
ಇಸ್ರೇಲ್ನ ಗುಪ್ತ ಪರಮಾಣು ಕಾರ್ಯಾಚರಣೆ: ಅಸ್ಪಷ್ಟತೆಯ ಹಿಂದಿನ ಅಚ್ಚರಿ ಸತ್ಯ
ಅಸ್ಪಷ್ಟತೆ ಎಂದರೆ 'ಹೌದು' ಅಥವಾ 'ಅಲ್ಲ' ಎಂದು ಸ್ಪಷ್ಟವಾಗಿ ಹೇಳದಿರುವುದು. ಇಸ್ರೇಲ್ ತನ್ನ ಪರಮಾಣು ಸ್ಥಿತಿಯನ್ನು ನಿರ್ವಹಿಸುವ ವಿಧಾನವೇ ಇದು. ಎಂದಿಗೂ ಒಪ್ಪಿಕೊಳ್ಳದೆ, ಎಂದಿಗೂ ತಿರಸ್ಕರಿಸದೆ ಟೀಕಾಕಾರರು ಮತ್ತು ಶತ್ರುಗಳನ್ನು ಗೊಂದಲದಲ್ಲಿಡುತ್ತಿದೆ.
ಇಸ್ರೇಲ್ನ ಪರಮಾಣು ಶಕ್ತಿ ದಶಕಗಳಿಂದಲೂ 'ಮುಕ್ತ ರಹಸ್ಯ'ವಾಗಿದೆ. ಇರಾನ್ನ ಪರಮಾಣು ತಾಣಗಳ ಮೇಲೆ ಆ ದೇಶ ನಿರಂತರ ದಾಳಿ ನಡೆಸಿದರೂ, ತನ್ನ ಬಳಿ ಎಷ್ಟು ಪರಮಾಣು ಬಾಂಬುಗಳಿವೆ ಎಂಬುದನ್ನು ಇದುವರೆಗೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಈ ಅಸ್ಪಷ್ಟ ನೀತಿ (Nuclear Ambiguity) ಇಸ್ರೇಲ್ಗೆ ಅಂತರರಾಷ್ಟ್ರೀಯ ಪರಿಶೀಲನೆಯಿಂದ ವಿನಾಯಿತಿ ನೀಡಿದೆಯೇ ಎಂಬುದು ಪ್ರಸ್ತುತ ಪ್ರಶ್ನೆ, ಹಿರಿಯ ಪತ್ರಕರ್ತ ದಕ್ಷಿಣಾಮೂರ್ತಿಯವರ 'ವರ್ಲ್ಡ್ಲಿ ವೈಸ್' ಚರ್ಚೆಯಲ್ಲಿ ಇಸ್ರೇಲ್ನ ಈ ದೀರ್ಘಕಾಲಿಕ ಪರಮಾಣು ನೀತಿ, ಅದರ ರಾಜಕೀಯ ಪರಿಣಾಮಗಳು ಮತ್ತು ಹೆಚ್ಚುತ್ತಿರುವ ಪ್ರಾದೇಶಿಕ ಒತ್ತಡಗಳನ್ನು ವಿಶ್ಲೇಷಿಸಲಾಗಿದೆ.
ಅಸ್ಪಷ್ಟತೆ ಎಂದರೆ 'ಹೌದು' ಅಥವಾ 'ಅಲ್ಲ' ಎಂದು ಸ್ಪಷ್ಟವಾಗಿ ಹೇಳದಿರುವುದು. ಇಸ್ರೇಲ್ ತನ್ನ ಪರಮಾಣು ಸ್ಥಿತಿಯನ್ನು ನಿರ್ವಹಿಸುವ ವಿಧಾನವೇ ಇದು. ಎಂದಿಗೂ ಒಪ್ಪಿಕೊಳ್ಳದೆ, ಎಂದಿಗೂ ತಿರಸ್ಕರಿಸದೆ ಟೀಕಾಕಾರರು ಮತ್ತು ಶತ್ರುಗಳನ್ನು ಗೊಂದಲದಲ್ಲಿಡುವ ಉದ್ದೇಶಪೂರ್ವಕ ನಿಲುವು ಅದು. ಇಸ್ರೇಲ್ ಪರಮಾಣು ವಿರೋಧಿ ಒಪ್ಪಂದಕ್ಕೆ (NPT) ಸಹಿ ಹಾಕಿಲ್ಲ. ಅಷ್ಟೇ ಅಲ್ಲದೆ, ಅಂತರರಾಷ್ಟ್ರೀಯ ಮೇಲ್ವಿಚಾರಣೆಗೆ ನಿರಂತರ ವಿರೋಧಿಸುತ್ತಿವೆ. .
