ಬಂಧಿತ ಆರೋಪಿ ಲಾಜರ್ ಮಾಸಿಹ್​.
x

ಪಾಕಿಸ್ತಾನದ ಐಎಸ್ಐ ಜೊತೆ ನಂಟು ಹೊಂದಿದ್ದ ಖಲಿಸ್ತಾನಿ ಉಗ್ರನ ಬಂಧನ

ಪಂಜಾಬ್​​ನ ಅಮೃತಸರದ ನಿವಾಸಿ ಲಾಜರ್ ಮಾಸಿಹ್ ಬಂಧಿತ ಉಗ್ರ. ಗುರುವಾರ ಮುಂಜಾನೆ (ಮುಂಜಾನೆ 3.20 ರ ಸುಮಾರಿಗೆ) ಆತನನ್ನು ಸೆರೆ ಹಿಡಿಯಲಾಗಿದೆ.


ನವದೆಹಲಿ: ಪಾಕಿಸ್ತಾನದ ಐಎಸ್ಐನೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಬಬ್ಬರ್ ಖಾಲ್ಸಾ ಇಂಟರ್​ನ್ಯಾಷನಲ್​ (ಬಿಕೆಐ) ನ ಸಕ್ರಿಯ ಭಯೋತ್ಪಾದಕನೊಬ್ಬನನ್ನು ಪಂಜಾಬ್ ಪೊಲೀಸ್ ತಂಡ ಮತ್ತು ಉತ್ತರ ಪ್ರದೇಶ ವಿಶೇಷ ಕಾರ್ಯಪಡೆ (ಎಸ್​​ಟಿಎಫ್) ಜಂಟಿ ಕಾರ್ಯಾಚರಣೆ ನಡೆಸಿ ಗುರುವಾರ ಬಂಧಿಸಿದೆ.

ಪಂಜಾಬ್​​ನ ಅಮೃತಸರದ ನಿವಾಸಿ ಲಾಜರ್ ಮಾಸಿಹ್ ಬಂಧಿತ ಉಗ್ರ. ಗುರುವಾರ ಮುಂಜಾನೆ (ಮುಂಜಾನೆ 3.20 ರ ಸುಮಾರಿಗೆ) ಆತನನ್ನು ಸೆರೆ ಹಿಡಿಯಲಾಗಿದೆ. ಈತ ಬಿಕೆಐನ ಜರ್ಮನಿ ಘಟಕವನ್ನು ನಡೆಸುತ್ತಿರುವ ಸ್ವರ್ಣ್ ಸಿಂಗ್ ಅಲಿಯಾಸ್ ಜೀವನ್ ಫೌಜಿಗೆ ಆಪ್ತ.

ಬಂಧನದ ಸಮಯದಲ್ಲಿ, ಮೂರು ಹ್ಯಾಂಡ್ ಗ್ರೆನೇಡ್​ಗಳು, ಎರಡು ಡಿಟೋನೇಟರ್​ಗಳು, 7.62 ಎಂಎಂ ರಷ್ಯಾದ ಪಿಸ್ತೂಲ್, 13 ಲೈವ್ ಕಾರ್ಟ್ರಿಜ್​​ಗಳು ಮತ್ತು ಸ್ಫೋಟಕಗಳು ಸೇರಿದಂತೆ ಹಲವಾರು ಅಕ್ರಮ ಶಸ್ತ್ರಾಸ್ತ್ರಗಳು ಮತ್ತು ಇತರ ವಸ್ತುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಬಿಳಿ ಬಣ್ಣದ ಸ್ಫೋಟಕ ಪುಡಿ, ಗಾಜಿಯಾಬಾದ್ ವಿಳಾಸದ ಆಧಾರ್ ಕಾರ್ಡ್ ಮತ್ತು ಸಿಮ್ ಕಾರ್ಡ್ ಇಲ್ಲದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ.

"ಮಾಹಿತಿಯ ಪ್ರಕಾರ, ಬಂಧಿತ ಭಯೋತ್ಪಾದಕ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ (ಬಿಕೆಐ) ನ ಜರ್ಮನಿ ಮೂಲದ ಮಾಡ್ಯೂಲ್​​ನ ಮುಖ್ಯಸ್ಥ ಸ್ವರ್ಣ್ ಸಿಂಗ್ ಅಲಿಯಾಸ್ ಜೀವನ್ ಫೌಜಿ ಆದೇಶದಿಂದ ಕೆಲಸ ಮಾಡುತ್ತಿದ್ದ. ಪಾಕಿಸ್ತಾನ ಮೂಲದ ಐಎಸ್ಐ ಕಾರ್ಯಕರ್ತರೊಂದಿಗೆ ನೇರ ಸಂಪರ್ಕದಲ್ಲಿದ್ದ " ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಯುಪಿ ವಿಶೇಷ ಕಾರ್ಯಪಡೆ, ಕಾನೂನು ಮತ್ತು ಸುವ್ಯವಸ್ಥೆ) ಅಮಿತಾಬ್ ಯಶ್ ಹೇಳಿದ್ದಾರೆ.

"ಈ ಭಯೋತ್ಪಾದಕ ಸೆಪ್ಟೆಂಬರ್ 24, 2024 ರಂದು ಪಂಜಾಬ್​​ನಿಂದ ನ್ಯಾಯಾಂಗ ಬಂಧನದಿಂದ ತಪ್ಪಿಸಿಕೊಂಡಿದ್ದಾನೆ" ಎಂದು ಎಡಿಜಿ ಹೇಳಿದರು.

Read More
Next Story