ಮಧ್ಯಪ್ರಾಚ್ಯ ಬಿಕ್ಕಟ್ಟು | ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ
x

ಮಧ್ಯಪ್ರಾಚ್ಯ ಬಿಕ್ಕಟ್ಟು | ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ

ಮಧ್ಯಪ್ರಾಚ್ಯದಲ್ಲಿ ಯುದ್ಧ ಉಲ್ಬಣಗೊಳ್ಳುವ ಆತಂಕ ಮೂಡಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗಾಜಾದಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ವಿರುದ್ಧ ಇಸ್ರೇಲ್‌ ಸಂಘರ್ಷ ಆರಂಭಗೊಂಡ ನಂತರ ನಡೆದ ತೀವ್ರ ವೈಮಾನಿಕ ದಾಳಿ ಇದಾಗಿದೆ ಎಂದು ಹೇಳಲಾಗಿದೆ.


ದಕ್ಷಿಣ ಲೆಬನಾನ್‌ನ ಹಿಜ್ಬುಲ್ಲಾ ಭದ್ರಕೋಟೆಗಳಲ್ಲಿ ಸರಣಿ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಹೇಳಿಕೊಂಡಿದೆ.

ಇದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ಉಲ್ಬಣಗೊಳ್ಳುವ ಆತಂಕ ಮೂಡಿದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗಾಜಾದಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾದೊಂದಿಗೆ ಇಸ್ರೇಲ್‌ನ ಘರ್ಷಣೆ ಆರಂಭಗೊಂಡ ನಂತರ ನಡೆದ ತೀವ್ರ ವೈಮಾನಿಕ ದಾಳಿ ಇದಾಗಿದೆ ಎಂದು ಹೇಳಲಾಗಿದೆ.

ರಾಕೆಟ್ ಲಾಂಚರ್‌ ನಾಶ: ಇಸ್ರೇಲಿನ ರಕ್ಷಣಾ ಪಡೆ (ಐಡಿಎಫ್)ಗಳು ‌ಕನಿಷ್ಠ 100 ರಾಕೆಟ್ ಲಾಂಚರ್‌ಗಳನ್ನು ನಾಶಪಡಿಸಿವೆ.ʻಐಡಿಎಫ್ ಗುಪ್ತಚರ ಮಾಹಿತಿ ಆಧರಿಸಿ, ಸುಮಾರು 30 ಲಾಂಚರ್‌ಗಳು ಮತ್ತು ಭಯೋತ್ಪಾದಕ ಮೂಲಸೌಕರ್ಯ ತಾಣಗಳನ್ನು ನಾಶಪಡಿಸಿದೆ. ದಕ್ಷಿಣ ಲೆಬನಾನಿನ ಅನೇಕ ಪ್ರದೇಶಗಳಲ್ಲಿ ಹಿಜ್ಬುಲ್ಲಾಗಳ ಮೂಲಸೌಕರ್ಯ ಮತ್ತು ಶಸ್ತ್ರಾಸ್ತ್ರ ಸಂಗ್ರಹ ಸೌಲಭ್ಯವನ್ನು ನಾಶಪಡಿಸಲಾಗಿದೆ,ʼ ಎಂದು ಎಕ್ಸ್‌ನ ಪೋಸ್ಟ್‌ನಲ್ಲಿ ಗುರುವಾರ (ಸೆಪ್ಟೆಂಬರ್ 19)ತಿಳಿಸಿದೆ.

ʻಹಿಜ್ಬುಲ್ಲಾ ಉಗ್ರರು ನಾಗರಿಕರ ಮನೆಗಳನ್ನು ಶಸ್ತ್ರಸಜ್ಜಿತಗೊಳಿಸಿದ್ದು, ಸುರಂಗಗಳನ್ನು ತೋಡಿದ್ದಾರೆ ಮತ್ತು ನಾಗರಿಕರನ್ನು ಮಾನವ ಗುರಾಣಿಗಳಂತೆ ಬಳಸಿದ್ದಾರೆ. ನಾಗರಿಕರು ಮನೆಗಳಿಗೆ ಮರಳುವಂತೆ ಮಾಡಲು ಮತ್ತು ಉತ್ತರ ಇಸ್ರೇಲಿನ ಭದ್ರತೆಗೆ ಐಡಿಎಫ್‌ ಕಾರ್ಯ ನಿರ್ವಹಿಸುತ್ತಿದೆ,ʼ ಎಂದು ಐಡಿಎಫ್‌ ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದೆ.

ಯುದ್ಧದ ಹೊಸ ಘಟ್ಟ: ಲೆಬನಾನಿನ ನ್ಯಾಷನಲ್ ನ್ಯೂಸ್ ಏಜೆನ್ಸಿ ಪ್ರಕಾರ, ಜೆಝೈನ್ ಪ್ರದೇಶದಲ್ಲಿ ಮಹಮೂದಿಹ್, ಕ್ಸಾರ್ ಅಲ್-ಅರೌಶ್ ಮತ್ತು ಬಿರ್ಕೆಟ್ ಜಬ್ಬೂರ್ ಪಟ್ಟಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ.

ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್, ಲೆಬನಾನಿನೊಂದಿಗಿನ ತನ್ನ ಗಡಿಯನ್ನು ಭದ್ರಪಡಿಸಿಕೊಳ್ಳಲು ಇಸ್ರೇಲ್‌ ಪ್ರಯತ್ನಿಸುತ್ತಿ ರುವುದರಿಂದ, ಹಿಜ್ಬುಲ್ಲಾ ಹೆಚ್ಚು ಬೆಲೆ ಪಾವತಿಸಬೇಕಾಗುತ್ತದೆ. ಇಸ್ರೇಲ್ ಯುದ್ಧದ ಹೊಸ ಘಟ್ಟವನ್ನು ಪ್ರವೇಶಿಸುತ್ತಿದೆ. ಗಾಜಾದ ಸುತ್ತ ಕೇಂದ್ರೀಕೃತವಾಗಿರುವ ಕದನ ಲೆಬನಾನಿನ ಉತ್ತರದ ಗಡಿಗೆ ವಿಸ್ತರಿಸುವುದಿಲ್ಲ ಎಂದು ಹೇಳಿದರು.

ಹಿಜ್ಬುಲ್ಲಾ ಎಚ್ಚರಿಕೆ: ಲೆಬನಾನ್ ಮತ್ತು ಸಿರಿಯಾದಲ್ಲಿ ಸಾವಿರಾರು ಪೇಜರ್‌ಗಳು ಮತ್ತು ವಾಕಿಟಾಕಿಗಳು ಏಕಕಾಲದಲ್ಲಿ ಸ್ಫೋಟಗೊಂಡು ಕನಿಷ್ಠ 35 ಜನರು ಸಾವನ್ನಪ್ಪಿದ್ದಾರೆ ಮತ್ತು 3,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಸ್ಫೋಟಕ್ಕೆ ಇಸ್ರೇಲನ್ನು ದೂಷಿಸಿರುವ ಹಿಜ್ಬುಲ್ಲಾ, ಸೇಡು ತೀರಿಸಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ.

ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ, ಇಸ್ರೇಲ್ ಎಲ್ಲಾ ಮಿತಿಗಳನ್ನು ದಾಟಿದೆ. ಇಸ್ರೇಲ್‌ ನಿರೀಕ್ಷಿಸಿದ ಹಾಗೂ ನಿರೀಕ್ಷಿಸದ ಕಡೆ ಹಿಜ್ಬುಲ್ಲಾ ಹೊಡೆಯಲಿದೆ ಎಂದು ಗುರುವಾರ ಹೇಳಿದರು. .

Read More
Next Story