64 ಅಪಾರ್ಟ್‌ಮೆಂಟ್‌ಗಳಲ್ಲಿ ಉಚಿತ ವಸತಿ- ದುಬೈನಲ್ಲಿ ಸಿಲುಕಿರುವ ಭಾರತೀಯರಿಗೆ ಉದ್ಯಮಿಗಳ ಆ‍ಶ್ರಯ
x
ದುಬೈನಲ್ಲಿ ಸಿಲುಕಿರುವ ಭಾರತೀಯರಿಗೆ ಉದ್ಯಮಿಗಳ ನೆರವು

64 ಅಪಾರ್ಟ್‌ಮೆಂಟ್‌ಗಳಲ್ಲಿ ಉಚಿತ ವಸತಿ- ದುಬೈನಲ್ಲಿ ಸಿಲುಕಿರುವ ಭಾರತೀಯರಿಗೆ ಉದ್ಯಮಿಗಳ ಆ‍ಶ್ರಯ

Middle east War| ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆ ದುಬೈನಲ್ಲಿ ಸಿಲುಕಿರುವ ಭಾರತೀಯರಿಗೆ ಉದ್ಯಮಿಗಳಾದ ಯೋಗೇಶ್ ದೋಷಿ ಮತ್ತು ಧೀರಜ್ ಜೈನ್ ಉಚಿತ ವಸತಿ ಹಾಗೂ ಆಹಾರ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.


Click the Play button to hear this message in audio format

ಇಸ್ರೇಲ್-ಇರಾನ್ ಯುದ್ಧದ ಪರಿಣಾಮವಾಗಿ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಸಾವಿರಾರು ಭಾರತೀಯ ಪ್ರಜೆಗಳು ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ವಿಮಾನಯಾನ ವ್ಯತ್ಯಯ ಮತ್ತು ಹೋಟೆಲ್ ಬುಕಿಂಗ್ ಮುಕ್ತಾಯದಿಂದ ಕಂಗಾಲಾಗಿದ್ದ ಭಾರತೀಯರಿಗೆ ದುಬೈ ಮೂಲದ ಉದ್ಯಮಿಗಳು ಉಚಿತ ವಸತಿ ಮತ್ತು ಆಹಾರ ನೀಡುವ ಮೂಲಕ ನೆರವಾಗುತ್ತಿದ್ದಾರೆ.

64 ಅಪಾರ್ಟ್‌ಮೆಂಟ್‌ಗಳಲ್ಲಿ ವಸತಿ

ಅಲ್ ಮಿಜಾನ್ ಗ್ರೂಪ್‌ನ ಅಧ್ಯಕ್ಷರಾದ ಯೋಗೇಶ್ ದೋಷಿ ಅವರು ದುಬೈನಲ್ಲಿರುವ ತಮ್ಮ ಸಂಪೂರ್ಣ ವಸತಿ ಸಂಕೀರ್ಣವನ್ನೇ ಸಂಕಷ್ಟದಲ್ಲಿರುವ ಭಾರತೀಯರಿಗೆ ಮೀಸಲಿಟ್ಟಿದ್ದಾರೆ. ತಮ್ಮ 64 ಅಪಾರ್ಟ್‌ಮೆಂಟ್‌ಗಳನ್ನು ಭಾರತೀಯರಿಗಾಗಿ ತೆರೆದಿಟ್ಟಿದ್ದು, ಇಲ್ಲಿ ವಸತಿ ಮಾತ್ರವಲ್ಲದೆ ಆಹಾರದ ವ್ಯವಸ್ಥೆಯನ್ನೂ ಉಚಿತವಾಗಿ ಕಲ್ಪಿಸಲಾಗಿದೆ.

ಭಾರತೀಯ ಕಾನ್ಸುಲೇಟ್ ಮತ್ತು 'ಇಂಡಿಯನ್ ಪೀಪಲ್ಸ್ ಫೋರಮ್ ಯುಎಇ' ಸಹಯೋಗದೊಂದಿಗೆ ಈ ಕಾರ್ಯ ನಡೆಯುತ್ತಿದ್ದು, ಈಗಾಗಲೇ ಮಕ್ಕಳು ಮತ್ತು ಕುಟುಂಬಗಳು ಸೇರಿದಂತೆ 125ಕ್ಕೂ ಹೆಚ್ಚು ಭಾರತೀಯರಿಗೆ ತಾತ್ಕಾಲಿಕ ಆಸರೆ ನೀಡಲಾಗಿದೆ.