ಒಪ್ಪಿಕೊಳ್ಳದ ಪರಮಾಣು ಶಕ್ತಿ
ಇರಾನ್ನ ಪರಮಾಣು ತಾಣಗಳ ಮೇಲೆ ಇಸ್ರೇಲ್ ದಾಳಿ ನಡೆಸುತ್ತಲೇ ಇದ್ದರೂ, 1960ರ ದಶಕದಿಂದಲೇ ತನ್ನ ಬಳಿ ಪರಮಾಣು ಶಸ್ತ್ರಾಸ್ತ್ರಗಳಿವೆ ಎಂದು ಯಾವ ಇಸ್ರೇಲಿ ಸರ್ಕಾರವೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಆದರೆ, ಸ್ವೀಡಿಶ್ ಶಾಂತಿ ಸಂಶೋಧನಾ ಸಂಸ್ಥೆಯ (SIPRI) ಸ್ವತಂತ್ರ ಅಂದಾಜಿನ ಪ್ರಕಾರ, ಇಸ್ರೇಲ್ ಸುಮಾರು 90 ಪರಮಾಣು ಸಿಡಿತಲೆಗಳನ್ನು ಹೊಂದಿದೆ. ಇವುಗಳನ್ನು ವಿಮಾನ, ಕ್ಷಿಪಣಿಗಳು ಮತ್ತು ಜಲಾಂತರ್ಗಾಮಿ ನೌಕೆಗಳ ಮೂಲಕ ಉಡಾಯಿಸಬಹುದಾಗಿದೆ.
ಪಶ್ಚಿಮ ರಾಷ್ಟ್ರಗಳ ಮೌನ ಯಾಕೆ?
ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ದಶಕಗಳಿಂದಲೂ ಇಸ್ರೇಲ್ನ ಪರಮಾಣು ಕಾರ್ಯಕ್ರಮದ ಬಗ್ಗೆ ಜಾಣ ಕುರುಡು ಪ್ರದರ್ಶಿಸುತ್ತಿವೆ. ಇತ್ತೀಚೆಗೆ ಕತಾರ್, ಇಸ್ರೇಲಿ ಸೌಲಭ್ಯಗಳ ಮೇಲೆ IAEA (ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ) ಮೇಲ್ವಿಚಾರಣೆ ಮಾಡಬೇಕು ಎಂದು ಒತ್ತಾಯಿಸಿದಾಗ, ಆ ಬೇಡಿಕೆಯನ್ನು ಸಾರಾಸಗಟು ತಿರಸ್ಕರಿಸಲಾಯಿತು. ಐತಿಹಾಸಿಕ ವಿವೇಚನೆ, ತಂತ್ರಜ್ಞಾನ ಸಹಯೋಗ ಮತ್ತು ಶೀತಲ ಸಮರದ ಕಾಲದ ರಾಜಕೀಯಗಳು. ಇರಾನ್ನಂತಹ ದೇಶಗಳಿಗಿಂತ ಭಿನ್ನವಾಗಿ ಇಸ್ರೇಲ್ಗೆ 'ಅದೃಷ್ಟದ ಅವಕಾಶ'ವನ್ನು ನೀಡಿ, ಜವಾಬ್ದಾರಿಯಿಂದ ನುಣುಚಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.
