ಕೂ ಹೆಚ್ಚು ಸಾವು
x
ವಾಯು ದಾಳಿಯಿಂದ 492 ಜನ ಸಾವನ್ನಪ್ಪಿದ್ದಾರೆ ಮತ್ತು 1,645 ಜನ ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.

Israel's Attack on Hezbollah | ಲೆಬನಾನ್‌ ಮೇಲೆ ಇಸ್ರೇಲ್‌ ದಾಳಿ- 490 ಕ್ಕೂ ಹೆಚ್ಚು ಸಾವು

ಹಿಜ್ಬುಲ್ಲಾ ವಿರುದ್ಧ ವ್ಯಾಪಕ ವಾಯು ದಾಳಿ ನಡೆಯಲಿದ್ದು, ದಕ್ಷಿಣ ಮತ್ತು ಪೂರ್ವ ಲೆಬನಾನ್‌ನಲ್ಲಿರುವ ನಿವಾಸಿಗಳು ತಕ್ಷಣ ಸ್ಥಳಾಂತರಗೊಳ್ಳಬೇಕೆಂದು ಇಸ್ರೇಲಿ ಸೇನೆ ಎಚ್ಚರಿಸಿದೆ. ಸಾವಿರಾರು ಲೆಬನಾನ್‌ ನಾಗರಿಕರು ದಕ್ಷಿಣದಿಂದ ಪಲಾಯನಗೈದಿದ್ದಾರೆ.


ಹಿಜ್ಬುಲ್ಲಾ ಮೇಲೆ ಇಸ್ರೇಲ್‌ ನಡೆಸಿದ ಆಕ್ರಮಣದಿಂದ 90 ಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 490 ಕ್ಕೂ ಅಧಿಕ ಮಂದಿ ಮರಣ ಹೊಂದಿದ್ದಾರೆ ಎಂದು ಲೆಬನಾನಿನ ಅಧಿಕಾರಿಗಳು ತಿಳಿಸಿದ್ದಾರೆ. 2006 ರ ಇಸ್ರೇಲ್-ಹಿಜ್ಬುಲ್ಲಾ ಯುದ್ಧದ ನಂತರದ ಅತ್ಯಂತ ಭೀಕರ ವಾಯು ದಾಳಿ ಇದಾಗಿದೆ.

ಹಿಜ್ಬುಲ್ಲಾ ವಿರುದ್ಧ ವ್ಯಾಪಕ ವಾಯು ದಾಳಿ ನಡೆಯಲಿದ್ದು, ದಕ್ಷಿಣ ಮತ್ತು ಪೂರ್ವ ಲೆಬನಾನ್‌ನಲ್ಲಿರುವ ನಿವಾಸಿಗಳು ತಕ್ಷಣ ಸ್ಥಳಾಂತರಗೊಳ್ಳಬೇಕೆಂದು ಇಸ್ರೇಲಿ ಸೇನೆ ಎಚ್ಚರಿಸಿದೆ.

ಸಾವಿರಾರು ಲೆಬನಾನ್‌ ನಾಗರಿಕರು ದಕ್ಷಿಣದಿಂದ ಪಲಾಯನಗೈದಿದ್ದಾರೆ. 2006 ರಿಂದೀಚೆಗೆ ನಡೆದ ಅತಿ ದೊಡ್ಡ ಸ್ಥಳಾಂತರದಲ್ಲಿ ಬೈರೂತಿನತ್ತ ಸಾಗುತ್ತಿದ್ದ ಕಾರುಗಳಿಂದ ದಕ್ಷಿಣದ ಬಂದರು ನಗರವಾದ ಸಿಡಾನ್‌ನ ಮುಖ್ಯ ಹೆದ್ದಾರಿ ದಟ್ಟಣೆಯಿಂದ ಬಂದ್‌ ಆಗಿತ್ತು ಎಂದು ಎಪಿ ವರದಿ ಹೇಳಿದೆ.

ಮಕ್ಕಳು, ಮಹಿಳೆಯರ ಸಾವು: 35 ಮಕ್ಕಳು ಮತ್ತು 58 ಮಹಿಳೆಯರು ಸೇರಿದಂತೆ 492 ಜನರು ಸಾವನ್ನಪ್ಪಿದ್ದಾರೆ ಮತ್ತು 1,645 ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ.