ಫಾರ್ಮ್‌ಹೌಸ್ ಅನ್ನೇ ಆಶ್ರಯ ತಾಣವಾಗಿಸಿದ ಧೀರಜ್ ಜೈನ್

ದುಬೈ ಸಮೀಪದ ಅಜ್ಮಾನ್‌ನಲ್ಲಿರುವ ಮತ್ತೊಬ್ಬ ಉದ್ಯಮಿ ಧೀರಜ್ ಜೈನ್ ಅವರು ತಮ್ಮ ಬೃಹತ್ ಫಾರ್ಮ್‌ಹೌಸ್ ಅನ್ನು ಸಂಕಷ್ಟಕ್ಕೊಳಗಾದ ಪ್ರಯಾಣಿಕರಿಗೆ ಆಶ್ರಯ ತಾಣವನ್ನಾಗಿ ಬದಲಿಸಿದ್ದಾರೆ. ಹೋಟೆಲ್‌ಗಳಲ್ಲಿ ಸಿಲುಕಿರುವ ಅಥವಾ ದಾರಿ ಕಾಣದೆ ಅಲೆಯುತ್ತಿರುವ ಪ್ರಯಾಣಿಕರನ್ನು ಕರೆತರಲು ಧೀರಜ್ ಅವರು ತಮ್ಮ 11 ಕಾರುಗಳನ್ನು ಬಳಸುತ್ತಿದ್ದಾರೆ. ವಿಶೇಷವೆಂದರೆ ಇವುಗಳಲ್ಲಿ 6 ರೋಲ್ಸ್ ರಾಯ್ಸ್ (Rolls-Royce) ಕಾರುಗಳೂ ಸೇರಿವೆ. ಹಣ ಅಥವಾ ಉಳಿದುಕೊಳ್ಳಲು ಜಾಗವಿಲ್ಲದ ಪ್ರವಾಸಿಗರಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಇಲ್ಲಿ ಮಾಡಲಾಗಿದೆ.

ಸಂಕಷ್ಟದ ಸಮಯದ ಬಗ್ಗೆ ಪ್ರವಾಸಿಗರ ಮಾತು

"ನಮ್ಮ ಹೋಟೆಲ್ ಬುಕಿಂಗ್ ಮುಗಿದಿತ್ತು, ಮುಂದೆ ಎಲ್ಲಿಗೆ ಹೋಗಬೇಕೆಂದು ತಿಳಿಯದೆ ಆತಂಕದಲ್ಲಿದ್ದೆವು. ಮೊಬೈಲ್‌ನಲ್ಲಿ ನಿರಂತರವಾಗಿ ಯುದ್ಧದ ಭದ್ರತಾ ಎಚ್ಚರಿಕೆಗಳು ಬರುತ್ತಿದ್ದವು. ಇಂತಹ ಕಷ್ಟದ ಸಮಯದಲ್ಲಿ ಈ ಉದ್ಯಮಿಗಳು ನೀಡಿದ ನೆರವು ನಮಗೆ ದೊಡ್ಡ ಸಮಾಧಾನ ನೀಡಿದೆ," ಎಂದು ಮೋಹಿತ್ ವಚಾನಿ ಮತ್ತು ರಿಯಾ ಮಕಾಡಿಯಾ ಅವರ ತಂಡ ತಿಳಿಸಿದೆ.

ಯುದ್ಧದ ಹಿನ್ನೆಲೆ

ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಿದ ನಂತರ ಮಧ್ಯಪ್ರಾಚ್ಯದಲ್ಲಿ ಯುದ್ಧ ಆರಂಭವಾಯಿತು. ಅಂದಿನಿಂದ ಇರಾನ್ ಮತ್ತು ಇಸ್ರೇಲ್ ಪರಸ್ಪರ ದಾಳಿ ನಡೆಸುತ್ತಿದ್ದು, ಗಲ್ಫ್ ರಾಷ್ಟ್ರಗಳಲ್ಲಿನ ಮಿಲಿಟರಿ ನೆಲೆಗಳ ಮೇಲೂ ದಾಳಿಗಳು ನಡೆಯುತ್ತಿವೆ.

Read More
Next Story