ದ್ವಂದ್ವ ನೀತಿಯ ಕುರಿತು ವಾದ
ಮಧ್ಯಪ್ರಾಚ್ಯದ ಇಸ್ರೇಲ್ ವಿರೋಧಿಗಳು ಈ ದ್ವಂದ್ವ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ. ಇಸ್ರೇಲ್ಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಹಕ್ಕಿದ್ದರೆ, ಇತರ ದೇಶಗಳು ಅವುಗಳನ್ನು ಅಭಿವೃದ್ಧಿಪಡಿಸಲು ಏಕೆ ಪ್ರಯತ್ನಿಸಬಾರದು ಎಂಬ ಪ್ರಶ್ನೆ ಮೂಡುತ್ತದೆ. ಇದು ಇರಾನ್ ಸೇರಿದಂತೆ ಹಲವು ದೇಶಗಳಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಡಿಮೋನಾ. ಇಸ್ರೇಲ್ ಕಾರ್ಯಕ್ರಮದ ಹುಟ್ಟು
ಇಸ್ರೇಲ್ನ ಪರಮಾಣು ಪ್ರಯಾಣ 1950 ರ ದಶಕದಲ್ಲಿ ಫ್ರಾನ್ಸ್ನ ಸಹಾಯದಿಂದ ನೆಗೆವ್ ಮರುಭೂಮಿಯ ಡಿಮೋನಾದಲ್ಲಿ ಆರಂಭವಾಯಿತು. 1960ರ ದಶಕದಲ್ಲಿ ಅಮೆರಿಕ ಇದನ್ನು ಗುರುತಿಸಿದರೂ ಮೌನಕ್ಕೆ ಶರಣಾಯಿತು. ಅದಾಗ್ಯ, ಇಸ್ರೇಲ್ , "ನಾವು ಈ ಪ್ರದೇಶದಲ್ಲಿ ಪರಮಾಣು ಶಸ್ತ್ರಾಸ್ತ್ರಗಳನ್ನು ಮೊದಲು ಪರಿಚಯಿಸುವವರಲ್ಲ" ಎಂದು ಹೇಳುತ್ತಾ ಬಂದಿದೆ.
ಸತ್ಯವನ್ನು ಹೊರಹಾಕಿದ ಮೊರ್ಡೆಚೈ ವನುನು
ಇಸ್ರೇಲ್ನ ಪರಮಾಣು ಕಾರ್ಯಕ್ರಮದ ಮೊದಲ ಸ್ಪಷ್ಟ ಪುರಾವೆ 1986ರಲ್ಲಿ ದೊರೆಯಿತು. ಮೊರ್ಡೆಚೈ ವನುನು ಎಂಬ ಗುಪ್ತಚರ ಅಧಿಕಾರಿ 'ಸಂಡೇ ಟೈಮ್ಸ್' ಪತ್ರಿಕೆಗೆ ಡಿಮೋನಾ ಸೌಲಭ್ಯದ ಫೋಟೋಗಳು ಮತ್ತು ದಾಖಲೆಗಳನ್ನು ಸೋರಿಕೆ ಮಾಡಿದರು. ಇದರ ಪರಿಣಾಮವಾಗಿ, ಮೊಸಾದ್ ಅವರನ್ನು ಅಪಹರಿಸಿ, 18 ವರ್ಷಗಳ ಜೈಲು ಶಿಕ್ಷೆಗೆ ಗುರಿಪಡಿಸಿತು. ಬಿಡುಗಡೆಯಾದ ನಂತರವೂ ಅವರಿಗೆ ಪತ್ರಿಕೆಗಳೊಂದಿಗೆ ಮಾತನಾಡಲು ನಿಷೇಧ ಹೇರಲಾಗಿದೆ.