ಇಸ್ರೇಲ್‌ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಲೆಬನಾನಿನ ನಾಗರಿಕರು ಸ್ಥಳಾಂತರಗೊಳ್ಳಬೇಕೆಂದು ಒತ್ತಾಯಿಸಿದರು; ʼಈ ಎಚ್ಚರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ. ದಯವಿಟ್ಟು ಈಗ ಮನೆಗಳಿಂದ ಹೊರಬನ್ನಿ. ನಮ್ಮ ಕಾರ್ಯಾಚರಣೆ ಮುಗಿದ ನಂತರ, ನೀವು ಸುರಕ್ಷಿತವಾಗಿ ನಿಮ್ಮ ಮನೆಗಳಿಗೆ ಹಿಂತಿರುಗಬಹುದು,ʼ ಎಂದು ಹೇಳಿದ್ದಾರೆ.

ಇಸ್ರೇಲಿನ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್‌ ಡೇನಿಯಲ್ ಹಗರಿ, ಇಸ್ರೇಲ್‌ನೊಂದಿಗಿನ ಲೆಬನಾನ್‌ನ ಗಡಿಯಿಂದ ಹಿಜ್ಬುಲ್ಲಾವನ್ನು ತಳ್ಳಲು ಸೈನ್ಯ ಅಗತ್ಯವಿರುವ ಎಲ್ಲವನ್ನೂ ಮಾಡುತ್ತದೆ ಎಂದು ಹೇಳಿದ್ದಾರೆ.

ವ್ಯಾಪಕ ಹಾನಿ: ಸೋಮವಾರದ ವ್ಯಾಪಕ ವೈಮಾನಿಕ ದಾಳಿಗಳು ಹಿಜ್ಬುಲ್ಲಾಗೆ ಭಾರೀ ಹಾನಿಯನ್ನುಂಟುಮಾಡಿದೆ. ಕಾರ್ಯಾಚರಣೆ ಯಾವಾಗ ನಡೆಯಲಿದೆ ಎಂದು ಹೇಳುವುದಿಲ್ಲ. ಅಗತ್ಯವಿದ್ದರೆ ಲೆಬನಾನ್ ಮೇಲೆ ಆಕ್ರಮಣ ಪ್ರಾರಂಭಿಸಲು ಇಸ್ರೇಲ್ ಸಿದ್ಧವಾಗಿದೆ ಎಂದು ಹಗರಿ ಹೇಳಿದರು.

ʻನಾವು ಯುದ್ಧಕ್ಕೆ ಮುಂದಾಗುತ್ತಿಲ್ಲ; ಬೆದರಿಕೆಗಳನ್ನು ನಿವಾರಿಸಲು ನೋಡುತ್ತಿದ್ದೇವೆ. ಇದನ್ನು ಸಾಧಿಸಲು ನಾವು ಏನು ಬೇಕಾದರೂ ಮಾಡುತ್ತೇವೆʼ ಎಂದು ತಿಳಿಸಿದರು.

ʻಕಳೆದ ಅಕ್ಟೋಬರ್‌ನಿಂದ ಹಿಜ್ಬುಲ್ಲಾ ಇಸ್ರೇಲ್‌ ಮೇಲೆ ಸುಮಾರು 9,000 ರಾಕೆಟ್‌ ಮತ್ತು ಡ್ರೋನ್‌ಗಳಿಂದ ದಾಳಿ ನಡೆಸಿದೆ. ಕಳೆದ ಸೋಮವಾರ 250 ರಾಕೆಟ್‌ ಬಳಸಿದೆ. ಹಿಜ್ಬುಲ್ಲಾ ದಕ್ಷಿಣ ಲೆಬನಾನ್ ಅನ್ನು ಯುದ್ಧ ವಲಯವಾಗಿ ಪರಿವರ್ತಿಸಿದೆʼ ಎಂದು ಹಗರಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಇಸ್ರೇಲ್ ಅಂದಾಜಿನ ಪ್ರಕಾರ, ಹಿಜ್ಬುಲ್ಲಾ ಸುಮಾರು 150,000 ರಾಕೆಟ್‌ ಮತ್ತು ಕ್ಷಿಪಣಿಗಳನ್ನು ಹೊಂದಿದೆ. ಇದರಲ್ಲಿ ಮಾರ್ಗದರ್ಶಿ ಕ್ಷಿಪಣಿಗಳು ಮತ್ತು ಇಸ್ರೇಲ್‌ನ ಯಾವುದೇ ಭಾಗದ ಮೇಲೆ ದಾಳಿ ಮಾಡಬಲ್ಲ ಸಾಮರ್ಥ್ಯವಿರುವ ದೀರ್ಘ ಶ್ರೇಣಿಯ ಸ್ಪೋಟಕಗಳು ಸೇರಿವೆ.

