ಅಮೆರಿಕದ ಹಡಗುಗಳ ಮೇಲೆ ಇರಾನ್ ಡ್ರೋನ್ ದಾಳಿ: ಹದಗೆಟ್ಟ ಕದನ ವಿರಾಮ
x

ಅಮೆರಿಕದ ಈ ನಡೆಯನ್ನು 'ಸಶಸ್ತ್ರ ಕಡಲ್ಗಳ್ಳತನ' ಎಂದು ಜರಿದಿರುವ ಇರಾನ್ ಸೇನೆಯ ಖಾತಮ್ ಅಲ್-ಅನ್ಬಿಯಾ, ಕದನ ವಿರಾಮವನ್ನು ಅಮೆರಿಕವೇ ಉಲ್ಲಂಘಿಸಿದೆ ಎಂದು ಆರೋಪಿಸಿದೆ. 

ಅಮೆರಿಕದ ಹಡಗುಗಳ ಮೇಲೆ ಇರಾನ್ ಡ್ರೋನ್ ದಾಳಿ: ಹದಗೆಟ್ಟ ಕದನ ವಿರಾಮ

ಇರಾನ್‌ನ ಬಂದರ್ ಅಬ್ಬಾಸ್ ಬಂದರಿನತ್ತ ಸಾಗುತ್ತಿದ್ದ 'ಟೌಸ್ಕಾ' ಹೆಸರಿನ ಸರಕು ಸಾಗಣೆ ಹಡಗನ್ನು ಅಮೆರಿಕದ ನೌಕಾಪಡೆ ವಶಪಡಿಸಿಕೊಂಡಿದೆ.


Click the Play button to hear this message in audio format

ಒಮನ್ ಕೊಲ್ಲಿಯಲ್ಲಿ ಅಮೆರಿಕದ ಸೇನಾ ಹಡಗುಗಳನ್ನು ಗುರಿಯಾಗಿಸಿಕೊಂಡು ಇರಾನ್ ಪಡೆಗಳು ಡ್ರೋನ್ ದಾಳಿ ನಡೆಸಿವೆ. ಹಾರ್ಮುಜ್ ಜಲಸಂಧಿಯ ಬಳಿ ಇರಾನ್‌ನ ವಾಣಿಜ್ಯ ಹಡಗೊಂದರ ಮೇಲೆ ಅಮೆರಿಕ ಗುಂಡಿನ ದಾಳಿ ನಡೆಸಿ ಅದನ್ನು ವಶಪಡಿಸಿಕೊಂಡ ಬೆನ್ನಲ್ಲೇ ಈ ಪ್ರತೀಕಾರದ ದಾಳಿ ನಡೆದಿದೆ ಎಂದು ಇರಾನ್‌ನ 'ತಸ್ನಿಮ್' ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಅನಿರೀಕ್ಷಿತ ಸೇನಾ ಸಂಘರ್ಷದಿಂದಾಗಿ ಮಧ್ಯಪ್ರಾಚ್ಯದಲ್ಲಿ ಜಾರಿಯಲ್ಲಿದ್ದ ಎರಡು ವಾರಗಳ ಕದನ ವಿರಾಮ ಮುರಿಯುವ ಆತಂಕ ಎದುರಾಗಿದೆ.

ಇರಾನ್‌ನ ಬಂದರ್ ಅಬ್ಬಾಸ್ ಬಂದರಿನತ್ತ ಸಾಗುತ್ತಿದ್ದ 'ಟೌಸ್ಕಾ' (Touska) ಹೆಸರಿನ ಸರಕು ಸಾಗಣೆ ಹಡಗನ್ನು ಅಮೆರಿಕದ ನೌಕಾಪಡೆ ವಶಪಡಿಸಿಕೊಂಡಿದೆ. ಅಮೆರಿಕ ವಿಧಿಸಿದ್ದ ನೌಕಾ ದಿಗ್ಬಂಧನವನ್ನು ಉಲ್ಲಂಘಿಸಿ ನುಗ್ಗಲು ಯತ್ನಿಸಿದ ಕಾರಣ ಹಡಗನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಅಮೆರಿಕದ ಖಜಾನೆ ಇಲಾಖೆಯ ನಿರ್ಬಂಧಕ್ಕೆ ಒಳಪಟ್ಟಿದ್ದ ಈ ಹಡಗಿನಲ್ಲಿದ್ದ ವಸ್ತುಗಳ ತಪಾಸಣೆ ನಡೆಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಮೆರಿಕದ ಈ ನಡೆಯನ್ನು 'ಸಶಸ್ತ್ರ ಕಡಲ್ಗಳ್ಳತನ' ಎಂದು ಜರಿದಿರುವ ಇರಾನ್ ಸೇನೆಯ ಖಾತಮ್ ಅಲ್-ಅನ್ಬಿಯಾ, ಕದನ ವಿರಾಮವನ್ನು ಅಮೆರಿಕವೇ ಉಲ್ಲಂಘಿಸಿದೆ ಎಂದು ಆರೋಪಿಸಿದೆ. ಚೀನಾದಿಂದ ಬರುತ್ತಿದ್ದ ಹಡಗಿನ ನ್ಯಾವಿಗೇಷನ್ ವ್ಯವಸ್ಥೆಯನ್ನು ಅಮೆರಿಕದ ಪಡೆಗಳು ಉದ್ದೇಶಪೂರ್ವಕವಾಗಿ ನಿಷ್ಕ್ರಿಯಗೊಳಿಸಿ ವಶಪಡಿಸಿಕೊಂಡಿವೆ, ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಎಚ್ಚರಿಕೆ ನೀಡಿತ್ತು.

ಈ ದಿಢೀರ್ ಬಿಕ್ಕಟ್ಟಿನಿಂದಾಗಿ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದ ಎರಡನೇ ಸುತ್ತಿನ ಶಾಂತಿ ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಇರಾನ್ ಸ್ಪಷ್ಟಪಡಿಸಿದೆ. ಒಂದು ವೇಳೆ ಅಮೆರಿಕದ ಷರತ್ತುಗಳನ್ನು ಇರಾನ್ ತಿರಸ್ಕರಿಸಿದರೆ, ಅಲ್ಲಿನ ಸೇತುವೆಗಳು ಮತ್ತು ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಪ್ರತಿಯಾಗಿ, ಅಮೆರಿಕದ ನೆಲೆಗಳಿಗೆ ಆಶ್ರಯ ನೀಡಿರುವ ಗಲ್ಫ್ ರಾಷ್ಟ್ರಗಳ ಮೂಲಸೌಕರ್ಯಗಳ ಮೇಲೆ ತಾವೂ ದಾಳಿ ಮಾಡುವುದಾಗಿ ಇರಾನ್ ಎಚ್ಚರಿಸಿದೆ.

Read More
Next Story