ನಿರಾಕರಣೆ, ತಡೆಗಟ್ಟುವ ನೀತಿಗಳು
ಇಸ್ರೇಲ್ನ ಅನಧಿಕೃತ ಮಿಲಿಟರಿ ನೀತಿಗಳು ಬೆಗಿನ್ ಡಾಕ್ಟ್ರಿನ್ ಮತ್ತು ಸ್ಯಾಮ್ಸನ್ ಆಪ್ಷನ್ ಅದರ ಸೇನಾ ನಿಲುವನ್ನು ಪ್ರತಿಬಿಂಬಿಸುತ್ತವೆ. 1981ರಲ್ಲಿ ಇರಾಕ್ನ ಓಸಿರಾಕ್ ರಿಯಾಕ್ಟರ್ನ ನಾಶದಿಂದ ಹಿಡಿದು 2007 ರಲ್ಲಿ ಸಿರಿಯಾದ ಅಲ್-ಕಿಬಾರ್ ಸೌಲಭ್ಯದವರೆಗೂ, ಇಸ್ರೇಲ್ ಪ್ರದೇಶದಲ್ಲಿ ಯಾವುದೇ ಶತ್ರು ರಾಷ್ಟ್ರ ಪರಮಾಣು ಸಾಮರ್ಥ್ಯವನ್ನು ಗಳಿಸುವುದನ್ನು ತಡೆದಿದೆ.
ಸೈಬರ್ ಯುದ್ಧ, ಹತ್ಯೆಗಳ ತಂತ್ರ
ಇರಾನ್ನ ಪರಮಾಣು ಸೌಲಭ್ಯಗಳು ಹೆಚ್ಚು ಸುರಕ್ಷಿತವಾದಾಗ, ಇಸ್ರೇಲ್ ತನ್ನ ತಂತ್ರ ಬದಲಾಯಿಸಿತು. 2010ರಲ್ಲಿ ಅಮೆರಿಕದ ಸಹಯೋಗದೊಂದಿಗೆ ಸ್ಟಕ್ಸ್ನೆಟ್ ಮಾಲ್ವೇರ್ ಬಳಸಿ ನತಾಂಜ್ನಲ್ಲಿರುವ ಸೆಂಟ್ರಿಫ್ಯೂಜ್ಗಳಿಗೆ ಹಾನಿ ಮಾಡಿತು. 2020ರಲ್ಲಿ ಇರಾನ್ನ ಪ್ರಮುಖ ಪರಮಾಣು ವಿಜ್ಞಾನಿ ಮೊಹ್ಸೆನ್ ಫಖ್ರಿಜಾದೆಹ್ ಹತ್ಯೆಯಾದರು. ಇತ್ತೀಚಿನ ದಿನಗಳಲ್ಲಿ, ಇರಾನ್ನೊಳಗೆ (sabotage) ಮತ್ತು ಬಾಂಬ್ ಸ್ಫೋಟಗಳು ಮುಂದುವರಿದಿದೆ.
ಇಸ್ರೇಲ್ನ ಪರಮಾಣು ಸ್ಥಿತಿಯ ಮೌನವು ಅದರ ಪರಿಣಾಮವನ್ನು ಕಡಿಮೆ ಮಾಡುವುದಿಲ್ಲ. ಪಶ್ಚಿಮದ ಬೆಂಬಲ ಮತ್ತು ಕಠಿಣ ಪ್ರತಿಬಂಧಕ ಕ್ರಮಗಳಿಂದ ಬೆಂಬಲಿತವಾಗಿರುವ ಈ ದೇಶದ ಅನನ್ಯ ನಿಲುವು ಮಧ್ಯಪ್ರಾಚ್ಯದ ಶಕ್ತಿ ಸಮತೋಲನವನ್ನು ರೂಪಿಸುತ್ತಲೇ ಇದೆ. ಆದರೆ ಇದು ನ್ಯಾಯ, ಜವಾಬ್ದಾರಿ ಮತ್ತು ಪರಮಾಣು ಯುಗದ ಭವಿಷ್ಯದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.