ಪ್ಯಾಲೇಸ್ಟಿನಿಯನ್ನರಿಗೆ ಬೆಂಬಲ: ಇಸ್ರೇಲಿನ ಉತ್ತರದ ಗಡಿಯಲ್ಲಿ ಲೆಬನಾನ್‌ನೊಂದಿಗೆ ಇಸ್ರೇಲ್‌ನ ಉತ್ತರದ ಗಡಿಯಲ್ಲಿ ದಿನನಿತ್ಯ ಸಣ್ಣ ಘರ್ಷಣೆ ಮತ್ತು ಚಕಮಕಿ ಸಾಮಾನ್ಯ. ಹಿಜ್ಬುಲ್ಲಾ ಪ್ರತಿದಿನ ನೂರಾರು ರಾಕೆಟ್‌ಗಳನ್ನು ಇಸ್ರೇಲ್‌ ಕಡೆಗೆ ಉಡಾಯಿಸುವುದನ್ನು ಮುಂದುವರಿಸಿದೆ. ಗಾಜಾದಲ್ಲಿ ಇಸ್ರೇಲಿನ ಕ್ರೂರ ಸೇನಾ ಕಾರ್ಯಾಚರಣೆಯಿಂದ ಬದುಕುಳಿದ ಪ್ಯಾಲೆಸ್ಟೈನ್ ಜನರೊಂದಿಗೆ ಐಕಮತ್ಯ ಹೊಂದಿದ್ದೇವೆ ಎಂದು ಗುಂಪು ಹೇಳಿದೆ.

ಜುಲೈನಲ್ಲಿ ಹಿಜ್ಬುಲ್ಲಾದ ಕಮಾಂಡರ್ ಫೌದ್ ಶು‌ಕ್ರ್‌ ನನ್ನು ಇಸ್ರೇಲ್‌ ಹತ್ಯೆ ಮಾಡಿದ್ದಕ್ಕೆ ಪ್ರತಿಯಾಗಿ ಹಿಜ್ಬುಲ್ಲಾ ರಾಕೆ‌ಟ್ ಮತ್ತು ಡ್ರೋ‌ನ್‌ ಗಳನ್ನು ಉಡಾಯಿಸಿತು. ಆನಂತರ ಲೆಬನಾನಿನಲ್ಲಿ ಸಾವಿರಾರು ಪೇಜರ್‌ಗಳು ಮತ್ತು ರೇಡಿಯೋಗಳು ಸ್ಫೋಟಗೊಂಡಿದ್ದು, ಹಿಜ್ಬುಲ್ಲಾ ಭಾನುವಾರ 100 ಕ್ಕೂ ಹೆಚ್ಚು ರಾಕೆಟ್‌ಗಳನ್ನು ಉಡಾಯಿಸಿತು. ಲೆಬನಾನ್ ಪೇಜರ್‌ ಸ್ಪೋಟಕ್ಕೆ ಇಸ್ರೇಲ್ ಮತ್ತು ಅದರ ಬೇಹುಗಾರಿಕಾ ಸಂಸ್ಥೆ ಮೊಸಾದ್ ಅನ್ನು ದೂಷಿಸಿದೆ.

ಹಿಜ್ಬುಲ್ಲಾದ ದಾಳಿ‌ ತಡೆಯಲು ರಾಜತಾಂತ್ರಿಕ ಪ್ರಯತ್ನಗಳು ವಿಫಲವಾಗುತ್ತಿವೆ. ಉತ್ತರದ ಗಡಿಗಳಲ್ಲಿನ ದಾಳಿಯನ್ನು ನಿಲ್ಲಿಸಲು ಮತ್ತು ನಾಗರಿಕರು ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗುವಂತೆ ಮಾಡಲು ಯುದ್ಧ ಏಕೈಕ ಮಾರ್ಗ ಎಂದು ಇಸ್ರೇಲ್ ಹೇಳಿದೆ.

Read More
Next Story